ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩oo ಶ್ರೀಮದ್ಭಾಗವತವು | [ಅಧ್ಯಾ, ೮೦. ++ ಕುಚೇಲೋಪಾಖ್ಯಾನವು, ww ಪರೀಕ್ಷಿದ್ರಾಜನು ತಿರುಗಿ ಪ್ರಶ್ನೆ ಮಾಡುವನು. « ಓ! ಮಹಾತ್ಮಾ ! ಶುಕಮುನೀಂದ್ರಾ ! ಅನಂತವೀರನಾದ ಶ್ರೀಕೃಷ್ಣನ ವಿಚಿತ್ರ ಚರಿತ್ರೆಗಳು ಬೇರೆಯಾವುದಾದರೂ ಇದ್ದರೆ, ಅದೆಲ್ಲವನ್ನೂ ನನಗೆ ತಿಳಿಸಬೇಕು, ಮನು ಹೈನು ವಿಷಯಾಸಕ್ತನಾಗಿ ಕಾಮಮಾರ್ಗದಲ್ಲಿಯೇ ತೊಳಲುತ್ತಿದ್ದರೂ, ರಸಜ್ಞನಾಗಿದ್ದ ಪಕ್ಷದಲ್ಲಿ, ಒಂದಾವರ್ತಿ ಆ ಭಗವಂತನ ಚರಿತ್ರೆಗಳನ್ನು ಕೇಳಿ ದಮೇಲೆ, ಬೇಸರಿಸಿ ಅದನ್ನು ಬಿಡಲಾರನು. ಆ ಭಗವಂತನ ಗುಣಕೀರ್ತನೆಗಳ ನ್ನು ಮಾಡತಕ್ಕ ವಾ ವಾಕ್ಕು! ಅವನ ಕೈಂಕಯ್ಯಗಳನ್ನು ನಡೆಸತಕ್ಕ ಹಸ್ತ ಗಳೇ ಹಸ್ತಗಳು! ಸಕಲಚರಾಚರಾತ್ಮಕನಾದ ಆ ಭಗವಂತನನ್ನು ಧ್ಯಾನಿಸ ತಕ್ಕ ಮನಸ್ಸೇ ಮನಸ್ಸು ! ಆತನ ಪುಣ್ಯಕಥೆಗಳನ್ನು ಕೇಳತಕ್ಕ ಕಿವಿಗಳೇ ಕಿವಿಗಳು!ಪಿಶ್ವಶರೀರಕನಾದ ಆತನ ಪಾದಗಳಿಗೆ ನಮಸ್ಕರಿಸತಕ್ಕ ತಿರಸ್ಸೇ ತಿರ ಸು! ಆತನನ್ನು ದರ್ಶನಮಾಡತಕ್ಕ ಕಣ್ಣುಗಳೇ ಕಣ್ಣುಗಳು! ಆ ಭಗವಂತನ ಮತ್ತು ಅವನ ಭಕ್ತರ ಪಾದೋದಕದಿಂದ ಪವಿತ್ರವಾದ ದೇಹವೇ ದೇಹ ವೆನಿಸುವುದು. ಆದುದರಿಂದ ನೀನು ಆ ಭಗವದ್ಗುಣವರ್ಣನದಿಂದ ನನ್ನ ಮ ನುಷ್ಯ ಜನ್ಮವನ್ನು ಸಾರ್ಥಕಪಡಿಸಬೇಕು”ಎಂದನು. ಹೀಗೆ ಪರೀಕ್ಷಿದ್ರಾ ಜನು ಕೃಷ್ಣಚರಿತ್ರರೂಪವಾದ ಪ್ರಶ್ನವನ್ನು ಕೇಳಿದ ಡನೆ, ಶುಕಮಹರ್ಷಿ ಯ ಮನಸ್ಸು ಭಗವಂತನಾದ ಆ ವಾಸುದೇವನಲ್ಲಿ ಲೀನವಾಯಿತು! ಸ್ವಲ್ಪ ಹೊತ್ತಿನವರೆಗೆ ಹಾಗೆಯೇ ಧ್ಯಾನಿಸುತ್ತಿದ್ದು, ಆಮೇಲೆ ಒಂದಾನೊಂದು ಕಥೆ ಯನ್ನು ಹೇಳತೊಡಗಿದನು. « ಓ ರಾಜೇಂದ್ರಾ ಕೇಳು! ಕೃಷ್ಣನಿಗೆ ಸುಧಾಮನೆಂಬ ಬ್ರಾಹ್ಮಣನೊಬ್ಬನು ಆಬಾಲ್ಯಮಿತ್ರನಾಗಿದ್ದನು, ಆ ತನು ಬ್ರಹ್ಮವಾದಿಗಳಲ್ಲಿ ಮೇಲೆನಿಸಿಕೊಂಡವನು. ಕೇವಲ ವಿರಕ್ತನು. ಶಾಂತಾನು, ಜಿತೇಂದ್ರಿಯನು. ಆತನು ತಾನಾಗಿ ಲಭಿಸಿದುದರಲ್ಲಿ ತೃಪ್ತ ನಾಗಿ, ಗೃಹಸ್ಥಾಶ್ರಮದಲ್ಲಿರುತ್ತಿದ್ದನು. ಆತನು ದಾರಿದ್ರದೆಶೆಯಿಂದ ಉ ಡುವುದಕ್ಕೆ ಸರಿಯಾದ ಬಟ್ಟೆಯೂ ಇಲ್ಲದೆ,ಕಂಥೆಗಳನ್ನು ಧರಿಸುತಿದ್ದುದರಿಂದ, ಆವನಿಗೆ ಕುಚೇಲನೆಂಬ ಹೆಸರು ಪ್ರಸಿದ್ಧವಾಯಿತು. ಅವನ ಪತ್ನಿ ಯೂ ಕೂ ಡ ಬಹಳ ಪತಿವ್ರತೆಯಾಗಿ, ತನ್ನ ಪತಿಯು ಸಂಪಾದಿಸಿ ತಂದುದನ್ನು ಅವನ