ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೮ ಶ್ರೀಮದ್ಭಾಗವತವು (ಅಧ್ಯಾ, ೮೧. ಕ್ಕೇ ತಡೆದು ನಿಲ್ಲಿಸಿ, “ ನಾಥಾ! ನೀನು ಮೊದಲು, ಆ ಒಂದುಹಿಡಿಯ ಅವ ಲಕ್ಕಿಯನ್ನು ತಿಂದು ತೃಪ್ತನಾದಮಾತ್ರಕ್ಕೇ, ಅದು, ಇಹಲೋಕ ದಲ್ಲಿಯಾಗಲಿ, ಪರಲೋಕದಲ್ಲಿಯಾಗಲಿ ಅನುಭವಿಸಬಹುದಾದ ಸಂಪತ್ತು ಗಳೆಲ್ಲವನ್ನೂ ಕೈಗೂಡಿಸುವುದಕ್ಕೆ ಸಾಕಾಗಿರುವುದು, ಇನ್ನು ಸಾಕು! ನಿಲ್ಲಿಸು” ಎಂದಳು. ಓ ! ಪರೀಕ್ಷಿದ್ರಾಜಾ ! ಆ ಬ್ರಾಹ್ಮಣನು, ಆ ರಾತ್ರಿ ಯಲ್ಲಿ ಕೃಷ್ಣನ ಅರಮನೆಯಲ್ಲಿಯೇ ಪಾನಭೋಜನಾದಿಗಳನ್ನು ತೀರಿಸಿ ಕೊಂಡು, ಆ ದಿನವನ್ನು ಸುಖವಾಗಿ ಕಳೆದನು. ಆಗ ಅವನಿಗೆ ತಾನು ಸ್ವರ್ಗ ದಲ್ಲಿರುವಂತೆಯೇ ತೋರಿತು. ಮರುದಿನ ಬೆಳಗ್ಗೆ, ಕೃಷ್ಣನು,ತನ್ನ ಮಿತ್ರ ನಾದ ಆ ಬ್ರಾಹ್ಮಣನನ್ನು ಬರೀಬಾಯಿಮಾತುಗಳಿಂದ ಉಪಚರಿಸುತ್ತ, ಅವನು ತನ್ನಲ್ಲಿಗೆ ಬಂದ ಉದ್ದೇಶವೇನೆಂಬುದನ್ನೂ ಕೆಳದೆ, •ಓ ! ಬ್ರಾಹ್ಮ ಣ ! ನಿನಗೆ ವಂದನವು, ಇನ್ನು ನೀನು ಹೋಗಿ ಬರಬಹುದು” ಎಂದು ಹೇಳಿ, ತನ್ನ ಅರಮನೆಯ ಬಾಗಲಿನವರೆಗೆ ತಾನೂ ಹಿಂಬಾಲಿಸಿ ಬಂದು,ಅವನನ್ನು ಕಳುಹಿಸಿಬಿಟ್ಟನು. ಈ ಬ್ರಾಹ್ಮಣನಾದರೋ ಬಹಳಸಂ ಕೋಚಸ್ವಭಾವವುಳ್ಳವನು. ತಾನಾಗಿ ಬಾಯಿಬಿಟ್ಟು ಯಾಚಿಸುವುದಕ್ಕೂ ಅವನಿಗೆ ಧೈರವುಂಟಾಗಲಿಲ್ಲ! ದಾರಿದಿಂದುಂಟಾದ ಲಜ್ಜೆಯು ಬೇರೆ ಅವನನ್ನು ಬಾಯೆತ್ತದಹಾಗೆ ಮಾಡಿತು. ಕೃಷ್ಣನಾದರೂ ಅವನ ಉ ದೇಶವೇನೆಂದು ವಿಚಾರಿಸಲಿಲ್ಲ. ಕೊನೆಗೆ ಆ ಬ್ರಾಹ್ಮಣನು ಬರೀ ಕೈಯಿಂದಲೇ ತನ್ನ ಮನೆಗೆ ಹಿಂತಿರುಗಬೇಕಾಯಿತು. ಆಗಲೂ ಆ ಬ್ರಾಹ್ಮ ಣನಿಗೆ ಅತೃಪ್ತಿಯುಮಾತ್ರ ಹುಟ್ಟಲಿಲ್ಲ. ಮಹಾತ್ಮನಾದ ಭಗವಂತನ ದರ್ಶನವು ಲಭಿಸಿತೆಂಬ ಮಾತ್ರದಿಂದಲೇ ತೃಪ್ತನಾಗಿ, ತನ್ನ ಮನೆಗೆ ಬಂದು ಸೇರಿದನು. ಆ ಬ್ರಾಹ್ಮಣನು ಹೊರಟುಬರುವಾಗ ದಾರಿಯುದ್ದಕ್ಕೂ ತನ್ನೊಳಗೆ ತಾನು (ಆಹಾ ! ಆ ಕೃಷ್ಣನಿಗೆ ಬ್ರಾಹ್ಮಣರೆಂದರೆ ಎಷ್ಟು ಪ್ರೀತಿ ! ಸಾಕ್ಷಾದೇವಿಯನ್ನೇ ತನ್ನ ವಕ್ಷಸ್ಥಳದಲ್ಲಿಟ್ಟುಕೊಂಡಿರತಕ್ಕ ಆ ಮಹಾತ್ಮನು, ಕೇವಲ ದರಿದ್ರಬ್ರಾಹ್ಮಣನಾದ ನನ್ನನ್ನು ಕೈನೀಡಿ ಅಲಿಂ ಗಿಸಿಕೊಂಡನಲ್ಲಾ ! ಪರಮಪಾಪಿಯಾಗಿ ದರಿದ್ರನಾದ ನಾನೆಲ್ಲಿ ? ಶ್ರೀದೇ ವಿಗೆ ನಿವಾಸಭೂತನಾದ ಆ ಕೃಷ್ಣನೆಲ್ಲಿ ? ನಾನು ಬ್ರಾಹ್ಮಣಕುಲದವನೆಂ ದಿ 0