ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೨.] ದಶಮಸ್ಕಂಧವು. ೨೩೧೫ ಉಪವಾಸವಿದ್ದು, ಬಾಹ್ಮಣರಿಗೆ ವಸ್ತ್ರಭೂಷಣಾದಿಗಳನ್ನೂ , ಧೋನುಗಳನ್ನೂ ದಾನಮಾಡಿದರು. ಈಕರ್ಮಗಳು ಮುಗಿದಮೇಲೆ, ತಿರುಗಿ ಅವರೆಲ್ಲರೂ ಪರಶುರಾಮನಿಂದ ನಿರ್ಮಿತವಾದ ಆ ಕೊಳಗಳಲ್ಲಿ ಗ್ರಹಣವು ಬಿಟ್ಟ ಮೇಲೆ ಶಾಸೊಕ್ಕವಾಗಿ ಮಾಡಬೇಕಾದ ಶುದ್ಧಮಂಡಲದರ್ಶನಾ ನವನ್ನು ಮಾ ಡಿ, ತಿರುಗಿ ಬ್ರಾಹ್ಮಣರನ್ನು ಕರೆಸಿ, ಶ್ರೀಕೃಷ್ಣನಲ್ಲಿ ತಮಗೆ ನಿರಂತರವಾದ ಭಕ್ತಿಯುಂಟಾಗುವಂತೆ ಅನುಗ್ರಹವನ್ನು ಪಡೆಯುವುದಕ್ಕಾಗಿ, ಅವರಿಗೆ ಸುವ ರ್ಣ ದಾನವನ್ನು ಮಾಡಿ ನಮಸ್ಕರಿಸಿದರು, ಆಮೇಲೆ ಅವರೆಲ್ಲರೂ ಶ್ರೀಕೃಷ್ಣ ನೇ ದೈವವೆಂದು ನಂಬಿದ ಆ ಬ್ರಾಹ್ಮಣರ ಅನುಮತಿಯನ್ನು ಪಡೆದು,ಭೋ ಜನವನ್ನು ಮಾಡಿ, ಅಲ್ಲಲ್ಲಿ ಮರದ ನೆರಳಿನಲ್ಲಿ ಸುಖವಾಗಿ ಕುಳಿತುಕೊಂಡರು. ಗ್ರಹಣಾ ನಕ್ಕಾಗಿ ಅಲ್ಲಿಗೆ ಬಂದಿದ್ದ ತಮ್ಮ ಬಂಧುಮಿತ್ರರನೇಕರನ್ನ, ಬೇರೆಬೇರೆ ದೇಶದ ರಾಜರನ್ನೂ ನೋಡಿ ಅವರೊಡನೆ ಕುಶಲಪ್ರಶ್ನೆ ಮಾ ಡುತ್ತಿದ್ದರು, ಮತ್ತ್ವ, ಉಶೀನರ, ಸೋಸಲ, ವಿದರ್ಭ, ಕುರು, ಸೃಂಜಯ, ಕಾಂಭೋಜ, ಕೇಕಯ, ಮದ್ರ, ಆರಟ್ಟ, ಕೇರಳ, ಮುಂತಾದ ದೇಶಾಧಿಪತಿಗಳೆಲ್ಲರೂ ಅಲ್ಲಿ ನೆರೆದಿದ್ದರು.ಇನ್ನೂ ಅಲ್ಲಿ ಯಾದವ ಪಕ್ಷದವರಾದ ಅನೇಕರಾಜರೂ,ಅವರಿಗೆ ಪ್ರತಿಪಕ್ಷದವರೂ ಬಂದು ಸೇರಿದ್ದ ರು, ಯಾದವರಲ್ಲಿ ವಿಶೇಷಪ್ರೀತಿಯುಳ್ಳ ನಂದಾದಿಗೋಪಾಲಕರೂ, ಗೋ ಪಸ್ಸಿಯರೂ ಬಂದು ಸೇರಿದರು. ಹೀಗೆ ಅಲ್ಲಿ ನೆರೆದಿದ್ದವರೆಲ್ಲರೂ ಬಹುಕಾ ಲದಿಂದ ಕಾಣದಿದ್ದ ತಮ್ಮ ಇಷ್ಟಮಿತ್ರರನ್ನು ನೋಡತಕ್ಕ ಸಂಭವವುಂ ಟಾದುದರಿಂದ, ಪರಮಸಂತೋಷಭರಿತರಾಗಿ ಒಬ್ಬರಿಗೊಬ್ಬರು ಗಾಢಾ ಲಿಂಗನವನ್ನು ಮಾಡಿಕೊಂಡರು. ಒಬ್ಬೊಬ್ಬರ ಮುಖದಲ್ಲಿಯೂ ಉಲ್ಲಾಸವು ತುಳುಕುತಿತ್ತು. ಒಬ್ಬೊಬ್ಬರೂ ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಬಿಡು ತಿದ್ದರು. ಒಬ್ಬೊಬ್ಬರಿಗೂ ದೇಹದಲ್ಲಿ ರೋಮಾಂಚವುಂಟಾಯಿತು ಗದ್ಯದ ಸ್ವರದಿಂದ ಪರಸ್ಪರಕುಶಲಪ್ರಶ್ನವನ್ನು ಮಾಡುವುದಕ್ಕೂ ಮಾತು ಹೊರ ಡದಂತಾಯಿತು. ಎಲ್ಲರೂ ಸಂತೋಷಸಾಗರದಲ್ಲಿ ಮುಳುಗಿದಂತಿದ್ದರು, ಹಾಗೆಯೇ ಅಲ್ಲಿಗೆ ಬಂದಿದ್ದ ಸ್ತ್ರೀಯರೂಕೂಡ ಒಬ್ಬರಿಗೊಬ್ಬರು ಮುಖದಲ್ಲಿ ಮುಗುಳ್ಳ ಗೆಯಿಂದಲೂ, ಪ್ರೀತಿಪೂಲ್ಸಕವಾದ ಕಟಾಕ್ಷವೀಕ್ಷಣದಿಂದಲೂ