ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಅಧ್ಯಾ, ೮.] ದಶಮಸ್ಕಂಧವು. ಅವು ಸ್ವತಂತ್ರವಾಗಿ ಯಾವ ಕೆಲಸವನ್ನು ತಾನೇ ಮಾಡಬಲ್ಲುವು ? ಅಚೇ ತನಗಳಾದ ದೇಹಾದಿಗಳ ಚೇಷ್ಟೆಯೆಲ್ಲವೂ, ಜೀವಾತ್ಮ ಪರಮಾತ್ಮರ ಚೇಷ್ಟೆ ಯಲ್ಲದೆ ಬೇರೆಯಲ್ಲ ! ಜೀವನ ಜೇಷ್ಮೆಗೂ ಪರಮಾತ್ಮನಾದ ನೀನೇ ನಿರಾಹಕನು, ಜೀವನಿಗೇ ಆ ಸ್ವಾತಂತ್ರ್ಯವಿಲ್ಲದಿರುವಾಗ ಪ್ರಾಣಾದಿಗಳಿಗೆ ಆ ಸ್ವಾತಂತ್ರ್ಯವನ್ನು ಹೇಗೆ ಹೇಳಬಹುದು? ಚಂದ್ರನಿಗೆ ಕಾಂತಿ, ಅಗ್ನಿಗೆ ತೇಜಸ್ಸು, ಸೂರೈಸಿಗೆ ಪ್ರಭೆ, ನಕ್ಷತ್ರಗಳಿಗೆ ಹೊಳಪ, ಮಿಂಚಿಗೆ ಪ್ರಕಾಶ ಪ್ರತಗಳಿಗೆ ಸೈಶ್ಯ, ಭೂಮಿಯಲ್ಲಿರತಕ್ಕ ಗಂಧ, ಇವೆಲ್ಲವೂ ವಾಸ್ತವದಲ್ಲಿ ನೀನೇ ! ಜಲವು ಲೋಕಕ್ಕೆ ಜೀವನಹೇತುವಾಗಿರುವುದು, ಅವುಗಳಲ್ಲಿರತಕ್ಕೆ ಸ್ನೇಹವೂ, ರಸವೂ, ಅವುಗಳ ಮಾಧುರವೂ ಇವೆಲ್ಲವೂ ನಿನಗೆ ಅಧೀನ ವಾದುದೇ ! ವಾಯುವಿಗಿರತಕ್ಕೆ ಶಕ್ತಿ, ಬಲ, ವೇಗ, ಧಾರಣಶಕ್ತಿ,ನಡೆ, ಇವೆಲ್ಲವೂ, ನಿನ್ನ ಶಕ್ತಿಯೇ!ದಿಕ್ಕುಗಳೂ, ಆಕಾಶವೂ, ಅವುಗಳಲ್ಲಿ ಕಾಣತಕ್ಕ ಅವಕಾಶವೂ, ಆಕಾಶದ ಗುಣವಾದ ಶಬ್ದವೂ ನೀನೇ ! ಶಬ್ದ ವ್ಯಂಜಕಗಳಾದ ಅಕಾರಾದಿವರ್ಣಗಳೂ, ಓಂಕಾರವೂ, ಬೇರೆಬೇರೆ ಆಕಾರಗಳ ಸೃಥಕ್ಕತಿ ಯೂ ನೀನೇ! ಇಂದ್ರಿಯಗಳಿಗಿರುವ ವಿಷಯಗ್ರಹಣಶಕ್ತಿಯೂ, ಆ ಶಕಿಗ. ಇನ್ನು ಕೊಡತಕ್ಕೆ ಅಭಿಮಾನಿದೇವತೆಯೂ ನೀನೇ!ಬುದ್ದಿಯಲ್ಲಿರತಕ್ಕ ಬೋಧ ಶಕಿಯೂ,ಜೀವನಿಗೆ ಎಡೆಬಿಡದೆ ಅನುಸರಿಸಿಬರುವ ಸಂಸ್ಕಾರಜನ್ಯವಾದ ಜ್ಞಾ ನವೂ ಸೀನೇ! ಆಕಾಶಾದಿಭೂತಗಳಿಗೆ ಕಾರಣವಾದ ತಾಮಸಾಹಂಕಾರವೂ, ಇಂದ್ರಿಯಗಳಿಗೆ ಅನುಗ್ರಾಹಕವಾದ ತೈಜಸಾಹಂಕಾರವೂ, ವೈಚಾರಿಕವೆನಿಸಿ ಕೊಂಡ ಸಾಕಾಹಂಕಾರವೂ, ಕರ್ಮಮಾರ್ಗದಲ್ಲಿರತಕ್ಕವರಿಗೆ ಆ ಕರ್ಮ ಫಲವನ್ನು ಕೊಡಕು ಪ್ರಧಾನಕರ್ಮವೂ ನೀನೇ! ಮಣ್ಣು, ಭಂಗಾರ ಮೊದ ಲಾದ ದ್ರವ್ಯಗಳಿಗೆ, ಆಗಾಗ ಉಂಟಾಗತಕ್ಕ ವಿಕಾರಗಳು ನಶ್ವರಗಳಾ ದರೂ, ಪ್ರಧಾನದ್ರವ್ಯಕ್ಕೆ ಮಾತ್ರ ನಾಶವಿಲ್ಲದೆ, ಎಲ್ಲಾ ಅವಸ್ಥೆಗಳಲ್ಲಿಯೂ ಅದು ಅನುಸರಿಸಿ ಬರುವಂತೆ, ಲೋಕದಲ್ಲಿ ಆಯಾಭಾವಗಳು ನಶ್ವರಗಳೆನಿಸಿ, ಒಮ್ಮೊಮ್ಮೆ ಕಾಣಿಸುತ್ತಲೂ, ಮತ್ತೊಮ್ಮೆ ಕಾಣಿಸದೆಯೂ ಹೋಗು ತಿರುವಾಗ, ಅವುಗಳಿಗೆ ಆಶ್ರಯವಾಗಿ ಸ್ಥಿರವಾದ ಭಾವವು ಯಾವುದೋ ಅದು ನೀವೇ ಆಗಿರುವೆ. ಸತ್ವರಜಸ್ತಮಸ್ಸುಗಳೆಂಬ ಗುಣಗಳೂ, ಆ ಗುಣ 148 B.