ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೦ ಶ್ರೀಮದ್ಭಾಗವತವು [ಅಧ್ಯಾ, ೮೮. ಯಕನಾದ ವಿಷ್ಣುವನ್ನು ಭಜಿಸತಕ್ಕವರು, ಪ್ರಾಯಕವಾಗಿ ಅಕಿಂಚನರಾಗಿ, ಯೇ ಇರುವರು. ಹೀಗೆ ವಿಷ್ಣು ರುದ್ರರ ಸ್ವಭಾವಗಳು ಪರಸ್ಪ. ರವಿರುದ್ಧವಾಗಿರುವುದಕ್ಕೂ, ಅವರನ್ನು ಭಜಿಸತಕ್ಕವರಿಗೆ ಲಭಿಸತಕ್ಕ ಫಲ ಗಳು, ಆದೇವತೆಗಳ ಸ್ವಭಾವಕ್ಕೆ ವಿರುದ್ಯಗಳಾಗಿರುವುದಕ್ಕೂ ಕಾರಣವೇ ನು? ಈ ವಿಚಾರವಾಗಿ ನನಗೆ ಬಹಳ ಸಂದೇಹವಿರುವುದು, ಅದನ್ನು ಪರಿಹರಿ. ಸಬೇಕು.” ಎಂದನು. ಅದಕ್ಕಾ ಶುಕಮುನಿಯು « ರಾಜಾ ಕೇಳು! ಪಾಶ್ವತೀ ಸಮೇತನಾದ ರುದ್ರನು ತಮೋಗುಣಸ್ವಭಾವವುಳ್ಳವನು, ವೈಕಾರಿಕ, ಕೈ ಜಸ, ತಾಮಸವೆಂಬ ಮೂರುವಿಧವಾದ ಅಹಂಕಾರಗಳಿಂದ ತುಂಬಿದವನು. ಈ ಮೂರುಬಗೆಯ ಅಹಂಕಾರಗಳಲ್ಲಿ, ತಾಮಸಾಹಂಕಾರದಿಂದ ಪಂಚಮ ಹಾಭೂತಗಳೂ, ವೈಕಾರಿಕದಿಂದ ಏಕಾದಶೇಂದ್ರಿಯಗಳೂ ಹುಟ್ಟಿರುವುವು ರಾಜಸಾಹಂಕಾರವೆಂಬುದು, ಉಳಿದ ಎರಡುಆಹಂಕಾರಗಳಿಗೂ ಪ್ರೋತ್ಸಾ ಹಕವಾಗಿರುವುದು, ಈ ಮರುಬಗೆಯ ಅಹಂಕಾರಗಳಿಗೂ, ಅವುಗಳ ವಿಕಾ ರರೂಪಗಳಾದ ಭೂತೇಂದ್ರಿಯಾದಿಗಳಿಗೂ, ಬೇರೆಬೇರೆ ಅಧಿದೇವತೆಗಳುಂ ಟುಆ ಅಧಿದೇವತೆಗಳಲ್ಲಿ ಮನುಷ್ಯನು ಯಾವ ದೈವವನ್ನು ಭಜಿಸುವನೋ, ಆ ದೈವವು ಅವನಿಗೆ ತನ್ನಿಂದ ಕೊಡಬಹುದಾದ ಭೋಗೈಶ್ವರಗಳನ್ನು ಕೈ ಗೂಡಿಸುವುದು, ಶ್ರೀಹರಿಯಾದರೋ ಹಾಗಲ್ಲ! ಅವನು ಸತ್ಯಾಪ್ರಕೃತಿ ಗುಣಗಳಿಗೆ ಒಳಗಾದವನಲ್ಲ! ಆತನು ಸಂಪೂರ್ಣವಾದ ಜ್ಞಾನೈಶ್ವರಾದಿಷ ಈುಣಗಳಿಂದ ತುಂಬಿದವನು. ಪ್ರಕೃತಿಜೀವಗಳೆರಡಕ್ಕಿಂತಲೂ ವಿಲಕ್ಷಣನಾ ದವನು. ಸರೈಜ್ಞನಾದುದರಿಂದ ಗುಣದೋಷಗಳನ್ನು ತಿಳಿಯಬಲ್ಲವನು ಇತರ ದೇವತೆಗಳೆಲ್ಲರೂ, ಕರ್ಮವಶ್ಯರಾದುದರಿಂದ, ಜೀವಕೋಟೆಯಲ್ಲಿ ಸೇರಿ ಆ ಭ ಗವಂತನಿಗಿಂತಲೂ ಭಿನ್ನ ಸ್ವಭಾವವುಳ್ಳವರು. ಆದುದರಿಂದ ಆ ದೇವತೆಗಳು ತಮ್ಮನ್ನು ಭಜಿಸಿದವರಿಗೆ ತಮ್ಮ ಶಕ್ತಿಗೆ ತಕ್ಕ ಫಲವನ್ನೇ ಕೊಡುವರು. ಪ್ರಾಕೃತಗುಣರಹಿತನಾದ ಹರಿಯನ್ನು ಭಜಿಸತಕ್ಕವನು, ಆ ಪ್ರಕೃತಿಸಂಬಂ ಧವಿಲ್ಲದ ಮುಕ್ತಿಯನ್ನೇ ಹೊಂದಬೇಕು, ಓ! ಪರೀಕ್ಷಿದ್ರಾಜಾ! ಇದೇ ವಿಚಾರ ವಾಗಿ ನಿನ್ನ ಅಜ್ಜನಾದ ಧರ್ಮರಾಜನು, ತನ್ನ ರಾಜಸೂಯಯಾಗವು ಮು ಗಿದಮೇಲೆ,ಭಗವಂತನಾದ ಕೃಷ್ಣನಿಂದ ಅನೇಕಧರ್ಮಗಳನ್ನು ಕೇಳುತ್ತಿರು