ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೦ ಶ್ರೀಮದ್ಭಾಗವತವು [ಅಧ್ಯಾ, ೫೪. ಗುವನಲ್ಲ, ಚಂದ್ರನ ಕಳೆಗಳಿಗೆ ಮಾತ್ರವೇ ವೃದ್ಧಿ ಕ್ಷಯಗಳೇಹೊರತು ಚಂ ದ್ರನಿಗಲ್ಲ. ಅದರಂತೆಯೇ ಈ ದೇಹಕ್ಕೆ ಮಾತ್ರವೇ ಜನ್ಮ,ಯೌವನ, ವಾರ್ಧಕ ಮೊದಲಾದ ವಿಕಾರಗಳೇಹೊರತು, ಆ ದೇಹದೊಳಗಿನ ಜೀವಕ್ಕೆ ಯಾವ ವಿಧವಾದ ವಿಕಾರವೂ ಇಲ್ಲ! ಚಂದ್ರನಿಗೆ ತನ್ನ ಕಳೆಗಳೆಲ್ಲವೂ ಸಂಪೂರ್ಣವಾಗಿ ಕಂದಿಹೋಗುವುದೇ ಅಮಾವಾಸ್ಯೆಯೆನಿಸುವುದಲ್ಲವೆ ? ಹಾಗೆಯೇ ಆತ್ಮನಿಗೆ ದೇಹನಾಶವೇ ಮರಣವೇಹೊರತು ಅದರಲ್ಲಿ ಆ ಜೀವನ ಸ್ವರೂಪಕ್ಕೇನೂ ಹಾನಿಯಿಲ್ಲ. ಸ್ವಪ್ರ ಪದಾರ್ಥಗಳೆಲ್ಲವೂ ಅಸ್ಥಿರವಾಗಿದ್ದರೂ, ಕನಸನ್ನು ಕಾಣುವ ಪುರುಷನು, ಆ ಸ್ವಪ್ರ ವಿಷಯಗಳೆಲ್ಲವನ್ನೂ ಸ್ಥಿರಬುದ್ಧಿಯಿಂದಲೇ ಅನುಭವಿಸುವಂತೆ, ಮನುಷ್ಯನು ಎಚ್ಚರಗೊಂಡಿರುವಾಗಲೂ, ಈ ಲೌಕಿಕ ವಾದ ವಿಷಯಭೋಗಗಳನ್ನು ನಿಜವೆಂದೇ ತಿಳಿದು ಸಂತೋಷಿಸುತ್ತಿರುವನು. ಈ ಬುದ್ದಿಯು ಬಿಟ್ಟು ಹೋಗುವವರೆಗೂ ಅವನಿಗೆ ಸಂಸಾರವು ತಪ್ಪಿದು ದಲ್ಲ! ಈ ತತ್ವವನ್ನು ತಿಳಿದು ಎಚ್ಚರಗೊಂಡವನಿಗೆ, ಆ ಸಂಸಾರವೆಂಬುದು ತಾನಾಗಿಯೇ ಬಿಟ್ಟು ಹೋಗುವುದು. ಆದುದರಿಂದ ಓ ರುಕ್ಕಿಣಿ! ಅಜ್ಞಾನ ಜನ್ಯವಾಗಿ, ಮನಸ್ಸನ್ನು ಸಂಕಟಗೊಳಿಸತಕ್ಕ ಈ ದುಃಖವನ್ನೂ, ಇತರರು ತನ್ನವರೆಂಬ ಶತ್ರುಮಿತ್ರಭಾವವನ್ನು ಹುಟಿಸತಕ್ಕ ಮೋಹವನ್ನೂ, ನೀನು ಬಿಟ್ಟುಬಿಡಬೇಕು, ಈ ಜಗತ್ತೆಲ್ಲವೂ ಆ ಪರಮಾತ್ಮನೊಬ್ಬನಿಗೆ ಶರೀರವೆಂಬ ತತ್ವಜ್ಞಾನದಿಂದ, ನೀನು ಮನಸ್ಸಮಾಧಾನವನ್ನು ತಂದುಕೊಳ್ಳಬೇಕು” ಎಂದನು. ಹೀಗೆ ಬಲರಾಮನು ಹೇಳಿದ ತತ್ತೋಪದೇಶವನ್ನು ಕೇಳಿ ರುಕ್ಕಿ ಣಿಯು ಮನಸ್ಸಿಗೆ ಸಮಾಧಾನವನ್ನು ತಂದುಕೊಂಡಳು. ಆಗ ರುಕ್ಕಿಯು, ತನ್ನ ತೇಜಸ್ಕೂ, ಬಲವೂ, ಶತ್ರುಗಳಿಂದ ನಷ್ಟವಾದುದಕ್ಕಾಗಿ ನಾಚಿಗೆಯಿಂದ ತಲೆಯೆತ್ತಲಾರದೆ, ಜೀವಚ್ಛವದಂತಾಗಿ, ಯಾರಿಗೂ ತನ್ನ ವಿರೂಪವನ್ನು ತೋರಿಸಲಾರದೆ, ಭೋಜಕಟವೆಂಬ ಒಂದಾನೊಂದು ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಮಾಡುತ್ತಿದ್ದನು. ಇವನು ತನ್ನ ಪಟ್ಟಣ ಪ್ರವೇಶವನ್ನು ಮಾಡದಿರುವುದಕ್ಕೆ, ತನಗುಂಟಾದ ಅವಮಾನವೊಂದು ಮಾತ್ರವೇ ಕಾರಣವಲ್ಲ. ಹಿಂದೆ ಅವನು ಹೊರಟಾಗ, ತಾನು ಯುದ್ಧದಲ್ಲಿ ಕೃಷ್ಣನನ್ನು ಕೊಲ್ಲದೆ, ತನ್ನ ತಂಗಿಯನ್ನು ಕರೆತಾರದೆ, ಕುಂಡಿನಪುರಕ್ಕೆ ತಿರುಗಿ