ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೧ ಅಥ್ಯಾ ೫೪ ] ದಶಮಸ್ಕಂಥವು. ಕಾಲಿಡುವವನಲ್ಲಿವೆಂದು ಪ್ರತಿಜ್ಞೆ ಮಾಡಿಬಂದವನಾದುದರಿಂದ, ಅಲ್ಲಿನ ಜನ. ಗಳಿಗೆ ಮುಖವನ್ನು ತೋರಿಸಲಾರದೆ ಈ ಭೋಜಕಟದಲ್ಲಿಯೇ ನಿಂತು, ಕೃಷ್ಣನಮೇಲೆ ಕೋಪದಿಂದ ಕುಡಿಯುತ್ತಿದ್ದನು. wwರುಕ್ಕಿಗೇ ವಿವಾಹಘಟ್ಟವು++ ಇತ್ತಲಾಗಿ ಕೃಷ್ಣನು ರುಕ್ಷ್ಮಿಣಿಯನ್ನು ರಥದಮೇಲೆ ಕುಳ್ಳಿರಿಸಿ. ಕೊಂಡು ಬರುವಾಗ, ತನ್ನ ೩ ದಿರಿಸಿದ ಕ್ಷತ್ರಿಯರೆಲ್ಲರನ್ನೂ ಕ್ಷಣಮಾತ್ರ ದಲ್ಲಿ ಜಯಿಸಿ, ದ್ವಾರಕಾಪುರಿಗೆ ಬಂದು, ಅಲ್ಲಿ ಶಾಸೊಕ್ಕಶಾಗಿ ರುಕ್ಕಿಣಿ ಯನ್ನು ವಿವಾಹಮಾಡಿಕೊಂಡನು. ಆಗ ಅಲ್ಲಿನ ಪುರವಾಸಿಗಳೆಲ್ಲರೂ ಮನೆ ಮನೆಗಳಲ್ಲಿಯೂ ಆ ಕೃಷ್ಣನ ವಿವಾಹಮಹೋತ್ಸವನ್ನು ಕೊಂಡಾಡು ತಿದ್ದರು, ಅಲ್ಲಿನ ಸ್ತ್ರೀಪುರುಷರೆಲ್ಲರೂ ಕೃಷ್ಣನಲ್ಲಿಯೇ ನಟ್ಟ ಮನಸ್ಸುಳ್ಳವ ರಾಗಿ, ತಮ್ಮ ತಮ್ಮ ಶಕ್ಕನುಸಾರವಾಗಿ ಉತ್ಸವಗಳನ್ನು ನಡೆಸಿದರು. ಹೆಂಗ ಸರು, ಮಕ್ಕಳು, ಮೊದಲಾಗಿ ಆಬಾಲವೃದ್ಧರೂ ವಸ್ತ್ರಾಭರಣಗಳಿಂದ ದೇಹವನ್ನಲಂಕರಿಸಿಕೊಂಡು, ವಧೂವರರಿಗೆ ಕೈಕಾಣಿಕೆಗಳನ್ನು ತಂದೊಪ್ಪಿಸಿ ದರು. ಒಂದೊಂದುಮನೆಯ ಬಾಗಿಲುಗಳೂ ಇಂದ್ರಧ್ವಜಗಳಿಂದಲೂ, ರತ್ನ ತೋರಣಗಳಿಂದಲೂ, ಚಿತ್ರವಿಚಿತ್ರವಾದ ಪ್ರಷ್ಟ ಮಾಲಿಕೆಗಳಿಂದಲೂ, ವಸ್ತ್ರಗಳಿಂದಲೂ ಅಲಂಕರಿಸಲ್ಪಟ್ಟಿದ್ದುವು. ಒಂದೊಂದು ಮನೆಯ ಬಾಗಿ ಅಲ್ಲಿಯೂ, ಆರಳು, ಅಕ್ಷತೆ, ದೀಪ, ಧೂಪ, ಪೂರ್ಣಕುಂಭಗಳೇ ಮೊದಲಾದ ಮಂಗಳಾಲಂಕಾರಗಳು ಕಂಗೊಳಿಸುತಿದ್ದುವು. ಮತ್ತು ಈ ರುಕ್ಕಿಳೇಕಲ್ಯಾ ಹೋತ್ಸವಕ್ಕಾಗಿ ದೇಶದೇಶದಿಂದ ಬಂದಿದ್ದ ರಾಜರ ಮದದಾನೆಗಳು, ಎಡೆ ಬಿಡದೆ ಬೀದಿಯಲ್ಲಿ ಸಂಚರಿಸುತ್ತ, ತಮ್ಮ ಮದಜಲದಿಂದ ಆ ಪಟ್ಟಣದ ಬೀದಿಗಳೆಲ್ಲವನ್ನೂ ಮದವಾಸನೆಯಿಂದ ಘಮಘಮಿಸುತಿದ್ದುವು. ಒಂದೊಂ ದುಮನೆಯ ಬಾಗಿಲಲ್ಲಿಯೂ, ಬಾಳೆಯ ಕಂಬಗಳೂ, ಅಡಿಕೆಯ ಕೊನೆಗಳೂ ಕಂಗೊಳಿಸುತ್ತಿದ್ದುವು, ಮತ್ತು ಆ ಪುರವೀಥಿಗಳಲ್ಲಿ, ಕುರು, ಸೃಂಜಯ, ಕೇಕೆಯ, ವಿದರ್ಭ, ಯದು,ಕುಂತಿ, ದೇಶಾಧಿಪತಿಗಳಾದ ರಾಜರು, ಸಂತೋ ಪಸಂಭ್ರಮಗಳಿಂದ ಸುತ್ತುತಿದ್ದರು. ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಕರೆತಂದು ವಿವಾಹಮಾಡಿಕೊಂಡ ಸಂಗತಿಯನ್ನು , ಅಲ್ಲಲ್ಲಿ ಬ್ರಾಹ್ಮಣರು