ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ ܬܘܦ

  • "

ಶ್ರೀಮದ್ಭಾಗವತವು [ಅಧ್ಯಾ, ೫೪. ಸಂತೋಷದಿಂದ ಕೊಂಡಾಡುತ್ತಿರುವುದನ್ನು ಕೇಳಿ, ಅನೇಕರಾಜರೂ, ರಾಜ ಕನೈಯರೂ ಆ ಕೃಷ್ಣನ ಸಾಹಸವನ್ನು ಕುರಿತು ಆಶ್ಚಯ್ಯಪಡುತಿದ್ದರು. ದ್ವಾರಕಾವಾಸಿಗಳೆಲ್ಲರೂ ಭಗವದಂಶಭೂತನಾದ ಕೃಷ್ಣನಿಗೂ, ಲಕ್ಷ್ಮಿ ಸ್ವರೂಪೆಯಾದ ರುಕ್ಕಿಣಿಗೂ ನಡೆದ ವಿವಾಹೋತ್ಸವವನ್ನು ಕೇಳಿ ಪರ ಮಾನಂದಭರಿತರಾಗಿದ್ದರು. ++ಪ್ರದ್ಯುಮ್ಮ ಜನನವು, ಶಂಬರಾಸುರವಧವು++ - ಓ ಪರಿಕ್ಷಿದ್ರಾಜಾ ! ಪೂತ್ವದಲ್ಲಿ ರುದ್ರನ ಫಾಲನೇತ್ರದಿಂದ ದಗ್ಧ ನಾದ ಕಾಮದೇವನು ವಾಸುದೇವಾಲಶದವನು. ಆಗ ದಗ್ಯವಾದ ತನ್ನ ದೇಹವನ್ನು ತಿರುಗಿ ಪಡೆಯುವುದಕ್ಕಾಗಿ, ಆ ವಾಸುದೇವನನ್ನೇ ಮರೆಹೊಕ್ಕು ಪ್ರಾರ್ಥಿಸಿದನು. ಅದರಮೇಲೆ ಆ ಕಾಮನೇ ಭಗವಂತನ ಸಂಕಲ್ಪದಿಂದ ರುಕ್ಕಿಣೀದೇವಿಯಲ್ಲಿ ಪ್ರದ್ಯುಮ್ನ ನೆಂಬ ಹೆಸರಿನಿಂದ ಕೃಷ್ಣನಿಗೆ ಮಗನಾಗಿ ಹುಟ್ಟಿ, ರೂಪಾದಿಗುಣಗಳಲ್ಲಿ ತನ್ನ ತಂದೆಯಾದ ಕೃಷ್ಣನಿಗೆ ಸಮಾನನೆನಿಸಿ ಕೊಂಡಿದ್ದನು. ಈ ಪ್ರದ್ಯುಮ್ಮನು ಹುಟ್ಟಿ ಹತ್ತುದಿವಸಗಳು ಕಳೆಯುವು ದಕ್ಕೆ ಮೊದಲೇ, ಶಂಬರನೆಂಬ ರಾಕ್ಷಸನೊಬ್ಬನು, ಆತನು'ತನಗೆ ಶತ್ರವಾ ಗುವನೆಂದು ನಾರದನಮುಖದಿಂದ ತಿಳಿದು, ಆಗಲೇ ಶತ್ರುಶೇಷವನ್ನ ಡಗಿಸಿ ಬಿಡಬೇಕೆಂದು, ಆ ಶಿಶುವನ್ನು ರೂಪಾಂತರದಿಂದ ಕದ್ದು ಯು, ಸಮುದ್ರ ದಲ್ಲಿ ಬಿಸುಟು, ತನ್ನ ಮನೆಗೆ ಹೊರಟುಹೋದನು. ಆ ಸಮುದ್ರದಲ್ಲಿ ಬಲಿಷ್ಠವಾದ ಒಂದಾನೊಂದು ಮೀನು, ಆ ಮಗುವನ್ನು ನುಂಗಿ ಬಿಟ್ಟಿತು ಬೆಸ್ತರು ಮೀನುಗಳನ್ನು ಹಿಡಿಯುವುದಕ್ಕಾಗಿ ಬಲೆಯನ್ನು ಬೀಸಿದಾಗ, ಬೇರೆ ಮೀನುಗಳ ಗುಂಪಿನಲ್ಲಿ ಆ ದೊಡ್ಡ ಮತ್ತ್ವವೂ ಅವರ ಬಲೆಗೆ ಸಿಕ್ಕಿ ಬಿದ್ದಿತು. ಆ ಬೆಸ್ತರು ತಮ್ಮ ರಾಜನಾದ ಶಂಬರನಿಗೆ ಆ ವಿನನ್ನು ಕಾಣಿಕೆಯಾಗಿ ತಂದೊಪ್ಪಿಸಿದರು. ಅಡಿಗೆಯವರು ಅದನ್ನು ಪಾಕಮಾಡುವುದಕ್ಕಾಗಿ ಕೊಡಲಿಯಿಂದ ಕಡಿಯುತ್ತಿರುವಾಗ, ಆ ಮೀನಿನ ಗರ್ಭದಲ್ಲಿ ಅದ್ಭುತರೂಪ ವುಳ್ಳ ಆ ಶಿಶುವು ಅವರ ಕಣ್ಣಿಗೆ ಕಾಣಿಸಿತು. ಒಡನೆಯೇ ಅವರು ಆ ಶಿಶು ವನ್ನು ತಂದು, ಶಂಬರನ ಅಂತಃಪುರದಲ್ಲಿ ಸೆರೆಹಿಡಿಯಲ್ಪಟ್ಟು, ಗೌಡಿಯ ಕೆಲ ಸದಲ್ಲಿದ್ದ ಮಾಯಾವತಿಯ ಕೈಗೆ ತಂದುಕೊಟ್ಟರು. ಓ ! ಪರೀಕ್ಷಿದ್ರಾಜಾ