ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೩ ಅಧ್ಯಾ, ೫೮.] ದಶಮಸ್ಕಂಧವು. ಸತಕ್ಕವರ ಹೃದಯದಲ್ಲಿದ್ದು, ಅವರಿಗೆ ಬಂದ ಕಷ್ಟಗಳೆಲ್ಲವನ್ನೂ ಆಗಾಗ ಲೇ ನೀಗಿಸುತ್ತಿರುವೆ” ಎಂದಳು. ಆಗ ಸಮೀಪದಲ್ಲಿದ್ದ ಧರ್ಮರಾಜನು, ವ್ಯನನ್ನು ಕುರಿತು, “ ಓ ಲೋಕೇಶ್ವರಾ ! ಪೂರೈಜನ್ಮದಲ್ಲಿ ನಾವು ಎಷ್ಟು ಪುಣ್ಯವನ್ನು ಮಾಡಿದ್ದೆವೋ ತಿಳಿಯೆವು, ಯೋಗೀಶ್ವರರಿಗೂ ಅಗೋಚ ರನಾದ ನೀನು, ಆಲ್ಪರಾದ ನಮ್ಮ ಕಣ್ಣಿಗೆ ಗೋಚರಿಸುತ್ತಿರುವೆಯಲ್ಲವೆ?ಇದ ಕ್ಕಿಂತಲೂ ಭಾಗ್ಯವೇನುಂಟು? ಕೃಷ್ಣಾ! ಈ ಮಳೆಗಾಲವು ಮುಗಿಯುವವ ರೆಗೆ ನೀನು ಈ ಇಂದ್ರಪ್ರಸ್ಥದಲ್ಲಿಯೇ ಸುಖವಾಗಿದ್ದು, ಇಲ್ಲಿನ ಜನರೆಲ್ಲರಿಗೂ ನಿನ್ನ ದರ್ಶನಾನಂದವನ್ನು ಕರುಣಿಸಬೇಕು” ಎಂದು ಪ್ರಾರ್ಥಿಸಲು, ಕೃಷ್ಣ ನು ಕೆಲವು ಕಾಲದವರೆಗೆ ಅಕ್ಲಿಯೇ ವಾಸ ಮಾಡುತ್ತಿದ್ದನು. ಹೀಗಿರುವಾಗ ಒಮ್ಮೆ ಅರ್ಜುನನು, ಅಕ್ಷಯಬಾಣವುಳ್ಳ ಬತ್ತಳಿಕೆಯನ್ನೂ , ಗಾಂಡೀವವೆಂಬ ತನ್ನ ಮಹಾಧನುಸ್ಸನ್ನೂ ತೆಗೆದುಕೊಂಡು, ವಾನರಚಿಹ್ನೆ ಯುಳ್ಳ ತನ್ನ ರಥ ದಲ್ಲಿ ಕೃಷ್ಣನನ್ನೂ ಕುಳ್ಳಿರಿಸಿಕೊಂಡು, ವನವಿಹಾರಕ್ಕಾಗಿ ಹೊರಟನು. ಅನೇಕಕ್ಕೂರಮೃಗಗಳಿಂದ ಕೂಡಿದ ನಿರ್ಜನವಾದ ಒಂದಾನೊಂದು ಮಹಾರಣ್ಯವನ್ನು ಪ್ರವೇಶಿಸಿ, ಅಲ್ಲಿ, ಹುಲಿ, ಹಂದಿ, ಕಾಡೆಮ್ಮೆ, ಜಿಂಕೆ, ಎಂಟಡಿ (ಶರಭ), ಕಡವೆ, ಖಡ್ಗಮೃಗ, ಹುಲ್ಲೆ, ಮೊಲ, ಮುಳ್ಳುಹಂದಿ, ಮೊದಲಾದ ಅನೇಕ ಕರಮೃಗಗಳನ್ನು ಬಾಣಗಳಿಂದ ಕೊಂದು ಕೆಡ ಹುತ್ತ ಬಂದನು. ಈನಡುವೆ ಪರ್ವ ದಿನಗಳು ಬಂದಾಗ, ಸೇವಕರು ಆ ಮೃಗ. ಗಳಲ್ಲಿ ಶ್ರೇಷ್ಟವಾದುವುಗಳನ್ನು ಧರ್ಮರಾಜನಿಗೆ ತಂದೊಪ್ಪಿಸುತಿದ್ದರು. ಹೀಗೆ ಬೇಟೆಯಾಡುತ್ತಿರುವಾಗ, ಅರ್ಜುನನು, ಹಸಿವುಬಾಯಾರಿಕೆಗಳಿಂದ ಬಹ ಳವಾಗಿ ಬಳಲಿ ಯಮುನಾ ತೀರಕ್ಕೆ ಬಂದನು, ಅಲ್ಲಿ ಕೃಷ್ಣಾರ್ಜುನರಿಬ್ಬರೂ ಸ್ನಾ ನಾಚಮನಗಳನ್ನು ಮಾಡಿ, ಜಲಪಾನವನ್ನು ಮಾಡುತ್ತಿರುವಾಗ, ಮುಂದೆ ಸುಂದರಯೊಬ್ಬಳು ಸಂಚರಿಸುತ್ತಿರುವುದನ್ನು ಕಂಡರು. ಸಾವಯವಸೌಂದಠ್ಯವುಳ್ಳ ಆ ಕಳ್ಳಿಯನ್ನು ಕಂಡೊಡನೆ,ಶ್ರೀಕೃಷ್ಣನು, ಅವಳು ಯಾರೆಂಬುದನ್ನು ವಿಚಾರಿಸಿ ಬರುವಂತೆ ಆರ್ಜುನನನ್ನು ಪ್ರೇರಿಸಲು, ಅರ್ಜುನನು ಅವಳ ಬಳಿಗೆ ಬಂದು, “ಓ ಕಲ್ಯಾಣಿ ! ನೀನು ಯಾರು! ಯಾರ ಮಗಳು ! ಎಲ್ಲಿಂದ ಬಂದಿರುವೆ ? ಯಾವ ಉದ್ದೇಶದಿಂದ ಇಲ್ಲಿ ಸಂಚರಿಸು