ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೪ ಶ್ರೀಮದ್ಭಾಗವತವು [ಅಧ್ಯಾ. ೫೮. ತಿರುವೆ ! ನಿನ್ನನ್ನು ನೋಡಿದರೆ ಅನುರೂಪನಾದ ಪತಿಯನ್ನು ಪಡೆಯಬೇ ಕೆಂಬ ಉದ್ದೇಶವು ನಿನ್ನ ಮನಸ್ಸಿನಲ್ಲಿರುವಂತಿದೆ. ಓ ಮಂಗಳಾಂಗಿ ! ನಿನ್ನ ಪೂರೋತ್ತರವನ್ನು ತಿಳಿಸು” ಎಂದನು. ಅದಕ್ಕಾ ಕಾಳಿಂದಿಯು ಓ ಸೌಮ್ಯಾ ! ನಾನು ಸವಿತೃದೇವನ ಮಗಳು. ನಾನು ಪತಿಯನ್ನು ಕೋರಿಯೇ ಇಲ್ಲಿ ವರಪ್ರದನಾದ ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಿರುವೆನು. ಆ ಶ್ರೀವಿಷ್ಣುವನ್ನು ಹೊರತು ಬೇರೆ ಯಾವ ಪುರುಷನನ್ನೂ ನಾನು ವರಿಸತಕ್ಕವಳಲ್ಲ. ಅನಾಥರಕ್ಷಕನಾದ ಆ ಭಗವಂತನೇ ನನ್ನಲ್ಲಿ ಪ್ರಸನ್ನ ನಾಗಲೆಂದು ಅನವರತವೂ ಹಂಬಲಿಸುತ್ತಿರುವೆನು. ನನಗೆ ಕಾಳಿಂದಿಯೆಂದು ಹೆಸರು, ನನ್ನ ತಂದೆಯಾದ ಸವಿತೃದೇವನು, ಈ ಯಮುನಾಜಲದೊಳಗೆ ನನಗಾಗಿ ಒಂದು ದಿವ್ಯಭವನವನ್ನು ಕಟ್ಟಿಸಿಕೊಟ್ಟಿರುವನು. ಭಗವಂತನ ಸಾಕ್ಷಾತ್ಕಾರವಾಗುವವರೆಗೆ ನಾನು ಇಲ್ಲಿಯೇ ಕಾಲವನ್ನು ಕಳೆಯಬೇಕಾ ಗಿರುವುದು.” ಎಂದಳು. ಅವಳು ಹೇಳಿದ ಸಂಗತಿಗಳೆಲ್ಲವನ್ನೂ ಅರ್ಜುನನು. ಕೃಷ್ಣನಿಗೆ ಯಥಾವತ್ತಾಗಿ ತಿಳಿಸಿದನು. ಕೃಷ್ಣನು ಮೊದಲೇ ಇದೆಲ್ಲವನ್ನೂ ಬಲ್ಲವನಾಗಿದ್ದರೂ, ಅರ್ಜುನನ ಮಾತಿಗೆ ಸಂತೋಷವನ್ನು ನಟಿಸುತ್ತ, ಆ ಕಸ್ಥೆಯನ್ನು ಕರೆತರಿಸಿ ರಥದಮೇಲೆ ಕುಳ್ಳಿರಿಸಿಕೊಂಡು ಧರ್ಮರಾಜನ ಪುರಕ್ಕೆ ಹಿಂತಿರುಗಿ ಬಂದನು. ಕೃಷ್ಣನು ಆ ಇಂದ್ರ ಪ್ರಸ್ಥದಲ್ಲಿರುವಾಗಲೇ ಪಾಂಡ ವರ ಪ್ರಾರ್ಥನೆಯಿಂದ,ವಿಶ್ವಕರ್ಮನಮೂಲಕವಾಗಿ ಅವರಿಗೆ ಅದ್ಭುತವಾಗಿ ಯೂ, ವಿಚಿತ್ರವಾಗಿಯೂ ಇರುವ ಒಂದು ಪಟ್ಟಣವನ್ನು ಕಲ್ಪಿಸಿಕೊಟ್ಟ ನು, ಅಗ್ನಿಗೆ ಖಾಂಡವವನವನ್ನು ಆಹಾರವಾಗಿ ಕೊಡಿಸುವನೆವದಲ್ಲಿ, ಅರ್ಜು ವನಿಗೆ ತಾನೇ ಸಾರಥಿಯೂ ಆದನು. ಇದರಿಂದ ಸಂತುಷ್ಟನಾದ ಅಗ್ನಿ ಯು, ಅರ್ಜುನನಿಗೆ ಆಗ ಗಾಂಡೀವವೆಂಬ ಧನುಸ್ಸನ್ನೂ, ಶುಭ್ರವಾದ ನಾಲ್ಕು ಕುದುರೆಗಳನ್ನೂ, ಅಕ್ಷಯಬಾಣವುಳ್ಳ ಎರಡು ಬತ್ತಳಿಕೆಗಳನ್ನೂ, ಒಂದು ದಿವ್ಯರಥವನ್ನೂ , ಅಭೇದ್ಯ ಕವಚವನ್ನೂ ಅನುಗ್ರಹಿಸಿಕೊಟ್ಟನು. ಈ ಖಾಂ ಡವದಹನಕಾಲದಲ್ಲಿ, ಮಯನಿಗೆ ಅಗ್ನಿ ಯಿಂದುಂಟಾದ ಅಪಾಯವು ತಪ್ಪಿ ದುದರಿಂದ, ಅವನೂ ಅರ್ಜುನನಲ್ಲಿ ಪ್ರಸನ್ನನಾಗಿ, ತನ್ನ ಮಾಯೆಯಿಂದ ಆಶ್ಚಯ್ಯಕರವಾದ ಒಂದು ಸಭೆಯನ್ನು ನಿರ್ಮಿಸಿಕೊಟ್ಟನು. ಓ ಪರೀಕ್ಷೆ