ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧೩೨ ಶ್ರೀಮದ್ಭಾಗವತವು [ಅಧ್ಯಾ. ೫೯ ಯಾಗಿದ್ದನು. ಇವರೆಲ್ಲರೂ ಒಟ್ಟಾಗಿ ಸೇರಿ ಬಂದು, ಕೃಷ್ಣನಮೇಲೆ, ಕತ್ತಿ, ಗದೆ, ಶಕ್ತಿ, ಶೂಲ, ಮೊದಲಾದ ಆಯುಧಗಳನ್ನೂ, ಇತರಬಾಣಗಳನ್ನೂ ಪರಂಪರೆಯಾಗಿ : ವರ್ಷಿಸತೊಡಗಿದರು.. ಅಮೋಘುಪರಾಕ್ರಮವುಳ್ಳ ಕೃಷ್ಣನು, ಈ ಆಯುಧಸಮೂಹಗಳೆಲ್ಲವನ್ನೂ ಕ್ಷಣಮಾತ್ರದಲ್ಲಿ ತನ್ನ ಬಾಣಗಳಿಂದ ಪುಡಿಪುಡಿಯಾಗಿ ಬೀಳುವಂತೆ .ಕತ್ತರಿಸಿ ಕೆಡಹಿದನು, ಮತ್ತು ಬೇರೆ ಕೆಲವುಬಾಣಗಳನ್ನು ಪ್ರಯೋಗಿಸಿ, ಆ ರಾಕ್ಷಸವೀರರ, ಕೈ, ಕಾಲು, ತೊಡೆ, ತಲೆ, ಕವಚ, ಮುಂತಾದ ಅವಯವಗಳೆಲ್ಲವನ್ನೂ ಭೇದಿಸಿ, ಅವರನ್ನೂ ಯಮಪುರಿಗೆ ಕಳುಹಿಸಿದನು. ಹೀಗೆ ಕೃಷ್ಣನ ಬಾಣಗಳಿಂದಲೂ, ಅವನ ಚಕ್ರಾಯುಧದಿಂದಲೂ, ತನ್ನ ಕಡೆಯ ಸೇನಾಪತಿಗಳೆಲ್ಲರೂ ಹತರಾಗು ತಿರುವುದನ್ನು ನೋಡಿ, ಭೂದೇವಿಯ ಮಗನಾದ ನರಕಾಸುರನು, ಸಮು ಪ್ರಸಂಭವಗಳಾದ ಅನೇಕಮದಗಜಗಳ ಸೈನ್ಯವನ್ನು ಸೇರಿಸಿಕೊಂಡು, ತಾನೇ ಯುದ್ಧಕ್ಕಾಗಿ ಹೊರಟುಬಂದನು. ಸೂರಮಂಡಲಕ್ಕೆ ಉಪರಿಭಾಗ ದಲ್ಲಿ, ಮಿಂಚಿನೊಡಗೂಡಿದ ಮೇಫುದಂತೆ, ಗರುಡನಮೇಲೆ ಸತ್ಯಭಾಮಾ ಸಮೇತನಾಗಿ ಕುಳಿತಿರುವ ಶ್ರೀ ಕೃಷ್ಣನನ್ನು ನೋಡಿ ಆ ನರಕಾಸುರನು,ಶತ ಫಿ ಯೆಂಬ ಒಂದು ದೊಡ್ಡ ಶಕ್ತಾಯುಧವನ್ನು ತೆಗೆದು ಅವನಮೇಲೆ ಬೀಸಿ ದು, ಇದೇ ಕಾಲದಲ್ಲಿ ಈ ನರಕಾಸುರನ ಕಡೆಯ ಯುದ್ಧಭಟರೂಕೂಡ, ತಮ್ಮ ತಮ್ಮ ಆಯುಧಗಳನ್ನು ಆ ಕೃಷ್ಣನಮೇಲೆ ಏಕಕಾಲದಲ್ಲಿ ಪ್ರಯೋ ಗಿಸಿದರು, ಆದರೇನು ? ಆ ಆಯುಧಗಳು ತನ್ನ ಮೇಲೆ ಬಿಳುವುದಕ್ಕೆ ಮೊದಲೇ ಕೃಷ್ಣನು, ತನ್ನ ತೀಕ್ಷಬಾಣಗಳಿಂದ ಮೊದಲು ಆ ರಾಕ್ಷಸಸೈನಿಕರ ತೋಳು, ತೊಡೆ, ತಲೆ, ಕಾಲು, ಮುಂತಾದ ಅವಯವಗಳೆಲ್ಲವನ್ನೂ ಭೇದಿಸಿ, ಆ ನರಕಾಸುರನು ತಂದಿದ್ದ ಅನಕುದುರೆಯ ಸೈನ್ಯಗಳೆಲ್ಲವನ್ನೂ ಕ್ಷಣಮಾತ್ರದಲ್ಲಿ ಧ್ವಂಸಮಾಡಿ, ಆಮೇಲೆ ಅವರು ಪ್ರಯೋಗಿಸಿದ್ದ ಶಸ್ಸಾ ಸ್ಯಗಳಲ್ಲಿ ಒಂದೊಂದನ್ನೂ ತನ್ನ ಮೂರುಮೂರು ಬಾಣಗಳಿಂದ ಕತ್ತರಿಸಿ ಕೆಡಹಿದನು. ಇಷ್ಟರಲ್ಲಿ ಗರುತ್ಮಂತನೂಕೂಡ, ಕೃಷ್ಣನು ತನ್ನ ಮೇಲೆ ಕುಳಿ ತಿದ್ದ ಹಾಗೆಯೇ, ನರಕಾಸುರನ ಸೈನ್ಯದಮೇಲೆ ಬಿದ್ದು, ತನ್ನ ರೆಕ್ಕೆಗಳಿಂ ದಲೂ, ಕೊಕ್ಕಿನಿಂದಲೂ, ಉಗುರುಗಳಿಂದಲೂ, ಅವನ ಗಜಸೈನ್ಯಗಳೆಲ್ಲ