ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ೩ ಅಧ್ಯಾ, ೫೯.] ದಶಮಸ್ಕಂಧವು. ವನ್ನೂ ಬಡಿದು ಕೆಡಹುತ್ತ ಬಂದನು. ಇದನ್ನು ತಡೆಯಲಾರದೆ ಆ ಗಜ ಸೈನ್ಯಗಳೆಲ್ಲವೂ ಆರ್ತಧ್ವನಿಯಿಂದ ಕೂಗುತ್ತ ಹಿಂತಿರುಗಿ ಪಟ್ಟಣದ ಕಡೆಗೆ ಓಡಿದುವು. ಇಷ್ಟಾದರೂ ನರಕಾಸುರನು ಧೈರಗುಂದದೆ, ತಾನೊಬ್ಬನೇ ಕೃಷ್ಣನೊಡನೆ ಯುದ್ಧಕ್ಕೆ ನಿಂತನು. ಗರುಡನ ಪ್ರಹಾರದಿಂದ ತನ್ನ ಸೈನ್ಯ ವೆಲ್ಲವೂ ಪರಾಜಿತವಾಗಿ ಓಡಿ ಹೋದುದನ್ನು ನೋಡಿ, ನರಕಾಸುರನು ಸಹಿಸ ಲಾರದ ಕೋಪದಿಂದ ಮುಂದೆ ಬಂದು, ತನ್ನ ಭಯಂಕರವಾದ ಶಕ್ಕಾ ಯುಧವನ್ನು ಗರುಡನಮೇಲೆ ಬೀಸಿದನು, ಓ ಪರೀಕ್ಷಿದ್ರಾಜಾ ! ಈ ಶಕಾ ಯುಗವು ಹಿಂದೆ ಅನೇಕಾವರ್ತಿ ದೇವೆಂದ್ರನ ವಜ್ರಾಯುಧವನ್ನೇ ನಿಗ್ರಹ ಸಿದ್ದರೂ, ಅದು ಗರುತ್ಮಂತನ ಮೈಮೇಲೆ ಬಿದ್ದಾಗ, ಆನೆಯನ್ನು ಪುಷ್ಟ ಮಾಲೆಯಿಂದ ಹೊಡೆದಂತಾಯಿತೇಹೊರತು, ಅದರಿಂದ ಅವನು ಸ್ವಲ್ಪ ಮಾತ್ರವೂ ಕದಲಲಿಲ್ಲ. ಇದರಲ್ಲಿಯೂ ತನ್ನ ಪ್ರಯತ್ನವು ವಿಫಲವಾದು ದನ್ನು ನೋಡಿ ನರಕಾಸುರನು,ಅತ್ಯಾಕ್ರೋಶಗೊಂಡವನಾಗಿ, ಕೃಷ್ಣನನ್ನೇ ಮೊದಲು ತೀರಿಸಬಿಡಬೇಕೆಂಬ ಹಟದಿಂದ, 'ಶೂಲವನ್ನು ಕೈಗೆತ್ತಿಕೊಂಡನು. ಅದನ್ನು ಪ್ರಯೋಗಿಸುವಷ್ಟರಲ್ಲಿಯೇ ಕೃಷ್ಣನು : ಆನೆಯಮೇಲೇರಿ ಬರುತಿದ್ದ ಆ ನರಕಾಸುರನ ತಲೆಯನ್ನು ತೀಕ್ಷ್ಯಧಾರೆಯುಳ್ಳ ತನ್ನ ಚಕಾ ಯುಧದಿಂದ ಕತ್ತರಿಸಿ ಕೆಳಕ್ಕೆ ಕೆಡಹಿದನು. ಕಿರೀಟಕುಂಡಲಗಳಿಂದಲಂ ಕೃತವಾದ ಆ ನರಕಾಸುರನ ಶಿರಸ್ತು ನೆಲದಮೇಲೆ ಬಿದ್ದು ಹೊರಳಾಡುತ್ತ ಅದ್ಭುತಕಾಂತಿಯಿಂದ ಜ್ವಲಿಸುತಿತ್ತು, ಆಕಾಶದಲ್ಲಿ ಇದನ್ನು ನೋಡುತಿದ್ದ ದೇವತೆಗಳೂ, ಋಷಿಗಳೂ, ಭಲೆ, ಭಲೆ!”ಎಂದು ಕೊಂಡಾಡುತ್ಯ, ಕೃಷ್ಣನ ಮೇಲೆಪುಷ್ಪವೃಷ್ಟಿಯನ್ನು ಕರೆದರು.ನರಕಾಸುರನ ಬಂಧುಗಳೆಲ್ಲರೂ ಹಾಹಾ ಕಾರದಿಂದ ಕೂಗುತಿದ್ದರು.ಈ ನರಕಾಸುರನ ತಲೆಯು ಕೆಳಗೆ ಬಿದ್ದ ಕೂಡಲೆ, ಆತನ ತಾಯಿಯಾದ ಭೂದೇವಿಯು, ಪುತ್ರಶೋಕದಿಂದ ಕೃಷ್ಣನ ಬಳಿಗೆ ಬಂದು, ಹಿಂದೆ ನರಕಾಸುರನು ಅದಿತಿದೇವಿಯ ಕಿವಿಯಿಂದ ಅಪಹರಿಸಿತಂ ಡಿದ ರತ್ನಖಚಿತವಾದ ಕುಂಡಲಗಳನ್ನೂ, ವರುಣನ ಛತ್ರವನ್ನೂ, ಮೇರು ಪರತದ ಭಾಗವಾದ ಮಹಾಮಣಿಯೆಂಬ'ಶಿಖರವನ್ನೂ, ವೈಜಯಂತಿಯೆಂಬ ಮಾಲಿಕೆಯನ್ನೂ ಆತನಿಗೊಪ್ಪಿಸಿ, ಭಕ್ತಿಯಿಂದ ಕೈಮುಗಿದು ಹೀಗೆಂದು