ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೫ ಅಧ್ಯಾ, ೫೯.) ದಶಮಸ್ಕಂಧವು. ರೂಪದಿಂದಲೇ ಏರ್ಪ್ಪಟ್ಟಿರುವುವು. ಓ ಭಗವಂತಾ ! ಇದೋ ! ನಿನ್ನಿಂದ ಸಂಹೃತನಾದ ನರಕಾಸುರನ ಮಗನು, ಭಯದಿಂದ ಬಂದು ನಿನ್ನ ಪಾದಾ ಗವಿಂದಗಳಲ್ಲಿ ಮರೆಹೊಕ್ಕಿರುವನು. ಇವನನ್ನು ರಕ್ಷಿಸು! ಸತ್ವಪಾಪನಿವಾರ ಕವಾದ ನಿನ್ನ ಹಸ್ತಕಮಲವನ್ನು ಇವನ ಶಿರಸ್ಸಿನಲ್ಲಿಟ್ಟ, ಅಭಯಪ್ರದಾನವ ನ್ನು ಮಾಡು!” ಎಂದು ಪ್ರಾಕ್ಸಿ ಸಿದಳು. ಹೀಗೆ ಭೂದೇವಿಯು ಭಕ್ತಿವಿನಯ ಗಳಿಂದ ಸ್ತುತಿಸಿ ಪ್ರಾರ್ಥಿಸುತ್ತಿರಲು, ಕೃಷ್ಣನು ಅವಳ ಕೋರಿಕೆಯಂತೆ ಯೇ ನಡೆಸುವುದಾಗಿ ಅಭಯವನ್ನು ಕೊಟ್ಟು, ಅಲ್ಲಿಂದ ಸಕಲಸಂಪನ್ನ ದ್ವವಾದ ನರಕಾಸುರನ ಅರಮನೆಗೆ ಬಂದನು. ಅಲ್ಲಿ ನರಕಾಸುರನು ಬಲಾ ತ್ಕಾರದಿಂದ ಅಪಹರಿಸಿತಂದು ಸೆರೆಯಲ್ಲಿಟ್ಟಿದ್ದ ಎಷ್ಟೋ ಮಂದಿ ರಾಜಕನ್ಯ ಯರನ್ನು ನೋಡಿದನು, ಅಂತಹ ರಾಜಕಯರು ಅಲ್ಲಿ ಅರುವತ್ತು ಸಾವಿರ ಮಂಗಿಂತಲೂ ಹೆಚ್ಚಾಗಿಯೇ ಇದ್ದರು. ಕೃಷ್ಣನು ಅಲ್ಲಿಗೆ ಪ್ರವೇಶಿಸಿ ದೊಡನೆಯೇ, ಆ ರಾಜಕಸ್ಯೆಯರೆಲ್ಲರೂ, ಅವನ ದಿವ್ಯಾದ್ಭುತಸೌಂದಠ್ಯಕ್ಕೆ ಮೋಹಗೊಂಡು, ಭಾಗ್ಯವಶಯಿಂದ ತಮಗೆ ಅನುರೂಪನಾದ ಪತಿಯು ಲಭಿ ಸಿದನೆಂದು ಸಂತುಷ್ಟರಾಗಿ, ಮನಸ್ಸಿನಲ್ಲಿ ಅವನನ್ನೇ ತಮ್ಮ ಪತಿಯನ್ನಾಗಿ ಸಂಕಲ್ಪಿಸಿಕೊಂಡರು.ಅವರಲ್ಲಿ ಒಬ್ಬೊಬ್ಬರೂ ನನಗೆ ಇವನು ಪತಿಯಾಗಲಿ! ನಾನೇ ಇವನನ್ನು ವರಿಸುವೆನು, ದೈವವು ನನ್ನ ಕೋರಿಕೆಯನ್ನಿಡೇರಿಸಲಿ!” ಎಂದು, ತದೇಕ ಧ್ಯಾನದಲ್ಲಿದ್ದರು. ಆಗ ಕೃಷ್ಣನು, ಅವರೆಲ್ಲರಿಗೂ ಸ್ಮಾ ನಮಾ ಡಿಸಿ, ವಸ್ತ್ರಾಭರಣಗಳಿಂದ ಅಲಂಕಾರಮಾಡಿಸಿ, ಪಲ್ಲಕ್ಕಿಗಳಮೇಲೆ ದ್ವಾರಕಾಪುರಿಗೆ ಕಳುಹಿಸಿದನು. ಅವರೊಡನೆ ಧನಸಮೃದ್ಧಗಳಾದ ಅನೇಕ ರಥಗಳನ್ನೂ, ಐರಾವತಕುಲದಲ್ಲಿ ಹುಟ್ಟಿದ ನಾಲ್ಕು ಕೊಂಬುಗಳುಳ್ಳ ಆರು ವತ್ತು ನಾಲ್ಕು ಬಿಳಿ ಆನೆಗಳನ್ನೂ ಕಳುಹಿಸಿಕೊಟ್ಟನು. w+ ಪಾರಿಜಾತಾಪಹರಣವು +++... ಆಮೇಲೆ ಕೃಷ್ಣನು ಅಸ್ಲಿಂದ ಹೊರಟು, .ಸ್ವರ್ಗದಲ್ಲಿ ದೇವೇಂದ್ರನ ಅರಮನೆಗೆ ಬಂದನು. ಹಿಂಬೆ ನರಕಾಸುರನು ತಂದ್ಯ ಆದಿತಿದೇವಿಯ ಕುಂಡ ಲಗಳೆರಡನ್ನೂ ದೇವೇಂದ್ರನ ಕೈಗೆ ಕೊಟ್ಟನು, ಆಗ ದೇವೇಂದ್ರನೂ, ಆವ ನ ಪತ್ನಿ ಯಾದ ಶಚೀದೇವಿಯೂ, ಪರಮಸಂತೋಷದಿಂದ ಸತ್ಯಭಾಮಾಸ