ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ಪಶುಭಾವವನ್ನು ಹೋಗಲಾಡಿಸಿ ಉಚ್ಚಾದರ್ಶವನ್ನು ತೋರಿಸು ವುದೇ ಅವರ ಉದ್ದೇಶವೆಂದು ಹೇಳಬಹುದು. ಅವರು ಆಗಾಗ್ಗೆ “ ಈ ದೇಹವು ಮಾಡುವುದೆಲ್ಲ ನಿಮಗೋಸ್ಕರ; ಎಲೋ ನಾನು ಹದಿ ನಾರಾಣೆಯ ಪಾಲನ್ನು ಮಾಡಿದರೆ ನೀವು ಒಂದಾಣೆಯ ವಾಲನಾ ದರೂ ಮಾಡುತ್ತೀರಿ." ಎಂದು ಹೇಳುತ್ತಿದರು. + ಇಷ್ಟು ಹೊರತು ನವ ಕೀಳುಬುದ್ಧಿಯಿಂದ ಅವರ ಮಾಹಾತ್ಮಿಯನ್ನು ಅಳೆದು ಎಂದಿಗೂ ಅವರಲ್ಲಿ ಇಲ್ಲದನ್ನು ಆರೋಪಿಸಬಾರದು. ಏಕೆಂದರೆ ಸಾಮಾನ್ಯದಲ್ಲಿಯೂ ಜಗನ್ಮಾತೆಯೆಂದು ಬುದ್ಧಿಯನ್ನಿಟ್ಟು ಕೊ೦ಡಿದ ಪರಮಹಂಸರಿಗೆ, ನಿರ್ವಿಕಲ್ಪ ಸಮಾಧಿಯನ್ನು ಪಡೆದು ದೇಹಬುದ್ದಿಯನ್ನೂ ಇಂದ್ರಿಯಸುಖವನ್ನೂ ಪೂರ್ತಿಯಾಗಿ ಮರೆತು ಬಿಟ್ಟವರಿಗೆ, ಸ್ತ್ರೀಯಲ್ಲಿ ಅನ್ಯಥಾ ಬುದ್ದಿ ಹೇಗೆ ಹುಟ್ಟಿ ಬೇಕು ?)ಕೆಲ ವರು “ ನಾವು ಆ ಕಾಲದಲ್ಲಿ ದಿದರೆ ಪರಮಹಂಸರ ಸೈರ್ಯವನ್ನು ಸರೀಕ್ಷೆಮಾಡಿ ಬಿಡುತ್ತಿದ್ದೆವು. ಅಸಿಧಾರಾವ್ರತವು ಯಾರಿಂದ ನಾಧ್ಯ ? " ಎಂದು ಹೇಳಬಹುದು. ಆಗಿನಕಾಲದಲ್ಲಿ ಪರಮಹಂ ಸರ ಶಿಷ್ಯ ಮಂಡಲಿಯಲ್ಲಿಯೇ ಇಂಥ ಸಂದೇಹ ಶೀಲರಾದ ಜನರಿಗೆ ಏನೂ ಅಧಾನವಿರಲಿಲ್ಲ. ನನಗೆ ಒಂದು ಕಾಳಿನಷ್ಟು ಸಂದೇಹ ಮಾದರಿ ಅವರಿಗೆ ಒಂದು ಬೆಟ್ಟದಷ್ಟು ಸಂದೇಹವಿರುತ್ತಿತ್ತು. ಅದ ಕೊಸ್ಕರ ಅವರ ಶಿಷ್ಯರಲ್ಲೊಬ್ಬರು ರಾತ್ರಿ ವರಮಹಂಸರು ತಮ್ಮ ಪತ್ರಿ ಯೋಜನೆ ಮಲಗಿರುವ ಮನೆಗೆ ಹೋಗಿ ಬಗ್ಗಿ ಕೂಡ ನೋಡಿದ ಕ೦ತೆ. ಭಕ್ತರ ಹೃದಯದಲ್ಲಿ ನಡೆಯುವ ವ್ಯಾಪಾರಗಳನ್ನೆಲ್ಲಾ ಚೆನ್ನಾಗಿ ತಿಳಿದ ಗುರುನುಹಾರಾಜರಆಗಾಗ್ಗೆ “ ಯಾವುದನ್ನೂ ಚೆನ್ನಾಗಿ ಪರೀಕ್ಷೆ ಮಾಡ ಬೇಕಪ್ಪ ! ನಿಮ್ಮ ಗುರುಗಳನ್ನೂ ಚೆನ್ನಾಗಿ ಪರೀಕ್ಷೆ ಮಾಡಬೇಕು; ಹಾಗೆ ಮಾಡಿದರೆ ತಾನೆ ಆಮೇಲೆ ದೃಢ ವಾದ ನಂಬುಗೆ ಯುಂಟಾಗುವುದು.” ಎಂದು ಹೇಳುತ್ತಿದ್ದರು. ಇದು

  • ಈ ವಿಷಯವನ್ನು ಶಾರದಾನಂದ ಸ್ವಾಮಿಗಳು ತಮ್ಮ ಗ್ರಂಥದಲ್ಲಿ ವಿಸ್ತಾರವಾಗಿ ವಿಚಾರಮಾಡಿದ್ದಾರೆ.