ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ೧೦೭ ಯೆಂದೂ ಕೂಗಿಕೊಳ್ಳುವುದು ರೂಢಿಯಾಗಿದೆ. ಧರ್ಮವು ಎಂದೂ ನಮ್ಮದೇಶದ ಅವನತಿಗೆ ಕಾರಣವಲ್ಲವೇ ಅಲ್ಲ. ಅದಕ್ಕೆ ಕಾರಣ ವನ್ನು ಬೇರೆಕಡೆ ಹುಡುಕಬೇಕು. ಧರ್ಮವೆಂಬ ತಳಹದಿಯ ಮೇಲೆಯೇ ಸಾವಿರಾರು ವರ್ಷಗಳಿಂದ ಭಾರತೀಯರ ಸಮಾಜ ರೀತಿನೀತಿಗಳು ನಿಂತುಕೊಂಡಿವೆ. ಇಷ್ಟು ದಿನಗಳಾದರೂ ಸ್ವಲ್ಪವೂ ಅಲ್ಲಾಡದಿರುವ ಆ ತಳಹದಿಯ ಮೇಲೆಯೇ ಮುಂದಕ್ಕೂ ಕಟ್ಟಡ ವನ್ನು ಕಟ್ಟಿಕೊಂಡು ಹೋಗುವುದೇ ನನಗೆ ಸುಖಕರ, ಶ್ರೇಯ ಸ್ವರ, ಕ್ಷೇಮಕರ. ಇದಕ್ಕೆ ದೇಶವಾತ್ಸಲ್ಯವ ತುಂಬಿತುಳುಕುತ್ತಿದ ಸ್ವಾಮಿ ವಿವೇಕಾನಂದರೇ ಉದಾಹರಣೆ. ನಮ್ಮ ಈ ಧರ್ಮದ ಸಹಾಯದಿಂದ ಎಲ್ಲರೂ ಸ್ವಾಮಿ ವಿವೇಕಾನಂದರಂತಾದರೆ ಭಾರತ ಭೂಮಿಯ ಪುಣ್ಯಕ್ಕೆ ಎಣೆಯೇನು ? ಇದಂ ತೇ ನಾತಪಸ್ಮಾಯ ನಾಭಕ್ತಾಯ ಕದಾಚನ | ನಚಾಶುಶೂಷವೇ ವಾಚ್ಯಂ ನಚನಾಂ ಯೋಭ್ಯಸೂಯತಿ