ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಶ್ರೀ

ಓಂನಮೋ ಭಗವತೇ ರಾಮಕೃಷ್ಣಾಯ.

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ

.

——————

ಅವತರಣಿಕೆ

.

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂಸೃ ಜಾಮ್ಯಹಂ |
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ !

ಧರ್ಮವೇ ಭಾರತೇಯರ ಸರ್ವಸ್ವ. ಹಿಂದೂಸಮಾಜ ನಿಲಯಕ್ಕೆ ಧರ್ಮವೇ ತಳಹದಿ. ಈ ಸುದೃಢವಾದ ತಳಹದಿಯ ಮೇಲೆ ಆರ ಮಹನೀಯರು ಸಾವಿರಾರು ವರ್ಷಗಳಿಂದ ಸುಂದರವಾದ ಕಟ್ಟಡವನ್ನು ಕಟ್ಟಿ ಕೊಂಡು ಬಂದಿದ್ದಾರೆ. ನಮ್ಮ ಜನಾಂಗವನ್ನು ಒಂದು ದೊಡ್ಡ 'ಧರ್ಮಸಂಸಾರ' ವೆಂದು ಹೇಳಬಹುದು. ನಮ್ಮಲ್ಲಿ ನಿಂತರೆ ಧರ್ಮ, ಕುಳಿತರೆ ಧರ್ಮ; ಬೆಳಗೆದ್ದರೆ ರಾತ್ರಿ ಮಲಗುವ ವರೆಗೂ ನಾವು ಮಾಡಬೇಕಾದ ಪ್ರತಿಯೊಂದು ಕರ್ಮವೂ ಧರ್ಮ ಮಯ. ಒಂದೊಂದು ವಿಧಿಯೂ, ಒಂದೊಂದು ನಿಯಮವೂ,