ಅವನಿಗೆ ವಿರೋಧವಾಗಿ ನಡೆಯಬೇಕಾಯಿತು. ತಾನು ಸುಳ್ಳುಸಾಕ್ಷಿ ಹೇಳಲಾರೆನೆಂದು ಕಂಠೋಕ್ತವಾಗಿ ಹೇಳಿಬಿಟ್ಟನು. ಇದರಿಂದ ಆತನಿಗೆ ಮಹಾಕೋಪ ಉಂಟಾಗಿ, ಸ್ವಲ್ಪ ದಿವಸದಲ್ಲಿಯೇ ಸುಳ್ಳು ಪತ್ರ ಗಳನ್ನು ಹುಟ್ಟಿಸಿ ಖುದಿರಾಮನಮೇಲೆ ದಾವಾಹಾಕಿ ಆತನ ಅಲ್ಪ ಸ್ವಲ್ಪ ಪಿತ್ರಾರ್ಜಿತ ಸ್ವತ್ತನ್ನೆಲ್ಲಾ ಅಪಹರಿಸಿಬಿಟ್ಟನು. ಖುದಿರಾಮನಿಗೆ ಡೇರೆಯಲ್ಲಿ ನಿಲ್ಲುವುದಕ್ಕೆ ಒಂದು ಹೆಜ್ಜೆ ಜಾಗವೂ ಇಲ್ಲದಂತಾ ಯಿತು. ಈ ದುರ್ದರೆಯನ್ನು ಕಂಡು ಊರಿನವರಿಗೆಲ್ಲಾ ಕನಿಕರ ಉಂಟಾದರೂ ರಾಮಾನಂದರಾಯನ ಮೇಲಿನ ಭಯದಿಂದ ಅವನಿಗೆ ಸಹಾಯಮಾಡಲು ಯಾರೂ ಮುಂದುವರಿಯಲಿಲ್ಲ. ಈಗ ಖುದಿರಾಮನಿಗೆ ೪೦ ವರ್ಷ. ಸಂಸಾರ ದೊಡ್ಡದು. ಅದರ ಮೇಲೆ ಬಡತನ. ಆದರೂ 'ರಾಮನೇಗತಿ' ಯೆಂದು ಹೇಗೋ ಕಾಲವನ್ನು ತಳ್ಳುತ್ತಿದನು. ಈ ಸಮಾಚಾರವು ಕೆಲವುದಿನಗಳಲ್ಲಿ,ಡೇರೆಗೆ ಸುಮಾರು ಎರಡುಮೈಲಿಯಲ್ಲಿದ್ದ ಕಾಮಾರಪುಕುರ ಗ್ರಾಮದ ಸುಖಲಾಲಗೋಸ್ವಾಮಿಯ ಕಿವಿಗೆಬಿತ್ತು. ಖುದಿ ರಾಮನಿಗೂ ಈತನಿಗೂ ಮೊದಲಿನಿಂದಲೂ ಸ್ನೇಹವಿದುದರಿಂದ ಈ ಕಷ್ಟಕಾಲದಲ್ಲಿ ಅವನನ್ನು ಬರಮಾಡಿಕೊಂಡು ತನ್ನ ಮನೆಯಲ್ಲಿಯೇ ಇರಲು ಸ್ವಲ್ಪ ಜಾಗವನ್ನು ಕೊಟ್ಟದ್ದಲ್ಲದೆ ಕೆಲವುದಿನಗಳಾದ ಮೇಲೆ ಸುಮಾರು ಅರ್ಧ ಎಕರೆ ಜಮೀನನ್ನೂ ಕೊಟ್ಟನು. ಇಲ್ಲಿಂದ ಮುಂದಕ್ಕೆ ಕಾಮಾರಪುಕುರವೇ ಖುದಿರಾಮನ ವಾಸಸ್ಥಾನವಾಯಿತು.
ಈ ಕಷ್ಟಾನುಭವದಿಂದ ಖುದಿರಾಮನಿಗೆ ಪ್ರಾಪಂಚಿಕ ಸುಖವು ಕ್ಷಣಿಕವೆಂಬುದು ಮನಸ್ಸಿಗೆ ತಟ್ಟಿ ವೈರಾಗ್ಯವು ಹೆಚ್ಚಿತು. ಶಾಂತಿ, ತೃಪ್ತಿ, ಈಶ್ವರ ನಿರ್ಭರತೆ ಇವು ಹೆಚ್ಚುತ್ತಾಹೋದುವು. ಅವನ ಮುಖದಲ್ಲಿ ಕಂಡುಬರುತ್ತಿದ್ದ ಒಂದುವಿಧವಾದ ತೇಜಸ್ಸನ್ನೂ ಶಾಂತಿಯನ್ನೂ ಗ್ರಾಮ ನಿವಾಸಿಗಳೆಲ್ಲರೂ ನೋಡಿ ಅವನನ್ನು ಋಷಿಯಂತೆ ಗೌರವದಿಂದಲೂ ಭಕ್ತಿಯಿಂದಲೂ ಕಾಣುತ್ತಿದ್ದರು. ಅವನನ್ನು