ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೩೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೬
ಶ್ರೀ ರಾಮಕೃಷ್ಣ ಪರಮಹಂಸರ

ಇದೇ ಕಾಲದಲ್ಲಿಯೇ ಶ್ರೀಮತಿ ಚಂದ್ರಾದೇವಿಗೂ ಒಂದು ವಿಚಿತ್ರವಾದ ಸ್ಪಷ್ಟವಾಯಿತು. ಒಂದುದಿನ ರಾತ್ರಿಯಾವನೋ ಒಬ್ಬ ದಿವ ಪುರುಷನು ತನ್ನ ಹಾಸಿಗೆಯಲ್ಲಿ ಮಲಗಿದದನ್ನು ನೋಡಿ ಬೆಚ್ಚಿ ದೀಪವನ್ನು ದೊಡ್ಡದುಮಾಡಿ ನೋಡಿದಳು. ಆದರೆ ಯಾರೂ ಇರಲಿಲ್ಲ. ಬಾಗಿಲಿನ ಅಗಳಿ ಹಾಕಿದುಹಾಕಿದ ಹಾಗೆಯೇ ಇತ್ತು. ಇದನ್ನು ನೋಡಿ ಏನೂ ತಿಳಿಯದ ಆಕೆಯು ಯಾರೋ ಹೊರಗಣಿ೦ದ ಬ೦ದಿದು ಉಪಾಯವಾಗಿ ಅಗಳಿಯನ್ನು ಹಾಕಿಕೊಂಡು ಹೊರಟು ಹೋಗಿದ್ದಾರೆಂದು ಭಾವಿಸಿಕೊಂಡಳು. ನೆರೆ ಹೊರೆಯವರು ಇದನ್ನು ಕೇಳಿ ನಕ್ಕು ಅದೆಲ್ಲಾ ಕನಸೆಂದು ನಿರ್ಧರ ಮಾಡಿದರು. ಇನ್ನೊಂದುದಿನ ತಮ್ಮ ಮನೆಯ ಎದುರಿಗಿರುವ ಈಶ್ವರ ದೇವಸ್ಥಾನದ ಹತ್ತಿರ ನಿಂತಿರಲು ಅಲ್ಲಿಂದ ಒಂದು ದಿವ್ಯ ಜ್ಯೋತಿಯು ಹೊರಟು ಆಕೆಯ ದೇಹವನ್ನು ಪ್ರವೇಶಿಸಿದಂತಾಯಿತು. ಇಲ್ಲಿಂದ ಮುಂದಕ್ಕೆ ಆಕೆಯಲ್ಲಿ ಗರ್ಭಿಣಿಯ ಚಿಹ್ನೆಗಳು ಕಾಣುತ್ತ ಬಂದುವು. ಖುದಿರಾಮನು ಊರಿಗೆ ಬಂದಕೂಡಲೇ ಈ ವಿಷಯಗಳನ್ನೆಲ್ಲಾ ಆತನಿಗೆ ತಿಳಿಸಲು ಖುದಿರಾಮನು ತನ್ನ ಸ್ವಪ್ನವನ್ನು ಜ್ಞಾಪಿಸಿ ಕೊಂಡು" ಇದನ್ನು ಯಾರೊಡನೆಯೂ ಹೇಳಬೇಡ. ಶ್ರೀರಘುವೀರನು ನಮ್ಮ ಮೇಲೆ ಕೃಪೆಮಾಡಿ ಹೀಗೆಲ್ಲಾ ನಡೆಸಿದ್ದಾನೆ” ಎಂದು ಹೇಳಿ ಸಮಾಧಾನಮಾಡಿದನು.

ಶಿವಮಂದಿರದಬಳಿಯಲ್ಲಿ ಜ್ಯೋತಿಯ ದರ್ಶನವಾದಂದಿನಿಂದ ಚಂದ್ರಾದೇವಿಗೆ ಆಗಾಗ್ಗೆ ದೇವದೇವಿಯರ ಮೂರ್ತಿಗಳು ಕಾಣು ತಿದ್ದುವು. ಈ ಕಾಲದವರು "ಇದೆಲ್ಲಾ ಅಜ್ಜಮ್ಮನಕಥೆ! ದೇವದೇವಿಯರೆಂದರೇನು ? ಅದನ್ನು ನೋಡುವುದೆಂದರೇನು ? ಈ ಇಪ್ಪತ್ತನೆಯ ಶತಮಾನದಲ್ಲಿಯೂ ಇದನ್ನು ನಂಬುವರಾರು ?" ಎಂದು ಆಕ್ಷೇಪಿಸಬಹುದು. ಆದರೆ ಮಹಾಪುರುಷರು ಅವತಾರಮಾಡುವ, ಕಾಲದಲ್ಲಿ ಅವರ ತಾಯಿತಂದೆಗಳಿಗೆ ಅಸಾಧಾರಣವಾದ ಆಧ್ಯಾತ್ಮಿಕ ಅನುಭವವೂ, ದರ್ಶನವೂ ಆಗುವವಿಷಯವು ಪ್ರಪಂಚದ ಎಲ್ಲಾ