ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೩೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೩
ಚರಿತ್ರೆ

ತೆಂದ ಓಡಿಹೋದರು. ಗದಾಧರಮಾತ್ರ ಮನಸ್ಸಿನಲ್ಲಿ ಏನೇನೋ ಯೋಚಿಸುತ್ತ ನಿಂತಿದ್ದನು. ಆಮೇಲೆ ಎರಡುಮೂರುದಿನ ಒಂದು ಮರದ ಹಿಂದಿನಿಂದ ಹೆಂಗಸರು ಸ್ನಾನಮಾಡುತ್ತಿದ್ದದ್ದನ್ನು ನೋಡಿದನು. ತನಗೆ ಏನೂ ಆಗಲಿಲ್ಲ. ಆಗ ತನ್ನನ್ನು ಹಿಂದೆ ಬೈದಿದ್ದ ಮುದುಕಿ ಬರುವದನ್ನು ಕಾದಿದ್ದು ಆಕೆಯನ್ನು ಕಂಡೊಡನೆಯೇ "ಮೊನ್ನೆ ದಿನ ನಾಲ್ಕು ಜನ ಸ್ನಾನಮಾಡುತ್ತಿದ್ದ ಹೆಂಗಸರನ್ನು ನೋಡಿದೆ. ನಿನ್ನೆ ದಿನ ಆರು ಜನರನ್ನು ನೋಡಿದೆ. ಈದಿನ ಎಂಟು ಜನರನ್ನು ನೋಡಿದೆ. ನನಗೇನೂ ಆಗಲೇ ಇಲ್ಲವಲ್ಲ !" ಎ೦ದ ಕೇಳಿದನು. ಆ ಮುದುಕಿಯು ಇದನ್ನು ಕೇಳಿ ನಕ್ಕು ಚ೦ದ್ರಾದೇವಿಗೆ ಈ ವರ್ತಮಾನವನ್ನು ತಿಳಿಸಿದಳು. ದೇವಿಯು ಗದಾಧರನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು ಮಗು, ನೀನುಹೀಗೆಲ್ಲ ಮಾಡಿದರೆ ನಿನಗೇನೂ ಆಗುವುದಿಲ್ಲ, ಆದರೆ ಹೆಂಗಸರಿಗೆ ತುಂಬ ಅವಮಾನವಾಗುತ್ತೆ. ಅವರೆಲ್ಲರೂ ನನ್ನ ಹಾಗೆ. ಅವರಿಗೆ ಅವಮಾನಮಾಡಿದರೆ ನನಗೆ ಅವಮಾನ ಮಾಡಿದಂತೆಯೇ ಆಗುತ್ತದೆ. ಆದ್ದರಿಂದ ಇನ್ನು ಮೇಲೆ ಯಾವಾಗಲೂ ಹೀಗೆಮಾಡಬೇಡ. ಅವರ ಮನಸ್ಸನ್ನೂ ನನ್ನ ಮನಸ್ಸನ್ನೂ ನೋಯಿಸಿದ್ದರಿಂದ ನಿನಗಾಗವುದೇನು? ” ಎಂದು ತಿಳಿಯ ಹೇಳಿದಳು. ಗದಾಧರನು ಅದನ್ನು ಗ್ರಹಿಸಿ ಪುನಃ ಹಾಗೆ ಮಾಡುವುದನ್ನು ಬಿಟ್ಟು ಬಿಟ್ಟನು.

ಪಾಠಶಾಲೆಗೆ ಹೋಗಿಬರುತ್ತ ಓದುವದನ್ನೂ ಬರೆಯುವುದನ್ನೂ ತಕ್ಕಮಟ್ಟಿಗೆ ಕಲಿತುಕೊಂಡನು. ಗಣಿತದಮೇಲೆ ಮಾತ್ರ ಸ್ವಲ್ಪವೂ ಗಮನ ಕೊಡಲಿಲ್ಲ. ಕೊನೆಯವರೆಗೂ ಇದರಲ್ಲಿ ಅಭಿರುಚಿ ಹುಟ್ಟಲೇ ಇಲ್ಲ. ಪಾಠಶಾಲೆಗೆ ಸರಿಯಾಗಿ ಹೋಗುತ್ತಲೂ ಇರಲಿಲ್ಲ. ದೇವ ದೇವಿಯರ ಮೂರ್ತಿಗಳನ್ನು ಮಾಡುವುದರಲ್ಲಿ ಅವನಿಗೆ ತುಂಬ ಇಷ್ಟವಿತ್ತು. ಒಂದೊಂದು ದಿನ ಕುಂಬಾರರ ಮನೆಗೆ ಹೋಗಿ ಅಲ್ಲಿ ವಿಗ್ರಹಗಳನ್ನು ಮಾಡುತ್ತ ಕುಳಿತುಬಿಡು