ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪
ಶ್ರೀ ರಾಮಕೃಷ್ಣಪರಮಹಂಸರ

ತಿದ್ದನು. ಹೀಗೆ ರಾಮಾಯಣ ಮಹಾಭಾರತ ಮುಂತಾದ ಪುಣ್ಯ ಕಥೆಗಳನ್ನು ಕಲಿತಿದದಲ್ಲದೆ, ಅವಗಳನ್ನು ಯಾವರೀತಿಯಲ್ಲಿ ಹೇಳಿದರೆ ಕೇಳುವವರ ಮನಸ್ಸಿಗೆ ಹಿಡಿಯುವುದೆಂಬುದನ್ನು ಲಕ್ಷ್ಯವಿಟ್ಟು ತಿಳಿದುಕೊಳ್ಳುತ್ತಿದ್ದನು. ಅವನ ಅಪೂರ್ವವಾದ ಜ್ಞಾಪಕಶಕ್ತಿಯೂ ಸೂಕ್ಷ, ಬುದ್ದಿ ಯೂ ಇದರಲ್ಲಿ ಬಹಳ ಸಹಕಾರಿಗಳಾದುವು. ಪಾಠಶಾಲೆಗೆ ಹೋದಾಗಲೂ ಅನೇಕವೇಳೆ ಪಾಠಗಳಿಗೆ ಗಮನವನ್ನೆ ಕೊಡುತ್ತಿರಲಿಲ್ಲ. ಮತ್ತೊಬ್ಬರು ಆಡಿದಹಾಗೆ ಆಡುವುದು, ಮಾಡಿದ ಹಾಗೆ ಮಾಡುವುದು, ಎಂಥವರನ್ನೆ ಬೇಕಾದರೂ ಅನುಕರಣ ಮಾಡಿ ಹಾಸ್ಯ ಮಾಡುವುದು ಇವುಗಳಲ್ಲಿ ಅದ್ಭುತ ಶಕ್ತಿ ಇತ್ತು. ಹೀಗೆ ತಾನು ಸದಾ ಸಂತೋಷಚಿತ್ತನಾಗಿರುತ್ತಿದನಲ್ಲದೆ ಮಿಕ್ಕ ಹುಡುಗರು ಇವನ ಜೊತೆಯಲ್ಲಿದ್ದಾಗ ಬೇರೊಂದು ಚಿಂತೆಯಿಲ್ಲದೆ ಸುಖವಾಗಿರುತ್ತಿದ್ದರು.

ಹೀಗಿರಲು ಗದಾಧರನ ವಿಚಾರದಲ್ಲಿ ಅವನ ತಾಯಿತಂದೆಗಳಿಗೆ ಚಿಂತೆಗೆ ಕಾರಣವಾಯಿತು. ಅವನು ಹುಟ್ಟಿದಂದಿನಿಂದ ಇಂದಿನವರೆಗೆ ಎಂದೂ ಅಸ್ವಸ್ಥನಾಗಿದದ್ದೇ ಇಲ್ಲ. ಇಂಥ ಆರೋಗ್ಯ ಭಾಗ್ಯವಿದ್ದದ್ದರಿಂದ ಗಗನಚಾರಿಯಾದ ಪಕ್ಷಿಯಂತೆ ಸಂತೋಷವಾಗಿ ಆಡಿ ಕೊಂಡಿದ್ದನು. ದೇಹದ ಮೇಲೆ ಗಮನ ಹೋಗದಿರುವಿಕೆಯ ಸ೦ಪೂರ್ಣ ಆರೋಗ್ಯ ಸ್ಥಿತಿಯ ಲಕ್ಷಣವೆಂದು ಸಮರ್ಥರಾದ ವೈದ್ಯರ ಹೇಳಿದ್ದಾರೆ. ಗದಾಧರನಿಗೆ ಇಂಥ ಆರೋಗ್ಯ ಸ್ಥಿತಿ ಇತ್ತು. ಅದರಲ್ಲಿಯೂ ಅವನಿಗೆ ಸ್ವಾಭಾವಿಕವಾಗಿ ಬಂದ ಏಕಾಗ್ರಚಿತ್ತವು ಯಾವುದಾದರೂ ಒಂದು ಪದಾರ್ಥದಲ್ಲಿ ನಟ್ಟು ಹೋದರೆ, ಆಗ ದೇಹದ ಮೇಲಣ ಪ್ರಜ್ಞೆಯು ಸಂಪೂರ್ಣವಾಗಿ ಲೋಪ ಹೊಂದಿ ಕೇವಲ "ಭಾವನಯ" ನಾಗುತ್ತಿದನು. ಮಂದಮಾರುತನಿ೦ದ ಆಂದೋಳಿತವಾಗಿ ಆನಂದದಲ್ಲಿ ತಲೆ ತೂಗುತ್ತಿರುವ ಪೈರುಸಜ್ಜೆಗಳಿಂದ ಕೂಡಿದ, ಹಸುರಾದ, ವಿಸ್ತಾರವಾದ ಮೈದಾನ, ನದಿಯ ಅವಿರಳವಾದ ಅನಂತವಾದ ಪ್ರವಾಹ, ಪಕ್ಷಗಳ ಅವ್ಯಕ್ತ ಮಧುರ