ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಟ 5 ವಾದ ಕಲಗಾನ, ಎಲ್ಲದರ ಮೇಲೂ ಇರುವ ಸುನೀಲವಾದ ಅ೦ತ ರಿಕ್ಷ, ಮತ್ತು ಅದರ ಮಧ್ಯದಲ್ಲಿ ಕ್ಷಣಕ್ಷಣಕ್ಕೂ ಬದಲಾಯಿಸು ತಿರುವ ಮೇಘರಾತಿಯ ಮಾಯಾರಾ ಮುಂತಾದ ಸೃಷ್ಟಿ ನೌc ದರ್ಯ ವಿಶೇಷಗಳು ಅವನನ್ನು ಭಾವರಾಜ್ಯದಲ್ಲಿ ಎಲ್ಲಿಗೋ ತೆಗೆದು ಕೊಂಡು ಹೋ{\ ಬಿಡುತ್ತಿದವು. ಮುಂದೆ ಹೇಳುವ ವೃತ್ತಾಂತವೂ ಅವನ ಇಂಥ “ಭಾವಪ್ರಾಣತೆ" ಯಿಂದಲೇ ನಡೆದದ್ದು. ಒಂದು ದಿನ ಮೈದಾನದಲ್ಲಿ ಓಡಾಡುತ್ತಿರುವಾಗ ಗದಾಧರನು, ರುದ್ರನಾದ ರೆಕ್ಕೆಗಳನ್ನು ಬಿಚ್ಚಿ ನಿರಾತಂಕವಾಗಿ ೩೬೦ತರಿಕ್ಷದಲ್ಲಿ ಹಾರಾಡುತ್ತಿದ ಕೆಲವು ಸುಂದರವಾದ ಒಲಾಕಾ ಪಕ್ಷಗಳನ್ನು ನೋಡಿ ಆನಂದಲ್ಲಿ ತನ್ಮಯನಾಗಿಹೋದನು. ದೇಹದ ಮೇಲಣ ಪ್ರಜ್ಞೆಯೇ ತಪ್ಪಿ ಕೆಳಗೆ ಬೀಳಲು ಜೊತೆಯಲ್ಲಿ ಹುಡುಗರು ಅವನನ್ನು ಹೊತ್ತು ಕೊಂಡು ಹೋಗಿ ಅವನ ತಾಯಿತಂದೆಗಳಿಗೆ ಈ ವರ್ತಮಾನವನ್ನು ತಿಳಿಸಿದರು. ಖುದಿರಾಮನೂ ಚಂದ್ರಾದೇವಿಯೂ ಇದನ್ನು ಕೇಳಿ ವಿಧವಿಧವಾಗಿ ಚಿಂತಿಸಿ ಕೊನೆಗೆ ನರ್ಫೆ ಹೋಗಿರಬೇಕೆಂದು ನಿಶ್ಚ ಯಮಾಡಿ ಅದಕ್ಕೆ ತಕ್ಕ ಔಷಧವನ್ನು ಕೊಡಿಸಿದ್ದಲ್ಲದೆ ಶಾ೦ತಿ ಜಸ ಮುಂತಾದನ್ನು ಮಾಡಿಸಿದರು. ಗದಾಧರನು ಮಾತ್ರ ಈ ವಿಷಯ ವನ್ನು ಆಗಾಗ್ಗೆ ನೆನೆಸಿಕೊಂಡು ತನ್ನ ಮನಸ್ಸು ಆಗ ಒಂದು ವಿಚಿತ್ರ ವಾದ ಭಾವದಲ್ಲಿ ಲೀನವಾಗಿ ಹೋಗಿತ್ತೆಂದೂ ತಾನು ಹೊರಗಿನ ನದಾರ್ಥಗಳನ್ನು ನೋಡುತ್ತಿರಲಿಲ್ಲ ದಿದ್ದರೂ ಒಳಗೆ ಪ್ರಜ್ಞೆ ಇತ್ತೆಂದೂ ಒಂದು ವಿಧವಾದ ಅಪೂರ್ವವಾದ ಆನಂದಉಂಟಾಗಿತ್ತೆಂದೂ ಹೇಳುತ್ತಿದನು. ಇಷ್ಟು ಹೊತ್ತಿಗೆ ಗದಾಧರಸಿಗೆ ಆರು ವರ್ಷ ತುಂಬಿ ಏಳನೆಯ ವರ್ಷ ನಡೆಯುತ್ತಿತ್ತು. ರಾಮಚ೦ದ್ರನ ಸೋದರಮಾವನಾದ ಖುದಿರಾಮನನ್ನು ಮರ್ಗೋತ್ಸವಕ್ಕೆ (ನವರಾತ್ರಿಯಪೂಜೆ) ಬರೆ ಬೇಕೆಂದು ಹೇಳಿ ಕಳುಹಿಸಿದನು. ಪ್ರತಿವರ್ಷವೂ ಖುದಿರಾಮನು ಅಲ್ಲಿಗೆ ಹೋಗಿ ಬರುವ ಸದ ತಿಯತ್ತು, ಈಸಾ ಆತನಿಗೆ ದೇಹ