ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಶ್ರೀ ರಾಮಕೃಷ್ಣಪರಮಹಂಸರ

ದಲ್ಲಿ ಆರೋಗ್ಯ ವಿರಲಿಲ್ಲ. ಆದರೂ “ಶರೀರವ್ರ ದಿನದಿನಕ್ಕೆ ದುರ್ಬಲವಾಗುತ್ತಿದೆ. ನಾನು ಈ ವರ್ಷ ಹೋಗದೆಹೋದರೆ ಮತ್ತೆ ಹೋಗಿ ನೋಡುವೆನೆ೦ಬ ನಂಬುಗೆ ಏನು? " ಎಂದಂದು, ಕೊಂಡು ರಾಮಕುಮಾರನು ಚಿಂತೆಯಲ್ಲಿ ಹೊರಟನು. ಅಲ್ಲಿ ಹೋದಕೂಡಲೆ ರೋಗವುಹೆಚ್ಚಿ ದಶಮಿಯದಿನದ ಹೊತ್ತಿಗೆ ನಿಶ್ಯಕ್ತಿ ಯಾಗಿ ಮಾತಾಡುವುದು ಕಷ್ಟವಾಯಿತು. ಮಧ್ಯಾಹ್ನದ ಹೊತ್ತಿಗೆ ರಾಮಚ೦ದ್ರನು ಬೇಗಬೇಗ ಪೂಜೆಯನ್ನು ಮುಗಿಸಿಕೊಂಡು ಪ್ರತಿಮೆ ಯನ್ನು ವಿಸರ್ಜನೆಮಾಡಿ ಬಂದನು. ಅಷ್ಟುಹೊತ್ತಿಗಾಗಲೆ ಖುದಿ ರಾಮನಿಗೆ ಅಂತ್ಯಕಾಲವು ಪ್ರಾಪ್ತವಾಗಿತ್ತು. ಬಹಳ ಹೊತ್ತಿ ನಿಂದಲೂ ಒಂದುಮಾತನ್ನೂ ಆಡದೆ ಜ್ಞಾನವಿಲ್ಲದೆ ಬಿದ್ದಿದ್ದ ಮಾವ ನನ್ನು ನೋಡಿ ರಾಮಚಂದ್ರನು ಕಣ್ಣೀರ ಸುರಿಸುತ್ತಾ " ಮಾವ! ನೀನು ಯಾವಾಗಲೂ ಮಾತುಮಾತಿಗೂ ರಘುವೀರ ರಘುವೀರ ಎನ್ನುತ್ತಿದ್ದೆ. ಈಗಲೇಕೆ ಅವನನ್ನು ಸ್ಮರಿಸಿಕೊಳ್ಳುವುದಿಲ್ಲ?” ಎಂದನು. ರಘುವೀರನಮಾತು ಕಿವಿಗೆ ಬಿದ್ದಕೂಡಲೆ ಖುದಿರಾಮನಿಗೆ ಚೈತನ್ಯ ಬಂದು ಮೆಲ್ಲಗೆ ಕಂಪಿತವಾದ ಸ್ವರದಿಂದ “ ಯಾರು, ರಾಮಚಂದ್ರನೆ?' ಪ್ರತಿಮೆಯ ವಿಸರ್ಜನೆ ಮಾಡಿಯಾಯಿತೆ ? ಸ್ವಲ್ಪ ಎಬ್ಬಿಸಿ ಕೂರಿಸು" ಎಂದನು. ಅದರಂತೆ ಉಪಾಯವಾಗಿ ಎಬ್ಬಿಸಿ ಕೂರಿ ಸಲು ಮೂರುಸಾರಿ ಗಂಭೀರ ಸ್ವರದಿಂದ ರಘುವೀರನ ನಾಮೋ ಚ್ಚಾರಣೆಮಾಡಿ ಖುದಿರಾಮನು ದೇಹತ್ಯಾಗ ಮಾಡಿದನು. ಸಿಂಧು. ಬಿಂದು ಸಿಂಧುವಿನೊಡನೆ ಮಿಳಿತವಾಗಿ ಹೋಯಿತು. ಮರುದಿನವೇ ಈ ವರ್ತಮಾನವು ಕಾಮಾರಪುಕರಕ್ಕೆ ತಲಪಿ ಆ ಆನಂದಧಾಮವನ್ನು ನಿರಾನಂದದಿಂದ ತುಂಬಿತು.

ಚ೦ದ್ರಾದೇವಿಯ ದುಃಖಕ್ಕೆಪಾರವಿರಲಿಲ್ಲ. ಅವಳಭಾಗಕ್ಕೆ ಪ್ರಸಂಚವೆಲ್ಲಾ ಶೂನ್ಯವಾಗಿ ಕಂಡಿತು. ಆದ್ದರಿಂದ ಶ್ರೀ ಶ್ರೀ ರಘು ವೀರನನ್ನು ಶರಣುಹೊಕ್ಕು ಸಂಸಾರದ ಚಿಂತೆಯನ್ನು ಬಿಟ್ಟುಬಿಡ ಬೇಕೆಂದು ಮನಸ್ಸನ್ನುಮಾಡಿದಳು. ಆದರೆ ಆಕೆಯು ಸಂಸಾರ .