ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೯
ಚರಿತ್ರೆ

ಶಾಸ್ತ್ರಜ್ಞರು. ಆದ್ದರಿಂದ ಈ ಪೂಜಕ ಸ್ಥಾನಕ್ಕೆ ಯಾರುಸಿಕ್ಕಿದರವರನ್ನು ನಿಯಮಿಸಲಾಗುವುದಿಲ್ಲ ಎಂಬುದನ್ನು ತಮಗೆ ತಿಳಿಸುವುದು ಅನಾವಶ್ಯಕ."

ರಾಮಕುಮಾರನು ತಾಂತ್ರಿಕ ಸಾಧಕ: ಶಕ್ತಿ ಮಂತ್ರದ ಉಪದೇಶವನ್ನು ಪಡೆದಿದ್ದನು. ಅಲ್ಲದೆ ಅವನಿಗೆ ದೇವಿಯಲ್ಲಿ ಅಗಾಧ ವಾದ ಭಕ್ತಿಇತ್ತು. ಆದ್ದರಿಂದ ದೇವಿಯ ಪ್ರತಿಷ್ಠಾಪನೆಯಂಥ ಪುಣ್ಯಕೆಲಸವು ನಿಂತುಹೋಗುವುದೆಂಬ ಶಂಕೆಯಿಂದ ಬೇರೆ ಯಾವ ನಾದರೂ ಒಬ್ಬ ಯೋಗ್ಯನಾದ ಅರ್ಚಕನು ಸಿಕ್ಕುವವರೆಗೆ ಕಾಳಿಕಾ ಪೂಜೆಯ ಕೆಲಸವನ್ನು ತಾನೇ ವಹಿಸಿದನು. ಹಿಂದೆ ಗೊತ್ತಾಗಿದ್ದ ದಿವಸದಲ್ಲಿಯೇ ಜಗದಂಬೆಯ ಪ್ರತಿಷ್ಠೆಯು ನಡೆದುಹೋಯಿತು. ದೂರದೂರ ದೇಶಗಳಿಂದ ಸಾವಿರಾರು ಜನ ಬ್ರಾಹ್ಮಣರು ಬಂದಿದ್ದರು. ರಾಣಿಯು ಪ್ರತಿಯೊಬ್ಬ ಬ್ರಾಹ್ಮಣನಿಗೂ ಒಂದೊಂದು ಪಟ್ಟಿಯ ಮಡಿ, ಒಂದು ಉತ್ತರೀಯ, ಒಂದುವರಹ ಈ ಮೇರೆ ದಾನ ಮಾಡಿದಳು. ಆದಿನ ನಡೆದ ದಾನಧರ್ಮಕ್ಕೆ ನೆಲೆಯಿರಲಿಲ್ಲ. ಮೊದಲನೆಯದಿನದ ಖರ್ಚೇ ಒಂಬತ್ತು ಲಕ್ಷರೂಪಾಯಿಗೆ ಮೀರಿತ್ತು.