ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೬೯ 25. ಚರಿತ್ರೆ ಅದೇ ಮಂಟಪದ ಒಂದು ಮೂಲೆಯಲ್ಲಿಯೇ ಪರಮಹಂಸರೂ ಅನ್ಯಮನಸ್ಕರಾಗಿ ಕುಳಿತಿದ್ದರು. ಅವರ ಮುಖವನ್ನು ನೋಡು ತಲೆ ತೋತಾಪುರಿಯ ಮನಸ್ಸಿಗೆ ಇಂಥ ಉತ್ತಮವಾದ ಅಧಿಕಾರಿ ಯು ಸಿಕ್ಕುವುದು ಅಪೂರ್ವವೆಂದು ಬೊಧೆಯಾಯಿತು. ತಂತ್ರ ಸಾಧನೆಯೇ ವಿಶೇಷ ಪ್ರಚಾರದಲ್ಲಿರುವ ಬಂಗಾಳಾದೇಶದಲ್ಲಿ ಇಂಥ ವೇದಾಂತಸಾಧನೆಯ ಅಧಿಕಾರಿಯು ಇರುವನೇ ಎಂದು ಆಶ್ಚರ್ಯದಿಂದ ಅವರನ್ನು ಕುರಿತು “ ನಿನ್ನನ್ನು ನೋಡಿದರೆ ಉತ್ತಮ ವಾದ ಅಧಿಕಾರಿಗಳೆಂದು ತೋರುತ್ತಿರಿ. ನೀವು ವೇದಾಂತ ಸಾಧನೆ ಮಾಡುತ್ತೀರಾ?” ಎಂದು ಕೇಳಿದನು. ಆಜಾನುಬಾಹುವಾದ ಜಟಾಧಾರಿಯಾದ, ನಗ್ನಾವಸ್ಥೆಯಲ್ಲಿದ ಸನ್ಯಾಸಿಯ ಪ್ರಶ್ನೆಯನ್ನು ಕೇಳಿ ಪರಮಹಂಸರು " ಏನು ಮಾಡಬೇಕೋ ಏನುಮಾಡಬಾರದೋ ನನಗೆ ಒಂದೂ ಗೊತ್ತಿಲ್ಲ. ನನ್ನ ತಾಯಿಗೆ ಎಲ್ಲಾ ಗೊತ್ತು. ಆಕೆಯು ಅಪ್ಪಣೆಕೊಟ್ಟರೆ ಆಗಬಹುದು. ” ಎಂದು ಹೇಳಿದರು. ಸನ್ಯಾಸಿಯು “ ಹಾಗಾದರೆ ಈಗಲೇ ಹೋಗಿ ನಿಮ್ಮ ತಾಯಿಯನ್ನು ಕೇಳಿ ಬನ್ನಿ. ಏಕೆಂದರೆ ನಾನು ಬಹುಕಾಲ ಇಲ್ಲಿರುವುದಿಲ್ಲ”. # ಎಂದು ಹೇಳಿದನು. ಪರಮಹಂಸರೂ ಕೂಡಲೆ ಕಾಳಿಕಾದೇವ ನಕ್ಕೆ ಹೋಗಿ ಅಲ್ಲಿ ಭಾವಾವಿಷ್ಟರಾಗಿ “ ಹೋಗು, ಉಪದೇಶ ತೆಗೆದು ಕೊ ; ನಿನಗೆ ಉಪದೇಶಮಾಡುವುದಕ್ಕಾಗಿಯೇ ಆ ಸನ್ಯಾಸಿಯು ಇಲ್ಲಿಗೆ ಬಂದಿರುವುದು ” ಎಂಬ ದೈವವಾಣಿಯನ್ನು ಕೇಳಿ ಬಂದು ಅದನ್ನು ತೋತಾಪುರಿಗೆ ತಿಳಿಸಿದರು. ತೋತಾಪುರಿಗೆ ಸಂತೋಷವಾಯಿತು. ಉಪದೇಶವಾಗುವು ದಕ್ಕೆ ಮುಂಚೆ ಶಿಖಾಯಜ್ಯೋಪವೀತಗಳನ್ನು ಪರಿತ್ಯಾಗಮಾಡಿ ಶಾಸ್ತ್ರೀಯವಾಗಿ ಸನ್ಯಾಸಗ್ರಹಣ ಮಾಡಬೇಕೆಂದು ಹೇಳಲು ಪರಮ ಹಂಸರು ಸ್ವಲ್ಪ ಹಿಂದುಮುಂದು ನೋಡಿ ಗುಟ್ಟಾಗಿ ಹಾಗೆಮಾಡುವು + ಏಕೆಂದರೆ ಮೂರು ದಿನಕ್ಕೆ ಮೇಲ್ಪಟ್ಟು ಆ ತನು ಒ೦ದು ಸ್ಥಳ ದಲ್ಲಿ ನಿಲ್ಲುತ್ತಿರಲಿಲ್ಲ.