ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಶ್ರೀ ರಾಮಕೃಷ್ಣ ಪರಮಹಂಸರ

ಆರು ತಿಂಗಳ ಕಾಲ ಸಮಾಧಿ ಭಂಗವಾಗಲಿಲ್ಲ. ಅಷ್ಟು ಹೊತ್ತಿಗೆ ಸರಿಯಾಗಿ ಒಬ್ಬ ಸಾಧುವು ಅಲ್ಲಿಗೆ ಅಕಸ್ಮಾತ್ತಾಗಿ ಬಂದು ಪರಮಹಂಸರಿಂದ ಮುಂದೆ ವಿಶೇಷವಾಗಿ ಲೋಕಕಲ್ಯಾಣವಾಗತಕ್ಕದಿದೆ ಎಂದು ಹೇಳಿ ನಾನಾ ಉಪಾಯಗಳಿಂದ ಅವರ ದೇಹವನ್ನು ಕಾಪಾಡಿಕೊಂಡು ಬಂದನು. ಆರನೆಯ ತಿಂಗಳ ಕೊನೆಯಲ್ಲಿ ಅವರಿಗೆ ವಿಚಿತ್ರ ದಿವ್ಯಾನುಭವವಾಗಿ ಜಗದಂಬೆಯು ಅಶರೀರವಾಣಿಯಿಂದ ಮೂರುಸಲ “ ಭಾವಮುಖದಲ್ಲಿರು!” “ಭಾವಮುಖದಲ್ಲಿರು! " "ಭಾವಮುಖದಲ್ಲಿರು!" ಎಂದು ಆಜ್ಞೆ ಮಾಡಿದ್ದನ್ನು ಕೇಳಿದರು.

ಇದಾದ ಕೆಲವು ದಿನಗಳ ಮೇಲೆ ಗೋವಿಂದರಾಯನೆಂಬೊಬ್ಬ ಮಹಮ್ಮದೀಯಧರ್ಮ ಸಾಧಕನು ದಕ್ಷಿಣೇಶ್ವರಕ್ಕೆ ಬಂದನು. ಆತ ನನ್ನು ನೋಡಿ ಪರಮಹಂಸರಿಗೆ ಮಹಮ್ಮದೀಯ ಧರ್ಮವನ್ನೂ ಅಭ್ಯಾಸಮಾಡಬೇಕೆಂಬ ಪ್ರವೃತ್ತಿಹುಟ್ಟಿತು. ಆ ಸಂಗತಿಯನ್ನು ಕುರಿತು ಅವರು ಹೇಳಿರುವುದೇನೆಂದರೆ, “ ಆ ಕಾಲದಲ್ಲಿ ಅಲ್ಲಾ ಮಂತ್ರವನ್ನು ಜಪಿಸುತ್ತಿದ್ದೆ. ಮುಸಲ್ಮಾನರ ಹಾಗೆ ವೇಷಭೂಷ ಗಳನ್ನು ಹಾಕಿಕೊಳ್ಳುತ್ತಿದೆ. ಮೂರು ಹೊತ್ತು ನಮಾಜುಮಾಡುತ್ತಿದ್ದೆ. ಹಿಂದೂಭಾವವು ಮನಸ್ಸಿನಲ್ಲಿ ಸುತರಾಂ ಲೋಪವಾಗಿ ಹೋಗಿತ್ತು. ಹಿಂದೂ ದೇವತೆಗಳಿಗೆ ನಮಸ್ಕಾರಮಾಡುವುದು ಹಾಗಿರಲಿ, ಅವುಗಳ ದರ್ಶನಮಾಡುವುದಕ್ಕೂ ಮನಸ್ಸು ಬರುತ್ತಿರ ಲಿಲ್ಲ. ಹೀಗೆ ಮೂರುದಿವಸಗಳು ಕಳೆದಮೇಲೆ ಇಸ್ಲಾಂ ಮತಸಾಧ ನವು ಫಲಿಸಿತು.”

ಇದರಂತೆ ಪರಮಹಂಸರಿಗೆ ಕ್ರಿಸ್ತನು ದರ್ಶನಕೊಟ್ಟಂತೆಯೂ ಕ್ರೈಸ್ತಮತದ ಅನುಭವವೂ ಬಂದಂತೆಯೂ ಹೇಳಲ್ಪಟ್ಟಿದೆ.