ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಒಂಬತ್ತನೆಯ ಅಧ್ಯಾಯ. ಕಾಮಾರಪುಕುರಕ್ಕೆ ಹೋಗಿ ಒಂದು; ತೀರ್ಥಯಾತ್ರೆ. ಆರುತಿಂಗಳಕಾಲ ಸರಿಯಾದ ಅನ್ನಾಹಾರಗಳಿಲ್ಲದೆ ನಿರ್ವಿಕಲ್ಪ ಸಮಾಧಿಯಲ್ಲಿ ಇದ್ದದ್ದರಿಂದಲೋ ಏನೋ ಪರಮಹಂಸರಿಗೆ ಈ ಸಮಯದಲ್ಲಿ ಒಂದು ಭಯಂಕರವಾದ ಹೊಟ್ಟೆಯನೋವು ಪ್ರಾಪ್ತ ನಾಯಿತು. ಏನೇನೋ ಚಿಕಿತ್ಸೆ ಮಾಡಿದರು. ರೋಗವು ಯಾವು ದಕ್ಕೂ ಜಗ್ಗದೆ ಸುಮಾರು ಆರು ತಿಂಗಳ ಕಾಲ ಅದನ್ನು ಅನುಭವಿಸ ಬೇಕಾಯಿತು. ಈಗ ಸ್ವಲ್ಪ ಶಮನವಾಯಿತು. ಮನಸ್ಸು ಭಾವ ಮುಖದಲ್ಲಿ ದೈತಾದೈತ ಭೂಮಿಯಲ್ಲಿರುವುದಕ್ಕೆ ಅಭ್ಯಾಸವಾ ಗುತ್ತ ಬಂತು. ಆದರೆ ದೇಹಸ್ಥಿತಿ ಮಾತ್ರ ಮೊದಲಿನಂತೆ ಇರಲಿಲ್ಲ. ಮಳೆಗಾಲ ಬಂದು ಗಂಗಾನದಿಯ ನೀರೆಲ್ಲ ಕದಡಿಹೋಗಿ ಆ ನೀರನ್ನು ಕುಡಿದರೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಳ್ಳ ಬಹು ದೆಂಬ ಹೆದರಿಕೆಯಾಯಿತು. ಆದ್ದರಿಂದ 1867 ನೇ ಇಸವಿಯಲ್ಲಿ ಇನ್ನೂ ವರ್ಷಾಕಾಲ ಹುಟ್ಟುವುದಕ್ಕೆ ಸ್ವಲ್ಪ ಮುಂಚೆಯೇ ಪರಮ ಹಂಸರು ಜೊತೆಯಲ್ಲಿ ಹೃದಯನನ್ನೂ ಭೈರವಿ ಬ್ರಾಹ್ಮಣಿ+ಯನ್ನೂ ಕರೆದುಕೊಂಡು ಕಾಮಾರಪುಕುರಕ್ಕೆ ಹೋದರು.

  • ಭೈರವಿಬ್ರಾಹ್ಮಣಿಯು ಪರಮಹ೦ಸರನ್ನು ಇನ್ನೂ ಬಿಟ್ಟು ಹೋ ಗಿರಲಿಲ್ಲ ವೇದಾ೦ತ ಸಾಧನೆಯ ಕಾಲದಲ್ಲಿಯೂ ಆಕೆ ದಕ್ಷಿಣೇಶ್ವರ ದಲ್ಲಿಯೇ ಇದ್ದಳು; ಆದರೆ ವೇದಾ೦ತ ಮಾರ್ಗವು ಶುಷ್ಕ ಮಾರ್ಗ ವೆ೦ದೂ ಅದನ್ನು ಅಭ್ಯಾಸ ಮಾಡಲು ತೋತಾಪುರಿಯ ಹತ್ತಿರಕ್ಕೆ ಹೋಗ ಕೂಡದೆಂದೂ ಪರಮಹಂಸರಿಗೆ ಹೇಳುತ್ತಿದ್ದಳು. ಅವರು ಶ್ರೀ ಶಾರದಾ ದೇವಿಗೆ ಶ್ರದ್ಧೆ ವಹಿಸಿ ಶಿಕ್ಷಣವನ್ನು ಕೊಡುತ್ತಿದ್ದರೆ ಅದನ್ನು ಕಂಡು ಅವರ ಬ್ರಹ್ಮಚರ್ಯದಲ್ಲಿ ಸ೦ಶಯ ಹುಟ್ಟ ತ೦ತೆ. ಇದು ತನ್ನ