ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ ೭೫

ಪರಮಹಂಸರು ಕಾಮಾರಪು ಕುರದಲ್ಲಿ ಸುಮಾರು ಏಳುತಿ೦ಗ ಇದ್ದು ಆಮೇಲೆ ದಕ್ಷಿಣೇಶ್ವರಕ್ಕೆ ಹಿಂತಿರುಗಿ ಬಂದರು. (ಶಾರದಾ ದೇವಿಯನ್ನು ಅವರ ತೌರುಮನೆಯವರು ಬಂದು ಕರೆದುಕೊಂಡು ಹೋದರು.) ಅಲ್ಲಿಗೆ ಬಂದ ಸುಮಾರು ಮೂರು ತಿಂಗಳಿಗೆ ಮಧುರಾ ನಾಥನು ನವರಿವಾರನಾಗಿ ವರಮಹಂಸರನ್ನೂ ಜೊತೆಯಲ್ಲಿ ಕರೆದು ಕೊಂಡು ಕಾಶಿ, ಬೃಂದಾವನ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗಿ ತೀರ್ಥಯಾತ್ರೆ ಮಾಡಿಕೊಂಡು ಬಂದನು. ಈ ತೀರ್ಥ ಯಾತ್ರೆಯಲ್ಲಿ, ಸಾಧುಸಂತರು, ಗುರುಗಳು, ಮಹಾತ್ಮರು ಅಲ್ಲಲ್ಲಿ ಯಾರಾದರೂ ಇದ್ದರೆಂದು ಕೇಳಿದರೆ ಪರಮಹಂಸರು ಅವರನ್ನು ದರ್ಶನಮಾಡಿಕೊಂಡು ಬರುತ್ತಿದ್ದರು. ಅನೇಕ ಸಾಧಕರೂ ಪರಮ ಹಂಸರನ್ನು ಕಂಡು ಅವರಿಂದ ಸಹಾಯ ಪಡೆದು ಕೃತಾರ್ಥರಾದರು. ಈ ತೀರ್ಥಯಾತ್ರೆ ಮಾಡುತ್ತಿರುವಾಗಲೇ ಅವರು ಒಂದು ಹಳ್ಳಿ,ಯಲ್ಲಿ ಕೆಲವು ತೀರ ದರಿದ್ರರನ್ನು ನೋಡಿ ಕಣ್ಣೀರುಹಾಕಿ ಅವರಿಗೆಲ್ಲ ಅಭ್ಯಂಗನ ಸುಖವಾದಊಟಗಳನ್ನು ಮಾಡಿಸಿ ಒಂದೊಂದು ಬಟ್ಟೆಯನ್ನು ಕೊಟ್ಟ ಹೊರತು ತಾವು ಮುಂದಕ್ಕೆ ಹೊರಡುವುದಿಲ್ಲವೆಂದು ಹಟಮಾಡಿ ಅಳುತ್ತ ಕುಳಿತುಕೊಂಡರಂತೆ. ಆಗ ಮಧುರಾನಾಥನು ನಾವಿರಾರು ರೂಪಾಯಿ ವೆಚ್ಚ ಮಾಡಿ ಅವರ ಅಭಿಪ್ರಾಯದಂತೆ ನಡೆಸಿದ ಮೇಲೆ ಪ್ರಯಾಣವು ಮುಂದಕ್ಕೆ ಸಾಗಿತು.

ಇತ್ತ ಶಾರದಾದೇವಿಯು ಜಯರಾಮವಾಡಿಯಲ್ಲಿ ವಾಸಮಾಡುತ್ತ ತನ್ನ ಸ್ವಾಮಿಯು ಬಂದು ತನ್ನನ್ನು ಯಾವಾಗ ಕರೆದುಕೊ೦ಡು ಹೋಗುವನೋ ಎಂದು ಎದುರುನೋಡುತ್ತಿದ್ದಳು. ಅವರನ್ನು ಕಾಮಾರಪುಕುರದಲ್ಲಿ ನೋಡಿದ ಮೇಲೆ ನಾಲ್ಕು ವರ್ಷಗಳು ಕಳೆದು ಹೋದುವು. ಆದರೂ ಇನ್ನೂ ಕರೆಸಿಕೊಳ್ಳದ್ದನ್ನು ನೋಡಿ ಆಕೆಯ ಮನಸ್ಸಿಗೆ ಬಹಳ ಕೊರತೆಯಾಯಿತು. ಆದರೂ ಕಾಮಾರಪುಕುರದಲ್ಲಿ ಅವರ ಜೊತೆಗೆ ವಾಸಮಾಡುತ್ತಿದ್ದಾಗ ಪತಿಯು ತೋರಿಸುತ್ತಿದ್ದ ಪ್ರೀತಿ, ವಿಶ್ವಾಸಗಳನ್ನು ಜ್ಞಾಪಕ ಮಾಡಿ