ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹತ್ತನೆಯ ಅಧ್ಯಾಯ.

ಸಾಧಕಭಾವಸಮಾಲೋಚನೆ..

ಸ್ವಾಮಿವಿವೇಕಾನಂದರೇ ಮುಂತಾದ ಶಿಷ್ಯರು ಪರಮಹಂಸರ ಸೇವೆಗೆ ಬಂದು ನಿಂತಾಗ ಅವರ ಸಾಧನೆಗಳೆಲ್ಲವೂ ಮುಗಿದುಹೋಗಿದ್ದುವು. ತೋತಾಪುರಿ, ಭೈರವಿ ಬ್ರಾಹ್ಮಣಿ ಮುಂತಾದ ಗುರುಸಾಧಕರೆಲ್ಲರೂ ದಕ್ಷಿಣೇಶ್ವರನನ್ನು ಬಿಟ್ಟು ಹೊರಟುಹೋಗಿದ್ದರು. ಮಧುರಾನಾಥ, ರಾಣಿ ರಾಸಮಣಿ, ರಾಮೇಶ್ವರ ಮುಂತಾದವರೆಲ್ಲರೂ ಸ್ವರ್ಗಸ್ಥರಾಗಿದ್ದರು. ಈ ಸಾಧನೆಗಳನ್ನೆಲ್ಲ ಕಣ್ಣಾರೆ ನೋಡಿ, ಅವುಗಳಲ್ಲಿ ಆಸಕ್ತಿಯಿಟ್ಟು ತತ್ವಾವಧಾನ ಮಾಡಿನೋಡಿದ ಜನರು ಆಗ ಯಾರೂ ಇರಲೇ ಇಲ್ಲವೆಂದು ಹೇಳಬಹುದು. ಆದ್ದರಿಂದ ಪರಮಹಂಸರು ತಮ್ಮ ಸಾಧನಗಳನ್ನು ಕುರಿತು ಪ್ರಸ್ತಾಪಿಸಿ ಶಿಷ್ಯ ಮಂಡಲಿಗೆ ವಿಸ್ತಾರವಾಗಿ ಅವೆಲ್ಲವನ್ನೂ ತಿಳಿಯಪಡಿಸದಿದರೆ ಅವರು ಮಾಡಿದ ಸಾಧನಗಳು ಜನಗಳಿಗೆ ತಿಳಿಯಬರುತ್ತಲೇ ಇರಲಿಲ್ಲ ವೆಂದು ತೋರುತ್ತದೆ. ಈ ಭಾಗವೆಲ್ಲ ಬಹುಮಟ್ಟಿಗೆ ಅವರು ಸ್ವಂತವಾಗಿ ಆಡಿದ ಮಾತುಗಳಿಂದಲೇ ಗ್ರಥಿತವಾಗಿದೆ. ಅಲ್ಲಲ್ಲಿ ಅವರ ಮಾತುಗಳನ್ನೆ ವಾಕ್ಯವೇಷ್ಟನದಲ್ಲಿ ಬರೆದಿರುವುದನ್ನು ನೋಡಿ ಪಾಠಕರು ಆಗಲೇ ಈ ವಿಷಯವನ್ನು ಸ್ವಲ್ಪ ಮಟ್ಟಿಗಾದರೂ ಊಹಿಸಿರಬಹುದು.

ನಮ್ಮ ಕಡೆಯಲ್ಲಿ ಅನೇಕರು ಈ ಸಾಧನೆಗಳ ಹೆಸರನ್ನೇ ಕೇಳಿಲ್ಲ. ಪ್ರಾಣಾಯಾಮ ಮಾಡುವುದು ಬಟ್ಟೆಯನ್ನು ನುಂಗಿ ತೆಗೆದು ಅಥವಾ ದೇಹದೊಳಕ್ಕೆ ನೀರನ್ನು ಸೆಳೆದುಕೊಂಡು ಶುದ್ದಿ ಮಾಡಿಕೊಳ್ಳುವುದು ಮುಂತಾದುವುಗಳನ್ನು ಕೆಲವರು ನೋಡಿರ