ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೮೧
- (1) ಎಷ್ಟು ಕ್ಲಶಕರಗಳಾಗಲಿ ಅಸಹಕರಗಳಾಗಲಿ ಶಾಸ್ತ್ರೋಕ್ತವಾದ ಸಾಧನಗಳೆಲ್ಲವೂ ಸತ್ಯ.
- (2) ಎಲ್ಲಾ ಮತಗಳೂ ಸತ್ಯ.
- (3) ಈಶ್ವರನಾಕ್ಷಾತ್ಕಾರವೇ ಅವೆಲ್ಲವುಗಳ ಉದ್ದೇಶ್ಯವೂ ಆಗಿದೆ: ಸಿದ್ದಿಗಳನ್ನು ಪಡೆಯುವುದಲ್ಲ.
- (4) ವಿಷಯಸುಖದಲ್ಲಿ ವೈರಾಗ್ಯ ಹುಟ್ಟಿದ ಹೊರತು ಸಿದ್ಧಿಯಾಗುವುದಿಲ್ಲ.[೧]
- (5) ನಿಜವಾದ ವ್ಯಾಕುಲತೆಯಿದ್ದರೆ ಯಾವ ಸಾಧನೆಯ ಸಹಾಯವೂ ಇಲ್ಲದೆ ಈಶ್ವರಸಾಕ್ಷಾತ್ಕಾರವಾಗುವುದು. ಬೇಕಾದ ಅನುಕೂಲಗಳೆಲ್ಲವೂ ತಾವಾಗಿಯೇ ಒದಗಿಬರುವುವು.
- (6) ವ್ಯಾಕುಲತೆಯ, ವೈರಾಗ್ಯವೂ ಎಷ್ಟು ಪ್ರಬಲವಾಗಿದ್ದರೆ ಅಷ್ಟು ಬೇಗ ಸಿದ್ಧಿಯಾಗುವುದು (ಎಷ್ಟೋ ಸಾಧನೆಗಳಲ್ಲಿ ಪರಮಹಂಸರು ಮೂರುದಿನಗಳೊಳಗಾಗಿ ಸಿದ್ಧರಾದರೆಂಬುದನ್ನು ಇಲ್ಲಿ ಪಾಠಕರು ಜ್ಞಾಪಿಸಿಕೊಳ್ಳಬೇಕು.)
- (7) ಎಂಥ ಉತ್ತಮನಾದ ಸಾಧಕನಿಗೂ ಗುರುಸಹಾಯ ಬೇಕು. ಇತ್ಯಾದಿ...
ವೇದಕಾಲದಿಂದ ಇಂದಿನವರೆಗೆ ಪ್ರಚಾರದಲ್ಲಿದ್ದ ಮುಖ್ಯ ಮುಖ್ಯವಾದ ನಕಲ ಸಾಧನಗಳನ್ನೂ, ಮಾರ್ಗಗಳನ್ನೂ, ಮತ ಗಳನ್ನೂ ಅನುಷ್ಠಾನಮಾಡಿ ಅವುಗಳೆಲ್ಲ ವೂ ಸತ್ಯವೆಂದೂ ಅವುಗಳ ಉದ್ದೇಶವೆಲ್ಲವೂ ಒಂದೇಯೆಂದೂ ತೋರಿಸಿಕೊಟ್ಟ ಪರಮಹಂಸರ ಮಹಿಮೆಯನ್ನು ಎಷ್ಟೆಂದು ಹೇಳೋಣ ! ಇಂಥವರನ್ನು ಅವತಾರ ಪುರುಷರೆಂದೆನ್ನದೆ ಮತ್ತೇನೆನ್ನ ಬೇಕು? ಸಂಸಾರವನ್ನು ತ್ಯಾಗಮಾಡಿ ಆಜೀವನವೂ ಶ್ರಮಪಟ್ಟರೂ ಒಂದೊಂದು ಮಾರ್ಗದಲ್ಲಿಯಾದರೂ ಸಿದ್ಧರಾಗುವುದು ಕಷ್ಟ. ಅಂಥದರಲ್ಲಿ ಒಂದಾದಮೇಲೆ ಒಂದರಂತೆ ಅವರು ಎಷ್ಟು ಸಾಧನೆಗಳನ್ನು ಮಾಡಿ ಮುಗಿಸಿ ಸಿದ್ಧರಾದರು!
- ↑ Cf. You cannot serve both God and Mammon.