ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಹನ್ನೊಂದನೆಯ ಅಧ್ಯಾಯ.
ಶ್ರೀ ಶ್ರೀರಾಮಕೃಷ್ಣ ಪರಮಹಂಸರ
ಗುರುಭಾವ.

ಅವಜಾನ೦ತಿಮಾಂ ಮೂಢಾ ಮಾನುಷೀಂತನು ಮಾಶ್ರಿತಂ |
ಪರ೦ಭಾವ ಮಜಾನ೦ತೋ ಮನಭೂತ ಮಹೇಶ್ವರಂ ||
ಗೀತಾ ೯-೧೧.
ಹೂ ಅರಳಿತು. ಅರಳಿ ಮಕರಂದದಿಂದ ತುಂಬಿ ತುಳುಕಾಡುತ್ತ
ದುಂಬಿಗಳ ಆಗಮನವನ್ನು ಎದುರುನೋಡುತ್ತ ಕಾದುಕೊಂಡು
ಕುಳಿತಿದು ಅವು ಬಂದಹಾಗೆಲ್ಲ ವಿಶ್ವಾಸದಿಂದ ಬರಮಾಡಿಕೊಂಡು,
ತಾಯಿಯ ಮಕ್ಕಳನ್ನು ಆದರಿಸುವಂತೆ ಅವುಗಳಿಗೆ ಮಕರಂದ
ವನ್ನು ಊಡಿ ತೃಪ್ತಿಗೊಳಿಸಿತು. ಅವೂ ಮಕರಂದಪಾನಮಾಡಿ
ಆನ೦ದದಿ೦ದ ಝೇಂಕರಿಸುತ್ತ ನಾನಾ ಕಡೆಗೆ ಹಾರಿಹೋಗಿ ಆ
ಮಧುಮಾಹಾತ್ಮೆಯನ್ನು ವಿವರಿಸಿದುವು.
ಹೂ ಎಷ್ಟು ದೊಡ್ಡದಾದರೆ ಅರಳುವುದಕ್ಕೆ ಅಷ್ಟು ಹೆಚ್ಚು
ಕಾಲಬೇಕು. ಆದ್ದರಿಂದ ರಾಮಕೃಷ್ಣ ಮಹಾಕುಸುಮವು ಚೆನ್ನಾಗಿ
ಅರಳುವುದಕ್ಕೆ ಹನ್ನೆರಡು ವರ್ಷಕಾಲ ಹಿಡಿಯಿತು. ಈಗ ಅರಳಿ,
ಕಳಿತ ಆ ಕುಸುಮವು ಹೊರಲಾರದಷ್ಟು, ಹಿಡಿಸಲಾರದಷ್ಟು ಜ್ಞಾನ
ಮಕರಂದವು, ಅದರಲ್ಲಿ ಶೇಖರಿಸಲ್ಪಟ್ಟಿದ್ದಿತು. ಶಿಷ್ಯ ಭೃಂಗಗಳೂ
ವಾಸನೆಯನ್ನು ಹಿಡಿದು ಒಂದೊಂದಾಗಿ, ನಾಲ್ಕುನಾಲ್ಕಾಗಿ ಗುಂಪು
ಗುಂಪಾಗಿ ಬರಲು ಮೊದಲುಮಾಡಿದುವು. ಸ್ತನ್ಯವುಸೇರಿ ಅದನ್ನು
ಇನ್ನೂ ಶಿಶುವು ಕುಡಿಯದೇ ಇದ್ದದ್ದರಿಂದ ಉತ್ಪನ್ನವಾಗುವ ಒಂದು