ಪುಟ:ಶ್ರೀ ಕೃಷ್ಣ ಲೀಲೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೮೪ಕೃಷ್ಣ ಲೀಲೆ

ನಾರದ:-
ಸೀ|| ಕಮನೀಯ ಶುಭಗಾತ್ ರಕಂಜಾತದಳ ನೇತ್ರ, ವಸುಧಾಕಳತ್ರ ಪಾವನಚರಿತ್ರ|
     ಸನಕಾದಿ ಯೋಗೀಂದ್ರ ಸನ್ನು ತ ಗುಣಧಾಮ| ಪತಿತಪಾವನ ನಾಮಭಕ್ತಸೋ
     ಮ! ವನರುಹಲೋಚನ ವೈಜಯ೦ತೀದಾಮ | ಮಕರ ಕುಂಡಲ ಕಾಂತಿಮ
     ಹಿತಸೀಮ | ಸಕಲಗುಣಾತೀತ ಸರ್ವಜ್ಞ ಸರ್ವೇಶ | ನಿಖಿಲ ಲೋಕಾಧಾರ
     ನಿರ್ಮಲಾತ್ಮ||

ಗೀ|| ಪುಂಡರೀಕಾಮಹನೀಯ ಪುಣ್ಯದೇಹ | ದೇವಮುನಿಸನ್ನುತಾಮೋದತೀ
     ರ್ಥಪಾದ| ಸತತ ಶುಭವರ್ತಿನಿರಪಾಯ ಶಾಂತಮೂರ್ತಿ ಚಾರುತರ ಕೀರ್ತಿಲೋ
     ಕೈಕ ಚಕ್ರವರ್ತಿ।।

     ಒಮ್ಮೆ ವಾಮನಾಶ್ರಮವಾಗಿದ್ದು, ತದನಂತರ ಶ್ರೀರಾಮಚಂದ್ರನ
ತಮ್ಮನಾದ ಶತ್ರುಘ್ನನಿಗೆ ರಾಜಧಾನಿಯಾಗಿದ್ದು, ಈಗ ಶ್ರೀಕೃಷ್ಣಮೂ
ರ್ತಿಗೆ ಜನ್ಮಭೂಮಿಯಾಗಿರುವ ಈ ಮಧುರಾಪುರವು ಪರಮಪವಿತ್ರವಾ
ದುದು. ಭಗವಂತನಾದ ಶ್ರೀಮನ್ನಾರಾಯಣಮೂರ್ತಿಯು, ಕಂಸಾದಿ
ದುಷ್ಟರಾಕ್ಷಸರನ್ನು ಸಂಹರಿಸಲೆಳಸಿ ಇಚ್ಚಾಮಾತ್ರವಾದ ದಿವ್ಯ ಶರೀ
ರವನ್ನು ಪರಿಗ್ರಹಿಸಿ, ಈ ಮಹಾಕ್ಷೇತ್ರದಲ್ಲವತರಿಸಿ ಗೋಕುಲದರಸ
ನಾದ ನಂದಗೋಪನಿಗೂ ಯಶೋದಾದೇವಿಗೂ ಸುಕುಮಾರನಾಗಿ
ಜನಿಸಿರುವಂತೆ ನಟಿಸುತ್ತ ತನ್ನ , ಅದ್ಭುತ ಲೀಲೆಗಳನ್ನು ತೋರ್ಪಡಿಸು
ತ್ತಿರುವನು. ಈಗಾಗಲೇ ಪೂತನೆಯೆಂಬ ರಕ್ಕಸಿಯನ್ನು ಸಂಹರಿಸಿ
ಯಮಸದನಕ್ಕೆ ಕಳುಹಿಸಿದನು. ಇನ್ನು, ಶಕಟ-ತೃಣಾವರ್ತ-ಧೇನು
ಕ, ಬಕ-ಪ್ರಲಂಬ-ಕೇಶಿ-ಅಘ-ವೃಕ-ಚಾಣೂರ-ಮುಷ್ಟಿಕ-ಮುಂತಾದ
ದುಷ್ಟ ಜಂತುಗಳನ್ನು ನಿರ್ಮೂಲ ಮಾಡಿ-ತದನಂತರ, ಲೋಕಕಂಟಕ
ನಾದ ಕಂಸನನ್ನು ಸಂಹರಿಸುವುದಕ್ಕಾಗಿ ರಾಮಕೃಷ್ಣರಿಬ್ಬರೂ ಇಲ್ಲಿಗೆ
ಬರುವರು, ಎಲೌ ಮಧುರೆಯೇ ! ನೀನೆಷ್ಟು ಪುಣ್ಯ ಮಾಡಿರುವೆಯೊ ||
ನಿನ್ನ ಹೆಸರೇ ಮಧುರವಾಗಿರುವುದು.

ಶ್ಲೋಕ|| ಅಧರಂ ಮಧುರಂ ವದನಂ ಮಧುರಂ| ನಯನಂ ಮಧುರಂ ಹಸಿತಂ ಮಧು
        ರಂ| ಹೃದಯಂ ಮಧುರಂ ಗಮನಂ ಮಧುರಂ| ಮಧುರಾಧಿಪತೇ ರಖಿಲಂ
        ಮಧುರಂ||