ಪುಟ:ಶ್ರೀ ಕೃಷ್ಣ ಲೀಲೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೭ಚತುರ್ಥಾoಕಂ

ನಾನರಿತಿರುವೆನು. ಜಗನ್ನಾಥಾ! ನಿನ್ನ ಲೀಲಾಜಾಲವನ್ನರಿಯಲು ಪರ
ಮತ ಪೋಧನರಾದ ಋಷಿ ಮುನಿಗಳಿಗೇ ಅಸಾಧ್ಯವಾಗಿರುವಲ್ಲಿ ಮನು
ಷ್ಯ ಮಾತ್ರರಿಗದು ಸಾಧ್ಯವೇ? ದೇವಾ! ನಿನ್ನ ಅನಂತನಾಮ ರೂಪಗ
ಳನ್ನು ಬಣ್ಣಿಸಲು ಯಾರಿಂದಾಗುವುದು?

[ಎಂದು ಬಿನ್ನವಿಸಿ ಉದ್ದವನು ಭಗವಂತನನ್ನು ಸ್ತೋತ್ರ ಮಾಡುವನು]
 
ಗೋಪೀನಾಥಸ್ತುತಿ.
[ಆನಂದರಗಳೆ]

ಶ್ರೀ ಕರುಣಾಕರ ಗೋಪೀನಾಯಕ| ಪ್ರಾಕಟ ಶುಭಕರ ಗೋಪೀನಾಯಕ|| ಬ್ರಹ್ಮಾಂಡಾಧಿಪ ಗೋಪೀನಾಯಕ| ಬ್ರಹ್ಮಾದಿವಿನುತ ಗೋಪೀನಾಯಕ||
ಶ್ರೀರಮಣೀವರ ಗೋಪೀನಾಯಕ | ನೀರಜಲೋಚನ ಗೋಪೀನಾಯಕ|| ಮಾರಜನಕ ವರ ಗೋಪೀನಾಯಕ| ವಾರಿಧಿ ಮಂದಿರ ಗೋಪೀನಾಯಕ||
ನಾರಾಯಣಹರಿಗೆ ಗೋಪೀನಾಯಕ| ಬೃಂದಾರಕನುತ ಗೋಪೀನಾಯಕ|| ಚಂದ್ರ ಕೋಟಿನಿಭ ಗೋಪೀನಾಯಕ| ಮತ್ಸ್ಯರೂಪಧರ ಗೋಪೀನಾಯಕ||
ಮದ ಸೋಮಕಹರ ಗೋಪೀನಾಯಕ| ಕರ್ಮ ರೂಪಧರ ಗೋಪೀನಾಯಕ|| ಭರ್ಮಕುಧರ ಧರ ಗೋಪೀನಾಯಕ| ವರಾಹ ರೂಪಕ ಗೋಪೀನಾಯಕ||
ಹಿರಣ್ಯಾಕ್ಷ ಹರ ಗೋಪೀನಾಯಕ| ನಾರಸಿಂಹ ಹರಿ ಗೋಪೀನಾಯಕ|| ಘೋರ ಧನುಜ ಹರ ಗೋಪಿನಾಯಕ| ಆಹ್ಲಾದಾಲಯ ಗೋಪೀನಾಯಕ|| ಪ್ರಹ್ಲಾದೋದ್ದರ ಗೋಪೀನಾಯಕ | ವಾಮನ ಮೂರತಿ ಗೋಪೀನಾಯಕ|| ಕ್ಷೇಮಂಕರ ಶ್ರೀ ಗೋಪೀನಾಯಕ | ಭಾರ್ಗವರಾಮಾ ಗೋಪೀನಾಯಕ||
ಮಾರ್ಗ ಸುಧಾರಕ ಗೋಪೀನಾಯಕ| ರಘುಕುಲ ರಾಘವ ಗೋಪೀನಾಯಕ|| ಅಗಣಿತ ಗುಣಗಣ ಗೋಪೀನಾಯಕ| ಸೀತಾವಲ್ಲಭ ಗೋಪೀನಾಯಕ||
ನೀತಿವಿಶಾರದ ಗೋಪೀನಾಯಕ| ಪಾತಕ ಭಂಜನ ಗೋಪೀನಾಯಕ||
ಕೌಸಲ್ಯಸುತ ಗೋಪೀನಾಯಕ| ಕೌಶಲ್ಯೋನ್ನತ ಗೋಪೀನಾಯಕ|| ದಶರಥನಂದನ ಗೋಪೀನಾಯಕ| ಪಶುಪತಿ ಹಿತಕರ ಗೋಪೀನಾಯಕ|| ಕೌಶಿಕ ಮುನಿನುತ ಗೋಪೀನಾಯಕ| ಸೌಶೀಲ್ಯಾಧಿಕ ಗೋಪೀನಾಯಕ||
ಲಕ್ಷ್ಮಣಸೇವಿತ ಗೋಪೀನಾಯಕ| ಲಕ್ಷ್ಮೀವಲ್ಲಭ ಗೋಪೀನಾಯಕ||