ವುದರಲ್ಲಿ ಸಂಶಯವೇನಿದೆ ? ಪರಂತು ಜಗದ್ರಕ್ಷಕನಾದ ನಿನ್ನ ಅನುಗ್ರ
ಹಕ್ಕೆ ಪಾತ್ರನಾಗಬೇಕಾದರೆ ನಾನು ಭಾಗ್ಯಶಾಲಿಯೇ ಸರಿ ! ಜಗ
ನ್ಯಾಥಾ ! ಬಿನ್ನವಿಸುವೆನು.
ರಾಗ-ದರ್ಬಾರ್-ರೂಪಕ.
ಲಾಲಿಸೈ ರಮಾರಮಣನೆ | ಪೇಳುವೆನು ಪ್ರಸಕ್ತವಿಷಯ!||ಪ||
ಕೂಳರಾದ ಕ೦ಸಶಿಶುಪಾಲಾದಿಗಳದುರಾಗತವನು ||ಲಾ|| ಅ- ಪ॥
ದುರುಳದನುಜರೆಲ್ಲಕೂಡಿ| ಸುರಪತಿಯನು ಕಾಡಿಸುವರು|
ವರಪತಿವ್ರತೆಯರ ಕೆಡಿಸು | ತಿರುವ ಪರಿಯನೊರೆವೆನೀಗ ||ಲಾಲಿಸೈ||
ಯಜ್ಞಯಾಗಗಳನು ತಡೆದು | ಭಗ್ನಮಾಡುತಿರುವರವರ|
ನಿಗ್ರಹಕ್ಕೆಬೆದರುತಿಹರು | ಯಜ್ಞಗೈವರಿಲ್ಲವಯ್ಯ ||ಲಾಲಿಸೈ||
ಭವವಿದೂರ ದೇವದೇವ | ಪ್ರವಿಮಲಾತ್ಮಸಾಧುಪೋಷ|
ಶಿವರಾಮದಾಸವಿನುತ | ಅವಧರಿಸು ಮಹಾನುಭಾವಾ ||ಲಾಲಿಸೈ||
ಭಗವಂತನೆ! "ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾ೦||
ಧರ್ಮಸಂಸ್ಥಾಪನಾರ್ಥಾಯ| ಸಂಭವಾಮಿ ಯುಗೇ ಯುಗೇ॥”
ಎಂಬ ನಿನ್ನ ಸನಾತನ ಧರ್ಮವಾಕ್ಯವು ಈ ಸಂದರ್ಭದಲ್ಲಿ ನನ್ನ
ನೆನಪಿಗೆ ಬಂದಿರುತ್ತದೆ. ಲಕ್ಷ್ಮೀರಮಣಾ! ದುಷ್ಟರನ್ನು ಶಿಕ್ಷಿಸುವು
ದಕ್ಕೂ, ಶಿಷ್ಟರನ್ನು ರಕ್ಷಿಸುವದಕ್ಕೂ ಧರ್ಮರನ್ನು ನೆಲೆಗೊಳಿಸುವು
ದಕ್ಕೂ ನೀನಲ್ಲದೆ ಮತ್ತಾರಿರುವರು! ಅನಂತಾ! ನಿನ್ನಂತರಂಗದಲ್ಲಿ
ಸಂಕಲ್ಪಿಸಿದೆಯಾದರೆ, ಅಣುಮಾತ್ರವಾದ ಸಣ್ಣ ಪದಾರ್ಥವೇ ಬ್ರಹ್ಮಾಂಡ
ವಾಗಿ ಪರಿಣಮಿಸುವುದು. ನಿನ್ನಪ್ಪಣೆಯಾದರೆ ಕ್ಷಣಮಾತ್ರದಲ್ಲಿಯೇ
ಮೇರುಪರ್ವತವುಕೂಡಾ ತೃಣಮಾತ್ರವಾಗುವುದು ! ದೇವಾ ! ನೀನು
ಸ್ವತಂತ್ರನು! ಸರ್ವಾವ್ಯಾದಕನು! ಸರ್ವಾಂತರ್ಯಾಮಯು! ಸರ್ವತಂ
ತ್ರ ಸ್ವತಂತ್ರನು! ಸರ್ವಾಧಿಕಾರ ಸಂಪನ್ನನು! ಜಗದೇಕ ಚಕ್ರವರ್ತಿ
ಯು! ನಿನ್ನಿಷ್ಟನಿದ್ದಂತೆ ನಡಿಸು! ನಿನ್ನ ಚಿತ್ತವು !! ನಮ್ಮ ಭಾಗ್ಯವು !!!
ವಿಷ್ಣುವು:-ನಾರದಾ ! ನಿನ್ನ ಮನೋಭಾವವು ನಿಷ್ಕಳಂಕವಾ
ದುದು ! ನೀನು ಧನ್ಯತಮನು ! ನಿನ್ನಿಷ್ಟವನ್ನು ನಾನರಿತೆನು. ಹಾಗೆ
ಯೇ ನಡಿಸುವೆನು!
ನಾರದ:-ಮಹದಾಜ್ಞೆ|