ಉಗ್ರಸೇನ- (ವಸುದೇವನನ್ನು ಕುರಿತು)
ಮಮಪುತ್ರೀಂ, ದೇವಕೀನಾಮ್ನೀ೦ ಕನ್ಯಾ೦, ವರಾರ್ಥಿನೀಂ, ಶ್ರೀರೂಪಿಣೀಂ
ಹಿರಣ್ಯಗರ್ಭ ದೈವತ್ಯಾಂ। ಧರ್ಮಾರ್ಥಾದಿ ಚತುರ್ವಿಧ ಪುರುಷಾರ್ಥಸಾಧನಾರ್ಥಂ.
ತುಭ್ಯಮಹಂ ಸಂಪ್ರದದೇನಮಮ! ||
ನನ್ನ ಮಗಳಾದ ದೇವಕಿಯಂಬ ಹೆಸರುಳ್ಳವಳನ್ನು (ವರನನ್ನು
ಅಪೇಕ್ಷಿಸುತ್ತಿರುವ) ಲಕ್ಷ್ಮೀರೂಪಿಣಿಯಾದ ಈ ಕನ್ಯೆಯನ್ನು , ಧರ್ಮ
ಆರ್ಥ ಮುಂತಾದ ಚತುರ್ವಿಧ ಪುರುಷಾರ್ಥ ಸಾಧನೆಗಾಗಿ ನಿನಗೆ ಕೊಟ್ಟಿ
ರುತ್ತೇನೆ.
ಉಗ್ರಸೇನ:-
ಶ್ಲೋ|| ಕನ್ಯಾಂ ಕನಕ ಸಂಪನ್ನಾಂ ಕನಕಾಭರಣೈರ್ಯುತಾಂ|
ದಾಸ್ಯಾಮಿ ವಿಷ್ಣ ವೇತುಭ್ಯಂ ಬ್ರಹ್ಮಲೋಕ ಜಿಗೀಷಯಾ||
ತಾ|| ವಸುದೇವನೇ ! ಭಂಗಾರದ ಆಭರಣಗಳಿಂದಲಂಕರಿಸಲ್ಪ
ಟ್ಟ ಈ ಕನ್ಯೆಯನ್ನು, (ನನ್ನ ಬ್ರಹ್ಮಲೋಕ ಪ್ರಾಪ್ತಿಗಾಗಿ) ವಿಷ್ಣು
ಸ್ವರೂಪಿಯಾದ ನಿನಗೆ ಕೊಟ್ಟಿರುತ್ತೇನೆ !
(ಎಂದು, ವಸುದೇವನ ಹಸ್ತಾಂಜಲಿಯಲ್ಲಿ ದೇವಕಿಯ ಹಸ್ತ
ವನ್ನಿಡಿಸಿ ತುಲಸೀದಳದೊಂದಿಗೆ ಧಾರೆಯೆರೆವನು.)
ಉಗ್ರಸೇನ:- ಈ ನನ್ನ ಪುತ್ರಿಯನ್ನು ನೀನು ಸುಖವಾಗಿ
ಪಾಲಿಸಬೇಕು! ನನ್ನ ಭೀಷ್ಟದಂತೆ ನಡಿಸಬೇಕಾಗಿ ಕೋರುತ್ತಿರುವೆನು.
ವಸುದೇವ-ಪೂಜ್ಯರೇ ! ತಮ್ಮ ಮಾತನ್ನು ಮೀರುವುದಿಲ್ಲವು.
ತಮ್ಮಪ್ಪಣೆಯನ್ನು ಶಿರಸಾವಹಿಸುತ್ತೇನೆ.
ಪುರೋಹಿತರು:-ಎಲೈ ವಸುದೇವನೇ ! ಈ ಮಂಗಳಸೂತ್ರ
ವನ್ನು ದೇವಕಿಯ ಕಂಠಕ್ಕೆ ಅಲಂಕರಿಸು.
(ವಸುದೇವನು ಮಂಗಳಸೂತ್ರವನ್ನು ದೇವಕಿಯ ಕೊರಳಿಗೆ ಕಟ್ಟುವನು.)
ವಸುದೇವ-"ಮಾಂಗಲ್ಯಂ ತಂತುನಾನೇನ ಮಮಜೀವನ ಹೇ
ತುನಾ | ಕಂಠೇಬದ್ನಾಮಿ ಸುಭಗೇ ಸಾಜೀವಶರದಶ್ಶತಮ್ ||