ಪುಟ:ಶ್ರೀ ಕೃಷ್ಣ ಲೀಲೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭ತೃತೀಯಾಂಕಂ

ದಿದ್ದರೂ, ದುಃಖಪರಂಪರೆಯು ದಿನದಿನಕ್ಕೂ ಹೆಚ್ಚುತ್ತಿದೆ. ಅಕಟಾ !
ಈ ದುರ್ಭರ ಗರ್ಭವೇದನೆಯನ್ನೆಂತು ಸಹಿಸಲಿ? ಅಯ್ಯೋ ದೈವ
ವೇ ! ನಿನಗಾದರೂ ಕರುಣವಿಲ್ಲವೆ?

ಶಾ|| ಓ ಕಲ್ಯಾಣಮಯ ಸ್ವರೂಪ! ವರದಾ! ಓಂಕಾರ ತತ್ವಪ್ರದಾ | ಓ ಕಾರು
     ಣ್ಯ ಗುಣಪ್ರಕಾಶ! ಸುಕೃತೀ ! ಓ ಸತ್ಯ ಸಂವರ್ಧಕಾ। ಓ ವೈಕುಂಠ ನಿಧಾನ!
     ದೀನಶರಣಾ! ಓ ನಿರ್ಮಲಾ ! ನಿಶ್ಚಲಾ! ಓ ಕ೦ಜಾ ! ಪರಾತ್ಪರಾ! ಶುಭ
     ಕರಾ! ಮಾಂಪಾಹಿ | ಮಾ೦ಪಾಹಿ ಮಾಂ||

     ಕರುಣಾಸಮುದ್ರನಾದ ಭಗವಂತನೇ! ನಿನ್ನ ಸಂಕಲ್ಪವು ಯಾ
ವತೆರನಾಗಿರುವುದೋ ನಾನೇನು ಬಲ್ಲೆನು? ನೀನು ಸರ್ವಜ್ಣನು! ನಾ
ನು ಅಲ್ಪಜ್ಞಳು. ನೀನು ಸರ್ವಾಂತರ್ಯಾಮಿಯು! ನಾನು ಸಾಮಾ
ನ್ಯಳು. ನೀನು ಸಚ್ಚಿದಾನಂದಮೂರ್ತಿಯು! ನಾನು ವ್ಯಾಕುಲಚಿ
ತ್ತಳು. ನೀನು ದಾತನು ! ನಾನು ಆಶ್ರಿತಳು, ದೇವಾದಿದೇವನೇ !
ನಿನ್ನ ಮಹಾಶಾಸನವನ್ನು ಮೀರಿ ನಡೆಯತಕ್ಕವರಾರು ? ಎಲ್ಲವೂ
ನಿನ್ನ ಧೀನವು ! ನಿನ್ನ ನುಗ್ರಹವಿದ್ದಂತೆ ನಡೆಯಲಿ! ಜಗನ್ನಾಥಾ! ನಿನ್ನ
ಶರಣುಹೊಕ್ಕಿರುವೆವು ! ಅನಂತಾ ! ನಿನಗನಂತ ಕೋಟಿ ನಮಸ್ಕಾರ
ಗಳು!
     [ಎಂದು ದೇವಕಿಯು ಆಯಾಸದಿಂದ ನೆಲಕ್ಕೆರಗುವಳು.]

ವಸುದೇವ:-ದೇವಕಿಯನ್ನು ಸಂತೈಸುತ್ತ ಸಮಾಧಾನ ಹೇಳುವನು].

                   ರಾಗ-ನೀಲಾಂಬರಿ-ಅಟ.
ನಳಿನಾಯತಾಂಬಕಿ ಏಳು! ಕಷ್ಟತಾಳು || ಪ || ಕಳೆದ ಜನ್ಮದಿಗೈದ ಕಲುಷದ
ಫಲವಿದು, ಕಳವಳಪಡಿಸುತಲಿಹುದು, ಬಾಧಿಪುದು ||ನಳಿ||ಅ-ಪ|| ಪರ್ವೇಂದು
ಮುಖಿ ಲಾಲಿಸಿದನು. ಪೇಳ್ವುದನು | ಪೂರ್ವ ಕರ್ಮದ ಪಾಪ, ಕಂಸರೂಪದಿ ಬಂದು,
ಚರ್ವಿಸುತ್ತಿಹುದೆಮ್ಮನಿಂತು, ದುರ್ಭರದಿ ||ನಳಿ||

      ಪ್ರಿಯೇ! ಸ್ವಲ್ಪ ಸೈರಿಸಿಕೊ. ಚಿಂತಿಸಿ ಫಲವೇನು? ಕಾರಾ
ಗೃಹದಲ್ಲಿ ಬಂಧಿತರಾಗಿರುವ ನಾವು ಏನು ಮಾಡಬಲ್ಲೆವು ? ಹಿಂದಿನ