೩೯ತೃತೀಯಾಂಕಂ,
ತೃತೀಯಾಂಕಂ - ದ್ವಿತೀಯರಂಗಂ.
[ಬ್ರಹ್ಮಾದಿ ದೇವತೆಗಳು, ದೇವಕೀ ವಸುದೇವರಿರುವ ಕಾರಾ
ಗೃಹಕ್ಕೆ ಪ್ರವೇಶಿಸಿ ಭಗವಂತನನ್ನು ಸ್ತೋತ್ರಮಾಡುವರು.]
ದೇವತೆಗಳು:-
ಶ್ಲೋ॥ ಸತ್ಯವ್ರತಂಸತ್ಯಪರ೦ತ್ರಿಸತ್ಯಂ| ಸತ್ಯಸ್ಯಮೂಲಂನಿಹಿತಂಚಸತ್ಯೇ |ಸತ್ಯ
ಸ್ಯಸತ್ಯಂಋತಸತ್ಯನೇತ್ರಂ| ಸತ್ಯಾತ್ಮಕಂತ್ವಾ೦ಶರಣಂಪ್ರಪನ್ನಾಃ||
ಎಲೈ ಭಗವಂತನೇ! ನಂಬಿದವರನ್ನು ಕಾಪಾಡತಕ್ಕ ಪ್ರತಿಜ್ಞೆ
ಯುಳ್ಳವನಾದುದರಿಂದ ಶರಣಾಗತ ರಕ್ಷಕನೆಂತಲೂ, ಮುನ್ನು ಮಾಡಿದ
ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕಾಗಿ ದೇವಕಿಯ ಗರ್ಭವನ್ನು
ಹೊಕ್ಕಿರುವೆಯಾದುದರಿಂದ ಸತ್ಯಸಂಕಲ್ಪನೆಂತಲೂ, ಮಹಾತ್ಮರಾದ
ಬ್ರಹ್ಮವೇತ್ತರಿಂದ ಹೊಗಳಿಸಿಕೊಳ್ಳತಕ್ಕ ಪ್ರಭುವು ನೀನೇ ಸರಿ.
ವೇದಾಂತವೇದ್ಯನಾದ ನಿನ್ನ ಸಾಯುಜ್ಯವನ್ನು ಪಡೆಯುವುದಕ್ಕೆ ಸತ್ಯ
ವ್ರತವೇ ಪರಮಸಾಧನವು. ಪೃಥಿವ್ಯಪ್ತೇಜೋವಾಯುರಾಕಾಶಗಳೆಂಬ
ಪಂಚಭೂತಗಳಿಗೆ ಕಾರಣನಾಗಿಯೂ, ಅಂತರ್ಯಾಮಿಯಾಗಿಯೂ,
ದಿಗ್ದೇಶಕಾಲ ವ್ಯವಸ್ಥೆಗಳಿಗತೀತನಾಗಿಯೂ, ಆದಿಮಧ್ಯಾಂತರಹಿತನಾಗಿ
ಯೂ ಇರುವ ಸರ್ವತಂತ್ರ ಸ್ವತಂತ್ರನಾದ ನಿನ್ನ ಮರೆ ಹೊಕ್ಕಿರು
ವೆವು. ಜಗನ್ನಾಥಾ! ಬೇಗ ಅವತರಿಸು.
ಮಹೇಶ್ವರ:-ಎಲೈ ಕಮಲಾಕ್ಷನೆ! ಪ್ರಸನ್ನನಾಗು. ನಿನ್ನ
ಅವತಾರವನ್ನು ಎದುರು ನೋಡುತ್ತಿರುವ ದೇವತೆಗಳ ಮನಸ್ಸನ್ನು
ಸಂತೋಷಪಡಿಸು.
ಬ್ರಹ್ಮ:-ಲಕ್ಷ್ಮೀರಮಣ! ದೇವಕಿಯ ಗರ್ಭದಿಂದ ಬೇಗನೆ
ಅವತರಿಸು. ನಿನ್ನ ಅಪ್ರಾಕೃತ ದಿವ್ಯ ಮಂಗಳ ಸ್ವರೂಪವನ್ನು.
ನೋಡಬೇಕೆಂದು ಅತ್ಯಂತ ಶ್ರದ್ದಾಭಕ್ತಿಗಳಿಂದ ಕಾದಿರುವ, ಬ್ರಹ್ಮ
ಋಷಿ, ರಾಜಋಷಿ, ದೇವಋಷಿ ಪ್ರಮುಖರನ್ನು ಆನಂದಗೊಳಿಸು.
ನಾರದ:- ಸೀ॥ ದಂಡವು ಯೋಗೀಂದ್ರ ತಂಡವಿನೋದಿಗೆ, ದಂಡವಶೇಷ
ಬ್ರಹ್ಮಾಂಡಮಯಗೆ | ದಂಡವುಮಂಡಿತಕುಂಡಲದ್ವಯನಿಗೆ
ಪುಟ:ಶ್ರೀ ಕೃಷ್ಣ ಲೀಲೆ.djvu/೫೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ