ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀರಸ್ತು



ಶ್ರೀ ಕೃಷ್ಣ ಲೀಲೆ



--------------



ಅ ವ ತಾ ರಿ ಕೆ



--------------



"ಆರಬ್ಧಂ, ನೈಮಿಶಾರಣ್ಯೇ| ಸತ್ರಂ ದ್ವಾದಶವಾರ್ಷಿಕಂ|
ಆಜಗುರಖಿಲಾಸ್ಕತ್ರ | ಮುನಯೋಬ್ರಹ್ಮವಾದಿನಃ”||

ಪುಣ್ಯಭೂಮಿಯಾದ ನೈಮಿಶಾರಣ್ಯದಲ್ಲಿ, ಶೌನಕ ಮಹರ್ಷಿಯ
ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವಿಷ್ಣು ಪೂಜಾರೂಪವಾದ ಸತ್ರಯಾ
ಗಕ್ಕೆ ಬ್ರಹ್ಮವೇತ್ತರಾದ ಋಷಿಮುನಿಗಳು ಅನೇಕಾನೇಕವಾಗಿ ಬಂದು
ಸೇರಿದರು. ಹನ್ನೆರಡು ವರ್ಷಗಳ ಪರ್ಯಂತ ನಡೆಯಬೇಕಾದ ಆ ಮಹ
ತ್ಕಾರ್ಯಕ್ಕೆ ಭಗವತ್ಕಥಾವ್ರಸಂಗ ಮಾಡುವುದರಲ್ಲಿ ಅದ್ವಿತೀಯನೆನಿಸಿದ
ಸೂತ ಪೌರಾಣಿಕನು ಬಿಜಯ ಮಾಡಿದನು. ಮಹಾತ್ಮನಾದ ಸೂತ
ಪೌರಾಣಿಕನನ್ನು ನೋಡುತ್ತಲೇ ಋಷಿಮುನಿಗಳೆಲ್ಲರೂ ಭಕ್ತಿಪೂರ್ವ
ಕವಾಗಿ ನಮಸ್ಕಾರಗಳನ್ನಾಚರಿಸಿದರು. ಶೌನಕ ಮಹರ್ಷಿಯು
ಸೂತನಿಗೆ ಸಾಷ್ಟಾಂಗ ದಂಡ ಪ್ರಣಾಮಗಳನ್ನಾಚರಿಸಿ ಅರ್ಘ್ಯ ಪಾದ್ಯಾ
ದಿಗಳಿಂದ ಸತ್ಕರಿಸಿ ಉಚಿತಾಸನವನ್ನಿತ್ತನು. ಬ್ರಹ್ಮರ್ಷಿಗಳೆಲ್ಲರೂ
ಒಂದೇ ಅಭಿಪ್ರಾಯದಿಂದ ಸೂತನಿಗೆ ಬ್ರಹ್ಮಾಸನವನ್ನಿತ್ತರು. ಸೂತನು
ಋಷಿಮುನಿಗಳೆಲ್ಲರಿಗೂ ಪ್ರತಿವಂದನಗಳನ್ನಾಚರಿಸಿದನು. ಎಲ್ಲರೂ ಸುಖಾ
ಸೀನರಾದ ನಂತರ ಶೌನಕನು ಸಭಾಸದರ ಅಪ್ಪಣೆಯನ್ನು ಪಡೆದು
ಸೂತ ಪೌರಾಣಿಕನನ್ನು ಈ ರೀತಿಯಾಗಿ ಪ್ರಾರ್ಥಿಸಿದನು.