ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮ಕೃಷ್ಣಲೀಲೆ

   ವಾ೦ಚಿತದಾಯಿನಿ ವಿಶ್ವನುತೇ| ಮಂಜುಳ ಘೋಷಿಣಿ ಮಾಧವ ತೋಷಿಣಿ
   ದುರ್ಜನ ಗರ್ವ ವಿನಾಶಕೃತೇ||ಜಯ||೧|| ವರ ಶುಭಕಾಂಣಿ ಪರಿಜನಪಾ
   ಲಿನಿ ಪಾಪವಿದಾರಿಣಿ ಪದ್ಮಮುಖೀ| ಸುಜನ ವಿನೋದಿನಿ ಸೂನೃತ ರಂಜನಿ,
   ಪಾವನಿ ಶಿವರಾಮಾಭಿನುತೇ ||ಜಯ||೨||
 
   ಲೋಕಪಾವನಿಯಾದ ಯಮುನಾದೇವಿಯೆ! ನೀನು ಸರ್ವ
ಜ್ಞಳು. ಎಲ್ಲವನ್ನೂ ಬಲ್ಲೆ. ದಯವಿಟ್ಟು ನನಗೆ ದಾರಿಯನ್ನು ಬಿಡು.
ನಾನು ಗೋಕುಲಕ್ಕೆ ಹೋಗಿ ಪುನಃ ಈಗಲೇ ಹಿಂದಿರುಗಿಬರುವೆನು.
ಜನನೀ! ಕಟಾಕ್ಷಿಸು.
     (ಎಂದು ಪ್ರಾರ್ಥಿಸುವಾಗ್ಗೆ, ದೊಡ್ ಶಬ್ದವಾಗುವುದು! ಕೂಡಲೇ
ಯಮುನೆಯು ಸಾಕಾರವಾಗಿ ಪ್ರಸನ್ನಳಾಗಿ ವಸುದೇವನನ್ನು ಗೌರವಿ
ಸುವಳು.)

ಯಮುನೆ:- ಪುಣ್ಯಾತ್ಮನಾದ ವಸುದೇವನೆ! ನೀನು ಪರಮ
ಭಾಗ್ಯಶಾಲಿಯು. ಜಗದೇಕ ಸಾರ್ವಭೌಮನಾದ ಭಗವಂತನೇ ನಿನಗೆ
ಪುತ್ರನಾಗಿ ಅವತರಿಸಿರುವಲ್ಲಿ ನಿನ್ನ ಮಾತಿಗೆ ಪ್ರತಿ ಹೇಳತಕ್ಕವರಾರು?
ಮತ್ತು ನಿನ್ನ ಪ್ರಯತ್ನವನ್ನು ವಿಘ್ನಪಡಿಸುವವರಾದರೂ ಯಾರು ?
ಇಗೋ ನಿನಗೆ ದಾರಿ ಬಿಡುವೆನು. ನೀನು ನಿರಾಯಾಸವಾಗಿ ಗೋಕುಲಕ್ಕೆ
ಹೋಗಿಬರಬಹುದು. ನೀನು ಹಿಂದಿರುಗಿ ಬರುವವರೆಗೂ ಈ ದಾರಿಯು
ಹೀಗೆಯೇ ಬಿಟ್ಟಿರುತ್ತದೆ. ವಸುದೇವ ! ಭಯಪಡಬೇಡ. ಸುಖವಾಗಿ
ಹೋಗಿಬಾ!
     (ಎಂದು ಹೇಳುತ್ತ ಯಮುನೆಯು ಅದೃಶ್ಯಳಾಗುವಳು. ಪ್ರವಾ
ಹವು ನಿಂತು ನದಿಯಲ್ಲಿ ದಾರಿ ಯೇರ್ಪಡುವುದು.

ವಸುದೇವ:- ಯಮುನಾದೇವಿಯು ನನ್ನಲ್ಲಿ ಅಪಾರ ಕಾರುಣ್ಯ
ವುಳ್ಳವಳಾಗಿ, ತನ್ನ ಪ್ರವಾಹವನ್ನು ಸಹಾ ನಿಲ್ಲಿಸಿ ನನಗೆ ದಾರಿಯನ್ನು
ಬಿಟ್ಟಿರುವಳು. ಈಕೆ ಮಾಡಿದ ಮಹೋಪಕಾರಕ್ಕೆ ನಾನೇನು ಪ್ರತ್ಯು
ಪಕಾರವನ್ನು ಮಾಡಲಿ? ಅಕಟ | ಬಂಧನದಲ್ಲಿ ಸಿಲುಕಿರುವ ನಾನೇನು
ಮಾಡಬಲ್ಲೆನು, ಕೃತಜ್ಞತಾ ಸೂಚಕವಾಗಿ ವಂದನೆಗಳನ್ನು ಸಮರ್ಪಿ
ಸಬಲ್ಲೆನಷ್ಟೆ! (ಎಂದು ವಸುದೇವನು ಯಮುನೆಗೆ ವಂದಿಸುತ್ತ
ನದಿಯನ್ನು ದಾಟಿ ಗೋಕುಲವನ್ನು ಕುರಿತು ತೆರಳುವನು.)