೫೫ಕೃಷ್ಣಲೀಲೆ
ಕಂಸನಿಂದ ಹಾರಿಸಲ್ಪಟ್ಟ, ಶಿಶುವು ನೆಲಕ್ಕೆ ಬೀಳದೆ, ಗಗನಮಂ
ಡಲದಲ್ಲಿ ನಿಂತು ನೂತನ ವಿಕಸಿತವಾದ ಪುಷ್ಪಮಾಲೆಗಳಿಂದಲೂ,ಕೆಂಬ
ಣ್ಣದ ಸೀರೆಯಿಂದಲೂ, ಸುಗಂಧ ಪರಿಮಳಗಳಿಂದಲೂ, ರತ್ನ ಖಚಿತವಾದ
ಆಭರಣಗಳಿಂದಲೂ, ತನ್ನ ಎಂಟು ಕೈಗಳಲ್ಲಿಯೂ ಧರಿಸಿದ ಗದಾ-ಶಂಖ-
ಚಕ್ರ-ಖಢ್ಗ-ಬಾಣ-ಬಿಲ್ಲು-ಡವರುಕ-ಶೂಲ ಮುಂತಾದ ಆಯುಧಗಳಿಂ
ದಲೂ ಶೋಭಿಸುತ್ತ, ಸಿದ್ದ ಚಾರಣ ಗಂಧರ್ವಾದಿಗಳು ಸಮರ್ಪಿಸುವ
ಕರ್ಪೂರದಾರತಿಗಳನ್ನು ಸ್ವೀಕರಿಸುತ್ತ ಕಂಸನನ್ನು ಕುರಿತು ಧಿಕ್ಕ
ರಿಸಿ ಮಾತನಾಡುವಳು.
ಯೋಗಮಾಯೆ:-...ಎಲ್ಲಿ ದುರಾತ್ಮನಾದ ಕಂಸನೆ ! ಒಡಹು
ಟ್ಟಿದ ತಂಗಿ ಎಂದೆಣಿಸದೆ ಮದೋನ್ಮತ್ತನಾಗಿ ಹಾರಿ ಬೀಳುತ್ತಿರುವೆ. ದೇವ
ಕಿಯ ಗರ್ಭದಲ್ಲಿ ಹುಟ್ಟಿದ ಆರುಮಂದಿ ಪಸುಕಂದರನ್ನೂ ಕೊಂದೆ.
ಅಷ್ಟಕ್ಕಾದರೂ ಸುಮ್ಮನಿರದೆ ನನ್ನ ಕಾಲುಗಳನ್ನು ಹಿಡಿದು ಮೇಲ
ಕ್ಕೆಸೆದೆ. ಚೀ ಚೀ ಚಾಪಿ ! ಮದಾಂಧಾ ! ಹುಟ್ಟಿದ ಮಕ್ಕಳನ್ನೊ೦ದು
ಕ್ಷಣವಾದರೂ ಇರಗೊಡಿಸದೆ, ಕೊಲೆಪಾತಕನಾದ ಕಟುಕನಂತೆ ಸಂಹ
ರಿಸುತ್ತಿರುವೆಯಲ್ಲಾ! ಎಳೆಮಕ್ಕಳನ್ನು ಕೊಲ್ಲುವುದೊಂದು ಶೂರ
ತ್ವವೆ ? ಎಲವೋ ದುರ್ಮತಿ ! ನಿನ್ನ ನ್ನು ಸಂಹರಿಸಿ ಲೋಕಕ್ಕೆ ಕುಶ
ಲವನ್ನುಂಟು ಮಾಡತಕ್ಕ ಮಹಾತ್ಮನು ಬೇರೊಂದುಕಡೆ ಅವತರಿಸಿರು
ವನೆಂದು ತಿಳಿ, ಆತನು ನಿನ್ನ ಗರ್ವವನ್ನು ಮುರಿದು ನಿನ್ನನ್ನು ಯಮನ
ಬಳಿಗೆ ಕಳುಹಿಸುವನು. ಆ ನಿನ್ನ ಅವಸಾನಕಾಲದಲ್ಲಿ ನಾನು ಮೃತ್ಯು
ದೇವತಾರೂಪದಿಂದ ಬಂದು ನಿನ್ನ ರಕ್ತವನ್ನು ಹೀರುವೆನು, ದೈವದ್ರೋಹಿ!
ನಿನ್ನ ವಿನಾಶಕಾಲವು ಸವಿಾಪಿಸುತ್ತಿದೆ. ಮೆರೆಯದಿರು ! ಮೆರೆಯದಿರು!
(ಎಂದು ಕಂಸನನ್ನು ಜರೆದಾಡುತ ಯೋಗಮಾಯೆಯು ಅದೃಶ್ಯಳಾಗುವಳು.) .
ಕಂಸನು ಭಯಭ್ರಾಂತಚಿತ್ತನಾಗಿ ಗಡಗಡನಡುಗುತ, ತನ್ನ
ದುಷ್ಕಾರ್ಯಕ್ಕೆ ಪಶ್ಚಾತ್ತಾಪ ಡುತ, ದೇವಕೀ ವಸುದೇವರ ಪಾದಗಳಿ ಗೆರಗಿ ಕ್ಷಮಾಪಣೆ ಬೇಡುವನು.
ಕಂಸ:- ತಂಗಿ ದೇವಕಿ! ಭಾವಾ ವಸುದೇವ! ನಾನು ಮಾಡಿದ ಮಹಾಪರಾಧಗಳನ್ನು ಕ್ಷಮಿಸಿರಿ. ಸಾಧುಮಾರ್ಗವನ್ನು ತೊರೆದು,