ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೫೯ತೃತೀಯಾಂಕ೦

               ನಾರದರ ಪ್ರವೇಶ.
ನಾರದ:-
         ರಾಗ- ಹಿಂದೂಸ್ಥಾನಿ ಕಾಪಿ- ಏಕತಾಳ

   ನಾರಾಯಣಂ ಭಜರೇ! ಹೇ ಮಾನಸ||ಪ||
   ವಾರಿಧಿ ಶಯನನು ಪಾರಸಾರ ಶುಭಕಾರಣಮಸುರ ವಿದಾರಣ ನಿರತಂ||ಅ-ಪ॥
   ಆದಿಮೂಲ ಮಖಿಲಾಗಮ ಸನ್ನುತ | ವೇದವಿಹಿತ ಪರಬೋಧ ವಿನೋದಂ||
   ನಾರಾ||
   ಸುಂದರಾಂಗನುರವಿಂದ ನಯನಮಾನಂದ ನಿಲಯ ಗೋವಿಂದ ಮಮೇಯಂ||
   ನಾರಾ||
   ದೇವನುತಂ ಶಿವರಾಮ ಪೋಷಕ೦| ಶ್ರೀವನಿತಾ ಮಣಿ ಚಿತ್ತ ವಿಲಾಸಂ||ನಾರಾ||

   ನಾರದರನ್ನು ಕಾಣುತ್ತಲೇ ನಂದಗೋಪನಾದಿಯಾಗಿ ಎಲ್ಲರೂ
ನಮಸ್ಕರಿಸುವರು.
ನಾರದ:-ಸುಖೀಭವ ! ಸುಖೀಭವ !
ನಂದ:ಪರಮ ತಪೋಧನರಾದ ನಾರದ ಮುನಿವರ್ಯರೇ ! ತಮ್ಮ
ಸಂದರ್ಶನದಿಂದ ನಾವೆಲ್ಲರೂ ಪವಿತ್ರರಾದೆವು. ಈ ಪೀಠವನ್ನಲಂ
ಕರಿಸೋಣವಾಗಲಿ!
       ನಾರದರು ಪೀಠದಲ್ಲಿ ಕುಳಿತುಕೊಳ್ಳುವರು.
ಗರ್ಗಾಚಾರ:-ನಾರಾಯಣ ಧ್ಯಾನ ಪರಾಯಣರಾದ ನಾರದರಿಗೆ
ವಂದಿಸುವೆನು,

ನಾರದ :-ನಮೋನಮಃ.
ಸುಮಿತ್ರೆ:-ಮುನಿ ಕುಲೋತ್ತಮರಿಗೆ ವಂದಿಸುವೆನು.
ನಾರದ:- ಸಾಧ್ವೀಮಣಿಯೆ! ನಿನಗೆ ಮಂಗಳವಾಗಲಿ.

ನಂದ:-ಪೂಜ್ಯರೆ ! ಕೇವಲ ಪ್ರಾಪಂಚಿಕವಾದ ಭೋಗಭಾಗ್ಯ
ಗಳಲ್ಲಿ ತಮಗೆ ಲೇಶವಾದರೂ ಅಪೇಕ್ಷೆಯಿಲ್ಲವಾದಾಗ್ಗೂ, ಭವಸಾಗರ
ದಲ್ಲಿ ಮಗ್ನರಾಗಿರುವ ಪ್ರಾಣಿಕೋಟಿಗಳನ್ನುದ್ದರಿಸಲೆಳಸಿ ಪರೋ
ಪಕಾರಾರ್ಥವಾಗಿ ತ್ರಿಲೋಕಗಳಲ್ಲಿಯೂ ಸರ್ವದಾ ಸಂಚರಿಸುತ್ತ,
ದುಷ್ಟಶಿಕ್ಷಣ, ಶಿಷ್ಟರಕ್ಷಣಗಳೆಂಬ ಮಹಾತ್ಕಾರ್ಯಗಳನ್ನು ನಡಿಸುವ ಪರ
ಮ ಪುಣ್ಯಾತ್ಮರಾಗಿರುವಿರಿ. ತಮ್ಮ ಮಹಿಮೆಯನ್ನು ಬಣ್ಣಿಸಲು ಸಾವಿ
ರ ನಾಲಿಗೆಗಳುಳ್ಳ ಶೇಷನಿಗೂ ಸಾಧ್ಯವಾಗಲಾರದು. ನಮ್ಮ ಪುಣ್ಯೋ