ಪುಟ:ಶ್ರೀ ಕೃಷ್ಣ ಲೀಲೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬ಕೃಷ್ಣಲೀಲೆ

ರಿತು ಈ ನಿಮ್ಮ ಮನೋಹರ ರೂಪಗಳನ್ನು ನಿಮಗಾಗಿಯೇ ಪ್ರತ್ಯೇಕ
ವಾಗಿ ರಚಿಸಿರುತ್ತಾನೆ. ಮಿಕ್ಕವರಿಗೆಲ್ಲಾ, ಮೈಯಿಗೆ ತಕ್ಕ ಕೈಗಳು,
ಕೈಗಳಿಗೆ ತಕ್ಕ ಕಾಲುಗಳು, ಕಾಲುಗಳಿಗೆ ತಕ್ಕ ಪಾದಗಳು, ಪಾದಗಳಿ
ಗೆ ತಕ್ಕ ಬೆರಳುಗಳು, ತಲೆಗೆ ತಕ್ಕ ಮುಖ, ಮುಖಕ್ಕೆ ತಕ್ಕ ಕಣ್ಣು
ಗಳು, ಅದರಂತೆಯೇ ಕೆನ್ನೆಗಳು, ಮೂಗುಗಳು, ಈ ತೆರನಾಗಿ ಒಂದಕ್ಕೆ
ತಕ್ಕಂತೆ ಮತ್ತೊಂದನ್ನು ಸ್ವಲ್ಪ ಸ್ಪಲ್ಪವಾಗಿಯೇ ರಚಿಸುತ್ತಾನೆ!

ಅಸುರರು:-ನಮಗೋ ?

ನಾರದ:-ನಿಮಗೆ ಹಾಗಲ್ಲ, ಮುಖವು ಒಂದು ಮೊಳದಗಲ
ವಿದ್ದರೆ ಮೂಗು ಮೂರು ಮೊಳದುದ್ದ. ಮೂಗು ಮೂರು ಮೊಳದು
ದ್ಧವಾದರೆ ಕಿವಿಗಳು ನಾಲ್ಕು ಮೊಳದಗಲ. ಕಿವಿಗಳು ನಾಲ್ಕು ಮೊ
ಳದಗಲವಾದರೆ ಕೈಗಳು ಹದಿನಾಲ್ಕು ಮೊಳದುದ್ದ. ಕೈಗಳು ಹದಿನಾ
ಲ್ಕು ಮೊಳದುದ್ದವಾದರೆ ಹೊಟ್ಟೆ ನಲವತ್ತು ಮೊಳದ ಸುತ್ತಳತೆ. ಈ ವಿಧ
ವಾಗಿ ಅಂಗಾಂಗಗಳನ್ನು ನಿಮಗೆ ಬಹು ಧಾರಾಳವಾಗಿ ರಚಿಸಿರುತ್ತಾನೆ.
ಆದುದರಿಂದ ನಿಮ್ಮ ರೂಪರೇಖಾ ವಿಲಾಸಗಳೇ ಒಂದು ವಿಧ, ದೇವತೆಗಳಿ
ಗೇ ಒಂದು ವಿಧ. ನಿಮ್ಮ ಕಣ್ಣುಗಳು ಯಾವಾಗಲೂ ಉರಿಯುವ ಬೆಂಕಿ
ಯ ಕೆಂಡಗಳಂತೆಯೂ, ಶರೀರವು ತೋಳದ ಬೆಂಕಿಯ ಕೆ೦ಡಗಳಂತೆ
ಶುಭ್ರವಾಗಿಯೂ ಇರುತ್ತವೆ. ದೇವತೆಗಳಿಗೆ ಈ ಭಾಗ್ಯವೆಲ್ಲಿಂದ
ಬಂದೀತು ?

ಅಸುರರು:-ಭೇಷ್! ನಾರದರೇ ! ಭೇಷ್ !

ನಾರದ- ಕಂಸನೇ! ನಾನಿನ್ನು ತೆರಳುವೆನು, ಹಿಂದೆ ನಾನು
ತಿಳಿಸಿದ ವಿಷಯಗಳೆಲ್ಲವೂ ಜ್ಞಾಪಕವಿರ ಬಹುದಷ್ಟೆ! ಬಹಳ ಜಾಗರೂ
ಕತೆಯುಳ್ಳವನಾಗಿರು. ಎಚ್ಚರಿಕೆ |

ಕಂಸ:-ನಾರದರೇ! ತಮ್ಮ ಹಿತೋಪದೇಶವನ್ನು ಚನ್ನಾಗಿ
ಪಾಠ ಮಾಡಿರುವೆನು. ಮರೆತಿರಲಿಲ್ಲ.

ನಾರದ:- ನಾನಿನ್ನು ತೆರಳುವೆನು.
ಕಂಸ:-ನಮಸ್ಕಾರ!
          [ನಾರದರು ನಿಷ್ಕ್ರಮಿಸುವರು.]