೬೭ತೃತೀಯಾಂಕ೦.
ಕಂಸ-ಮಿತ್ರರೆ! ಇನ್ನು ನಮ್ಮ ಮಂತ್ರಾಲೋಚನೆಯನ್ನು
ಪೂರ್ತಿಗೊಳಿಸಿ, ಕಾರ್ಯಕರಣಗಳನ್ನು ನಿಶ್ಚಯಿಸೋಣ.
ಅಸುರರು:-ಚಿತ್ತಾನುಸಾರವಾಗಬಹುದು.
ಕಂಸ:-ನೀವೆಲ್ಲರೂ ಅತಿ ಜಾಗ್ರತೆಯಿಂದ ಗ್ರಾಮಗಳಲ್ಲಿಯೂ,
ಪಟ್ಟಣಗಳಲ್ಲಿಯೂ, ಅರಣ್ಯಗಳಲ್ಲಿಯೂ, ಆಶ್ರಮಗಳಲ್ಲಿಯೂ ಹುಡುಕಿ
ಮೂಲೆ ಮೂಲೆಗೂ ಒಬ್ಬೊಬ್ಬರಾಗಿ ಪರಿವಾರದೊಂದಿಗೆ ಹೊರಟು,
ಪ್ರತಿಯೊಂದು ಸ್ಥಳವನ್ನೂ ಚನ್ನಾಗಿ ಪರಿಶೋಧಿಸಿ, ಹಸುಮಕ್ಕಳನ್ನೆ
ಲ್ಲಾ ಹಿಡಿದು ಸಂಹರಿಸಿ ಬರಬೇಕು. ತಿಳಿಯಿತೋ ?
ಅಸುರರು:-(ಗಟ್ಟಿಯಾಗಿ) ತಿಳಿಯಿತು ಮಹಾಪ್ರಭೂ !
ಎಂದು ಕಂಸನು ಅಸುರರಿಗೆ ಆಜ್ಞಾಪಿಸುವಾಗೆ ಪೂತನೆಯು
ಎದ್ದು ನಿಂತು ವಿಜ್ಞಾಪಿಸುವಳು.-
ಪೂತನೆ:-(ಆರ್ಭಟದಿಂದ) ಎಲೈ ಪ್ರಭುವೆ ! ಕಂಸ ಭೂಪಾಲಾ!
ಈ ಕಾರ್ಯಕ್ಕೆ ಇವರೊಬ್ಬರೂ ಅರ್ಹರಲ್ಲವು. ಮಕ್ಕಳ ವಿಚಾರವನ್ನು
ಇವರೇನು ಬಲ್ಲರು ? ಮಕ್ಕಳನ್ನು ಕೊಲ್ಲುವುದರಲ್ಲಿ ನಾನು ಬಹಳ ಸಮ
ರ್ಥಳು, ಹಸುಮಕ್ಕಳನ್ನು ಚಪ್ಪರಿಸಿ ನುಂಗುವುದರಲ್ಲಿ ನಾನು ಮಹಾ
ಫ್ರೌಢೆಯು ಹತ್ತಾರು ಮಕ್ಕಳನ್ನು ಹಿಡಿದು ಬಾಳೆಯ ಹಣ್ಣುಗಳಂತೆ
ಒಂದೇ ಸಲಕ್ಕೆ ನುಂಗುವೆನು, ಜೀಯಾ | ಈ ಕಾರ್ಯಕ್ಕೆ ನನ್ನನ್ನು
ನಿಯಮಿಸು, ಸಂದುಗೊಂದಿಗಳಲ್ಲಿಯೂ, ಮೂಲೆ ಮಡುಕುಗಳಲ್ಲಿಯೂ
ಕಣ್ಣಲ್ಲಿ ಕಣ್ಣಿಟ್ಟು ಚನ್ನಾಗಿ ಹುಡುಕಿ, ಭೂಮಿಯಲ್ಲಿರತಕ್ಕ ಮಕ್ಕಳ
ನ್ನೆಲ್ಲಾ ಹಿಡಿದು ನಿಶ್ಯೇಷವಾಗಿ ಕೊಲ್ಲುವೆನು. ಕೊಡು! ಅಪ್ಪಣೆ ಕೊಡು!!
ಕಂಸ:-ಭಳಿರೇ ಭಳಿ | ಪೂತನೆಯೇ ! ನೀನಂತಹ ಪರಾಕ್ರಮ
ವಂತೆಯೇ ಅಹುದು. ನೀನು ಹೇಳಿದಷ್ಟು, ಕಾರ್ಯವನ್ನು ಮಾಡತಕ್ಕ
ವಳೆಂದು ನಾನು ಬಲ್ಲೆನು. ನಿನ್ನ ಸಾಹಸಕ್ಕೆ ನಾನು ಮೆಚ್ಚಿದೆನು.
ಈ ಕಾರ್ಯಕ್ಕೆ ನಿನ್ನನ್ನೇ ನಿಯಮಿಸಿರುವೆನು, ನಿನ್ನ ಚಾತುರ್ಯ ಬಲದಿಂ
ದ ಈ ಕಾರ್ಯವನ್ನು ನಿರ್ವಹಿಸಿ ಕೀರ್ತಿಯನ್ನು ಪಡೆ.
ಪೂತನೆ:- ಅಪ್ಪಣೆ
ಪುಟ:ಶ್ರೀ ಕೃಷ್ಣ ಲೀಲೆ.djvu/೮೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ