೭೫ತೃತೀಯಾಂಕಂ.
ತಂಗಿಯ ಮಕ್ಕಳನ್ನೆಲ್ಲ ಚೂರುಚೂರಾಗಿ ಕಡಿದು ಹಾಕಿರುವನು.
ತನ್ನ ತಂದೆಯಾದ ಉಗ್ರಸೇನನನ್ನು ಸೆರೆಯಲ್ಲಿ ಬಂಧಿಸಿರುವನು. ಹೀ
ಗೆಯೇ ಇನ್ನೂ ಎಷ್ಟೋ ಕಾರ್ಯಗಳನ್ನು ಮಾಡಿರುವನು.
ವಿದ್ವಂಸ:-(ತನ್ನಲ್ಲಿ) ಎಷ್ಟು ಕಲ್ಯಾಣ ಗುಣಗಳು! ಏನು ಕಥೆ!
ಇವುಗಳನ್ನು ಕವಿತ್ವ ಮಾಡಿ ನಾನು ಹೇಳಬೇಕಲ್ಲವೆ ? ರಾಮ ! ರಾಮ !
(ಎಂದು ಬಗೆಯುತ್ತಿರುವನು.)
ಕಂಸ:-ಎಲೌ ವಕ್ರವದನೆಯೇ ! ನಿನ್ನ ಮನಃಪೂರ್ತಿಯಾಗಿ
ಒಂದು ಸಾರಿ ಹಾಡು! ಕೇಳುವೆನು.
[ವಕ್ರವದನೆ ಮುಂತಾದ ಅಸುರ ಸ್ತ್ರೀಯರು.]
ರಾಗ- ಜಂಜೂಟ- ಏಕತಾಳ.
ರಾಜರಾಜನೇ ! ರಾಜತೇಜನೆ ! ರಾಜಭೋಜ ಕ೦ಸ ಮಹಾ| ರಾಜರಾಜನೇ ||ಪ||
[ಎಂದು ತಮ್ಮ ವಿಕಾರ ಸ್ವರಗಳಿಂದ, ಹಾಡುತ್ತಲೇ ಸುತ್ತುಮು
ತ್ತಲಿದ್ದ ಕತ್ತೆಗಳೆಲ್ಲವೂ ಕೂಗಲಾರಂಭಿಸುವುವು.]
ಕಂಸ:-ಇದೇಕೆ, ಸುತ್ತು ಮುತ್ತಲೂ ಕತ್ತೇಗಳು ಕೂಗಲಾರಂ
ಭಿಸಿದುವು?
ಅಘಾಸುರ:-ಅಹುದು ಮಹಾ ಪ್ರಭೂ ! “ಶಿಶುರ್ವೇತ್ತಿ ಪಶು
ರ್ವೇತ್ತಿ" ಎಂದಲ್ಲವೇ ಶಾಸ್ತ್ರವು. ಗಾರ್ದಭಗಳು ಪಶು ಜಾತಿಗೆ ಸೇರಿ
ದುವುಗಳಲ್ಲವೆ! ಆದುದರಿಂದ, ಶಾಸ್ತ್ರೋಕ್ತವಾದ ಈ ಗಾನವನ್ನು
ಕೇಳಿ ಕತ್ತೆಗಳು ಕೂಡಾ ಸಂತೋಷಪಟ್ಟಿರುತ್ತವೆ.
ಕಂಸ:-ನಿಜ ! ಆದರೆ ಸಂಗೀತವನ್ನು ಕೇಳುತ್ತಲೆ, ಗಂಧರ್ವರು
ಕಿನ್ನರರು-ಕಿಂಪುರುಷರು ಮುಂತಾದ ದೇವತೆಗಳು ಬರುವರಂತಲ್ಲಾ!
ಅಘಾಸುರ: ಒಹೋ ! ಕ್ಷಮಿಸಬೇಕು, ಮಹಾ ಪ್ರಭುಗಳು
ಮರೆತುಹೋದಂತಿದೆ. ಈ ನಮ್ಮ ಚಲುವೆಯರ ಗಾನಕ್ಕೆ ಸೊಕ್ಕಿ
ದೇವತೆಗಳೇನೋ ಇಲ್ಲಿಗೆ ಬರಲು ಸಿದ್ದರಾಗಿರಬಹುದು. ಆದರೆ, ಅವರು
ಬಾರದಿರುವುದಕ್ಕೆ ತಕ್ಕ ಕಾರಣವಿರುವುದಲ್ಲಾ !
ಕಂಸ-ಏನದು ?
ಪುಟ:ಶ್ರೀ ಕೃಷ್ಣ ಲೀಲೆ.djvu/೯೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ