ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪ-ಚರಿತ್ರೆ ಕೆಂಗರಗಣ್ಣು ಘುಂಗುರ ಮೀಶಿ ನುಂಗುವಂಥ ಬಹಳವತಾರಾ | ನುಂಗುವಂಥ ಬಹಳವತಾರಾ ನಮ್ಮ- ನಿಂಗನ ಕಂಡರೆ ಬರಹೇಳೋ || ೧ || ಬಟ್ಟಲ ಮಾರಿ ಭಗರೀ ಗಡ್ಡಾ ನೆಟ್ಟನ ಮೂಗಿನ ಚೆಲವಾನೋ | ನೆಟ್ಟನ ಮೂಗಿನ ಚೆಲುವ ಚೆನ್ನಿಗ ನಮ್ಮ ದಿಟ್ಟನ ಕಂಡರೆ ಬರಹೇಳೋ ಉದ್ದಾನವನ್ನು ಉರಿಮುಖದವನು ತಿದ್ದಿದ ಹೊನ್ನ ಮೀಶವನು | ತಿದ್ದಿದ ಹೊನ್ನ ಮೀಶವನೋ ನಮ್ಮ ರುದ್ರನ ಕಂಡರೆ ಬರಹೇಳೊ ಕರಿಯ ಕಂಬಳಿ ವರವಿನ ಚಿತ್ರ ನಮ್ಮ ಗುರುವಿನ ಕಂಡರೆ ಬರಹೇಳೋ | ಗುರುವಿನ ಕಂಡರೆ ಬರಹೇಳೊ ನಮ್ಮ || 2 11 ಸ್ವಾಮಿನ ಕಂಡರೆ ಬರಹೇಳೋ || ೪ || ಚಿಕ್ಕಂದಿನಲ್ಲಿ ಅವರಿಗೆ ಆಟದ ನಾದವು ಬಹಳ. ಅದಕ್ಕಾಗಿ ಅವರು ತಂದೆಯವರಿಂದ ಹಲವು ಸಲ ಬೈಸಿಕೊಳ್ಳಬೇಕಾಗುತ್ತಿತ್ತು. ಇದೇ ಮೇರೆಗೆ ತಂದೆಯವರು ಅವರಿಗೆ ಒಮ್ಮೆ ಬೈದಾಗ ಅವರು ತಂದೆಯವರಿಗೆ ಅಂದದ್ದು : “ ನಾನು ಆಡುತ್ತಿರುವ ಆಟವು ಎಲ್ಲ ಜನರ ಆಟದಂತೆ ಇಲ್ಲ. ನಾನು ಬೇರೊಂದು ಬಗೆಯ ಆಟವನ್ನು ಆಡಿತೋರಿಸುವವನಿರುವೆ ?. ನಿಜವಾಗಿ ಮಹಾರಾಷ್ಟ್ರದ ಒಬ್ಬ ಸಂತಕವಿಯ " ಆಟಗಾರ' ಎಂಬ ಅಭಂಗದಲ್ಲಿ ಬಣ್ಣಿಸಲಾದ ಶುಕ, ನಾರದ, ಹನುಮ, ಹಾಗೂ ಗೋಪಾಲ ಈ ಹಿರಿ ಆಟಗಾರ ' ರಂತೆ, ಅವರು ಪರಮಾರ್ಥದ ಆಟವನ್ನು ಬಲು ಸೊಗಸಾಗಿ ಆಡಿ ತೋರಿಸಿದರು.