ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಸುಮಾರು ಇಪ್ಪತ್ತು, ಇಪ್ಪತ್ತೈದು ವರುಷದವರಿರುವಾಗ ಅವರೊಮ್ಮೆ ಹೋಳಿಯ ಹುಣ್ಣಿಮೆಯ ಹಬ್ಬದಲ್ಲಿ ಬಹುಕಾಲ ಆಟವಾಡಿದ ಮೂಲಕ, ಅವರಿಗೆ ಮನೆಗೆ ಬರಲು ತುಂಬ ತಡವಾಯಿತು. ಅದಕ್ಕಾಗಿ ತಂದೆಯವರು ಅವರಿಗೆ ಬಹಳ ಬೈದರು. ಅದರಿಂದ ಅತಿಯಾಗಿ ನೊಂದುಕೊಂಡು, ಅವರು ಯಾರಿಗೂ ತಿಳಿಸದೆಯೆ ಪಂಢರಪುರಕ್ಕೆ ತೆರಳಿದರು. ಅಲ್ಲಿ ಅವರು ಮೂರುದಿನ ಉಪವಾಸ ಮಾಡಿದರು. ಮೂರನೆಯ ದಿನ, ' ನೀನು ಸಿದ್ಧ- ಗಿರಿಗೆ ಹೋಗು. ಅಂದರೆ ಅಲ್ಲಿ ನಿನ್ನ ಬಯಕೆಯು ಕೈಗೂಡುವದು' ಎಂದು ಅವರಿಗೆ ದೃಷ್ಟಾಂ ಂತವಾಯಿತು. ತರುವಾಯ ಅವರು ನಿಂಬರಗಿಗೆ ಮರಳಿ ಬಂದರು. ಸಿದ್ಧಗಿರಿಯು ಕೊಲ್ಲಾಪುರದ ಹತ್ತಿರ ಇರುವದು. ಅಲ್ಲಿಗೆ ಅವರು ತಮ್ಮ ಮಗಳ ಜಡಿಯನ್ನು ಬಿಡಿಸಲು ಹೋದರು, ದೇವದರುಶನವಾದ ಮೇಲೆ ಗುಡಿಯ ನೆರೆಯಲ್ಲಿದ್ದ ಗವಿಯೊಂದರ ಬಳಿ ನಡೆದಿರಲು, ಆ ಗವಿ ಯಲ್ಲಿದ್ದ ಒಬ್ಬ ವೃದ್ಧ ಸತ್ಪುರುಷರು, ಅವರನ್ನು ತಮ್ಮೆಡೆ ಬರಲು ಕೈಯಿಂದ ಸನ್ನೆ ಮಾಡಿದರು. ಆದರೆ ಆ ಸಾಧುಗಳು ತಮ್ಮನ್ನೆ ಯೆ ಕರೆಯುವರೊ, ನ್ಯರನ್ನು ಕರೆಯುವರೊ, ಎಂಬುದನ್ನು ಅರಿಯದೆ ಅವರು ಸಾಧುಗಳೆಡೆಗೆ ಹೋಗಲಿಲ್ಲ. ಆಗ ಆ ಸಾಧುಗಳು ಅವರಿಗೆ ತಮ್ಮೆಡೆ ಬರಲು ಎರಡೂ ಗಳಿಂದ ಸೂಚಿಸಿದರು. ಅದನ್ನು ಕಂಡು ಮಹಾರಾಜರವರು ಸುಮಾರಾಗಿ ಜಿಗಿದೆಯೆ ಅವರೆಡೆಗೆ ಸಾರಿದರು. ಅದೇ ಕಾಲಕ್ಕೆ ಆ ಸಾಧುಪುರುಷರು ಅವರನ್ನು ಆ ಗವಿಯಲ್ಲಿ ಅನುಗ್ರಹಿಸಿದರು ಮತ್ತು " ನಾನು ಹೇಳಿದ ಮೇರೆಗೆ ಸಾಧನವನ್ನು ಮಾಡಿದರೆ ನಿನ್ನ ಕೀರ್ತಿಯು ದಿಗಂತದಲ್ಲಿ ಹಬ್ಬ ಬಹುದು. ನೀನು ಬಂಗಾರದ ಪಲ್ಲಕ್ಕಿಯಲ್ಲಿ ಮೆರೆಯಬಹುದು,' ಎಂದು ಅವರನ್ನು ಆಶೀರ್ವದಿಸಿದರು, ಮೇಲ್ಕಾಣಿ ಸಿದ ಸಾಧುಪುರುಷರು ಶ್ರೀ ಮುಪ್ಪಿನ ಮುನಿಗಳು ಇರಬಹುದೆಂದು, ಸಿದ್ಧಗಿರಿ ಹಾಗು ಶಿರಸಂಗಿಯಲ್ಲಿಯ ಶ್ರೀಕಾಡಸಿದ್ಧರ ಮಠಗಳಲ್ಲಿರುವ ಕಾಗದಪತ್ರಗಳಿಂದ ಕಂಡುಬರುವದು. ಈ ಗ್ರಂಥದ ಕೊನೆಯಲ್ಲಿ ಮುದ್ರಿಸಲಾದ ಶ್ರೀನಿಂಬರಗಿ ಮಹಾರಾಜ ರವರ ಪದಗಳಲ್ಲಿಯ ಕ್ರಮಾಂಕ (೧) ರಲ್ಲಿರುವ ' ಮುಪ್ಪಿನ ಮುನಿಯ ಪಿಡಿದು ವಚನ' ಎಂಬಲ್ಲಿಯ ಉಲ್ಲೇಖವು ಅವರ ಗುರುಗಳದೇ ಇರುವ ಸಂಭವವಿದೆ.