ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪ-ಚರಿತ್ರೆ ಗುರುಗಳಿಂದ ಅನುಗ್ರಹವನ್ನು ಪಡೆದು ನಿಂಬರಗಿಗೆ ಬಂದ ಮೇಲೆ ಸುಮಾರು ಆರು ವರುಷಗಳ ವರೆಗೆ ಅವರಿಂದ ವಿಶೇಷ ಸಾಧನವಾಗಲಿಲ್ಲ. ಆರು ವರುಷಗಳ ತರುವಾಯ ಅವರಿಗೆ ಪರಮಾರ್ಥದ ನೆನಪನ್ನು ಮಾಡಿ ಆಗ ಕೊಡಲು ಆ ವೃದ್ಧ ಸತ್ಪುರುಷರು ನಿಂಬರಗಿಗೆ ಅವರೆಡೆ ಬಂದರು. ಮಹಾರಾಜರವರು ಅವರಿಗೆ ಭೋಜನವನ್ನು ನೀಡಿ ನಾಲ್ಕಾಣೆ ದಕ್ಷಿಣೆ ಯನ್ನು ಕೊಟ್ಟರು. ಆದರೆ ಮುನಿಗಳು ಅವರಿಗೆ ಎರಡು ರೂಪಾಯಿ ದಕ್ಷಿಣೆಯನ್ನು ಬೇಡಿದರು. ಇಷ್ಟು ದಕ್ಷಿಣೆಯನ್ನು ಕೊಡಲು ಮಹಾರಾಜ ರವರು ಅಂದು ಶಕ್ತರಿರಲಿಲ್ಲ, ಆದರೂ ಬೇರೆಯವರಿಂದ ಎರಡು ರೂಪಾಯಿ ಕೈಗಡ ತಂದು, ಅವನ್ನು ಅವರು ಮುನಿಗಳಿಗೆ ಕೊಟ್ಟರು ಆಗ ಅವೆರಡನ್ನು ಮರಳಿ ಕೊಟ್ಟು ಆ ವೃದ್ಧ ಮುನಿಗಳ೦ದರು : * ಇವುಗಳಲ್ಲಿಯ ಒಂದು ರೂಪಾಯಿಯನ್ನು ನಿನ್ನ ಪ್ರಪಂಚಕ್ಕಾಗಿಯೂ, ಇನ್ನೊಂದನ್ನು ಪರಮಾರ್ಥ ಕ್ಯಾಗಿಯೂ ಬಳಸು '. ಆಗ ಮಹಾರಾಜರವರು ೧ ನಾಮವನ್ನು ನೆನೆದರೆ ಪ್ರಪಂಚವೂ ಸುಖದಿಂದ ಸಾಗುವದೇನು ? ” ಎಂದು ಕೇಳಿದರು, ಅದಕ್ಕೆ

  • ದೇವರ ದಯೆಗೆ ಅಸಾಧ್ಯವಾದುದಾವುದಯ್ಯಾ !' ಎಂದು ಉತ್ತರವಿತ್ತು

ಮುನಿಗಳು ಅಲ್ಲಿಂದ ತೆರಳಿದರು ಮುಂದೆ ಮಹಾರಾಜರವರು ಮನಸ್ಸು ಕೊಟ್ಟು ಸಾಧನವನ್ನು ಮಾಡತೊಡಗಿದರು, ಮತ್ತು ತಮ್ಮ ವಯಸ್ಸಿನ ೩೬ ರಿಂದ ೬೭ ವರುಷಗಳ ವರೆಗೆ ಅಂದರೆ ೩೬ ವರುಷ ಅವರು ಪ್ರಪಂಚದಲ್ಲಿದ್ದು ಅವಿಶ್ರಾಂತವಾಗಿ ಸಾಧನವನ್ನು ನಡೆಯಿಸಿದರು. ಈ ಮೇರೆಗೆ ಪರಮಾರ್ಥ ದಲ್ಲಿಯ ಅತ್ಯುನ್ನತ ಪದವಿಯನ್ನು ಪಡೆದ ಮೇಲೆ, ಮುಂದಿನ ೨೮ ವರುಷ ಗಳನ್ನು ಅವರು ತಮ್ಮ ಪ್ರತಿನಿತ್ಯದ ಸಾಧನದಲ್ಲಿ ಖಂಡಬೀಳಗೊಡದೆ, ಜನರಿಗೆ ಪರಮಾರ್ಥವನ್ನು ಬೋಧಿಸಿ, ಅವರನ್ನುದ್ಧರಿಸುವದರಲ್ಲಿ ಕಳೆದರು, ಮೊದಲು ಮಹಾರಾಜರು ನೀಳಾರಿಯ ( ನೀಲಗಾರರ ) ಅಂದರೆ ನೀಲವನ್ನು ತಯಾರಿಸಿ ನೂಲಿಗೆ ಬಣ್ಣ ಕೊಡುವ ತಮ್ಮ ಮನೆತನದ ಉದ್ಯ- ಮವನ್ನು ಮಾಡುತ್ತಿದ್ದರು, ಆದರೆ ಕುರಿಗಳನ್ನು ಕಾಯುವ ಉದ್ಯಮವು ಪರಮಾರ್ಥ ಸಾಧನೆಗೆ ಹೆಚ್ಚು ಅನುಕೂಲವೆಂದು ಬಗೆದು ಪರಮಾರ್ಥ ಕ್ಕಾಗಿ ಮುಂದವರು ಕುರುಬರಾದರು. ತಮ್ಮ ಆಡುಕುರಿಗಳ ಹಿಂಡನ್ನೂ, ದನಕಾಯುವ ನಾಲ್ಕಾರು ಹುಡುಗರನ್ನೂ, ಸಂಗಡ ಕರಕೊಂಡು ಅವರು