ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ಪ್ರಸ್ತಾವನೆ ನಿಂಬರಿಗಿಯ ನೆರೆಯಲ್ಲಿ ಐದಾರು ಮೈಲು ಅಂತರದಲ್ಲಿದ್ದ, ಸಾತಲಗಾವ, ಜಿಗಜಿವಣಿ, ಕಾತ್ರಾಳ, ಸೋನಗಿ, ಉಮದಿ, ಜಿರಂಕಲಗಿ, ಬರ್ಡೋಲ, ಕಡಲಸಂಗ, ಧುಮಕನಾಳ, ಇತ್ಯಾದಿ ಪ್ರದೇಶದಲ್ಲಿಯ ಯಾವದಾದ ರೊಂದು ಕೊಳ್ಳಗಳಿದ್ದ ಅಡವಿಗೆ ಹೋಗಿ, ಅಲ್ಲಿ ತಮ್ಮ ಆಡುಕುರಿಗಳನ್ನು ಮೇಯಲು ಬಿಟ್ಟು, ಅವನ್ನು ಕಾಯಲು ದನಗಾಯಿ ಹುಡುಗರಿಗೆ ಹೇಳಿ, ಅವರು ನಿವಾಂತಸ್ಥಲವೊಂದರಲ್ಲಿ ಸಾಯಂಕಾಲದ ವರೆಗೆ ಸಾಧನಮಾಡುತ್ತ ಕುಳಿತುಕೊಳ್ಳುತ್ತಿದ್ದರು. ತಮ್ಮ ಈ ಸಾಧನಬಲದಿಂದ ಮಹಾರಾಜರವರು ಜೇಥೆ ಪಡಲೀ ದೃಷ್ಟಿ ರಘ ಮಾರಾಯಾಚಿ' ( ರಘೋತ್ತಮನ ದೃಷ್ಟಿಯು ಬಿದ್ದ ಸ್ಥಲದಂತೆ ) ಎಂದು ಶ್ರೀರಾಮದಾಸರು ಬಣ್ಣಿಸಿದ ಮೇರೆಗೆ ಆ ಇಡೀ ಪ್ರದೇಶವನ್ನೆಯೆ ಪಾವನಗೊಳಿಸಿದರು. ಈ ಬಗೆಯಾಗಿ ಪರಮಾರ್ಥವನ್ನು ಪೂರ್ತಿಯಾಗಿ ಪಡೆದು ಅವರು ಸಂಸಾರದಿಂದ ಮುಕ್ತ ರಾದರು, " ನೀಳಾರೆ' ಇದ್ದ ಮಹಾರಾಜರವರು ಮುಂದೆ 1 ನೀರಾಳೆ ? ( ಮುಕ್ತರು) ಆದ ಬಗೆಯನ್ನು ಒಂದು ಮರಾಠಿ ಆರ್ಯೆಯಲ್ಲಿ ಈ ರೀತಿ ಬಣ್ಣಿಸಲಾಗಿದೆ. ಅದರ ಆಶಯವು ಕೆಳಗಿನಂತೆ : * ಪಾರ್ಥಿವ ನೀಳವು ಯಾರಿಗೆ " ನೀಳಾರೆ ” ಎಂಬ ಸಾರ್ಥನಾಮವನ್ನು ದಯಪಾಲಿಸಿತೋ ಅವರನ್ನು ಪರತಮ ನೀಳವು, ಭವಭಯದಿಂದ ನೀರಾಳೆ ' ( ಮುಕ್ತ ) ಮಾಡಿತ್ತು. ಶ್ರೀನಿಂಬರಗಿ ಮಹಾರಾಜರವರು ತಮ್ಮ ಇಡೀ ಜೀವನದಲ್ಲಿ ಪ್ರಪಂಚ-ಪರಮಾರ್ಥಗಳೆರಡನ್ನು ಶಾಂತಿಯಿಂದಲೂ ದಕ್ಷತೆಯಿಂದಲೂ ನಡೆಯಿಸಿದರು. ಒಳ್ಳೆಯ ನಡತೆಯ ಬಲದಿಂದ ಅವರ ಸಂಸಾರವು ನಿರ್ವಿಘ್ನವಾಗಿ ಸುಖದಿಂದ ಕೊನೆಗೊಂಡಿತು. ಅವರ ಜೀವಮಾನದಲ್ಲಿ ಅವರ ಮಕ್ಕಳು ಮೊಮ್ಮಕ್ಕಳು-ಇವರಲ್ಲಿ ಯಾರಿಗೂ ಅಪಮೃತ್ಯುವು ದುರ್ಮರಣವು-ಬರಲಿಲ್ಲ. ಇಷ್ಟೇ ಅಲ್ಲದೆ ಯಾರಿಗೂ ವಿಶೇಷವಾದ ಬೇನೆಯೂ ಒದಗಲಿಲ್ಲ ತಮ್ಮ ನಡತೆಯೆ ತಮ್ಮ ಬಲವು ಎಂಬ ತತ್ವವನ್ನು

  • ಪಾರ್ಥಿವ ನೀರ ಜಯಾತೆ | " ನೀಳಾರೆ' ಸಾರ್ಥನಾಮ ತ್ಯಾ ದೇಈ ||

ಪರತಮ ನೀಳ ತಯಾತ | ( ನೀರಾನೆ ' ಭವಭಯಾ ತುನೀ ನೇ ಈ ||