ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪ-ಚರಿತ್ರ ಅರಿತು, ಅವರು ತಮ್ಮ ನಡತೆಯನ್ನು ಈ ಗ್ರಂಥದಲ್ಲಿಯ ತಮ್ಮ ವಚನಗಳಿಗೆ ಅನುಗುಣವಾಗಿ ಇರಿಸಿದ್ದರು. ಪರಮಾರ್ಥದಲ್ಲಿ ಉಲ್ಲಸಿತರಾಗಿಯೂ ಪ್ರಪಂಚದಲ್ಲಿ ಉದಾಸೀನರಾಗಿಯೂ ಇದ್ದರೂ, ಅವರು ತಮ್ಮ ಪ್ರಪಂಚ ವನ್ನು ಉಪೇಕ್ಷಿಸದೆ, ಅದನ್ನು ದಕ್ಷತೆಯಿಂದಲೂ, ವಿವೇಕದಿಂದಲೂ ನಡೆಯಿಸಿದರು, ಪ್ರಪಂಚವನ್ನು ಸಾಗಿಸುತ್ತಿರುವಾಗ ಅವರು ಯಾವ ದುರ್ಗುಣವನ್ನು ಮುಟ್ಟದೆ, ಪ್ರತಿಯೊಂದು ಸದ್ಗುಣವನ್ನು ಆಚರಣೆಯಲ್ಲಿ ಇಳಿಸಿದರು. ಮುಂದೆ ತಮ್ಮ ಮಕ್ಕಳು ದೊಡ್ಡವರಾದ ಮೇಲೆ ಪ್ರಪಂಚ ವನ್ನು ಅವರಿಗೆ ಒಪ್ಪಿಸಿ, ಅವರು ಆತ್ಮಚಿಂತನೆಯಲ್ಲಿ ಮಗ್ನರಾದರು. (+) ಶ್ರೀನಿಂಬರಗಿ ಮಹಾರಾಜರವರ ಜೀವನದಲ್ಲಿ ಬಾಹ್ಯ ದೃಷ್ಟಿಯಿಂದ ಮಹತ್ವದ ಸಂಗತಿಗಳು ಜರಗದಿದ್ದರೂ, ಪರಮಾರ್ಥದ ದೃಷ್ಟಿಯಿಂದ ಉದ್ಯೋಧಕವಾದ ಅನೇಕ ಸಂಗತಿಗಳು ಒದಗಿದವು. ಅವುಗಳಲ್ಲಿಯ ಕೆಲವನ್ನು ಕೆಳಗೆ ಕಾಣ ಸಿರುವೆವು. d n. ಒಂದು ದಿನ ಮಹಾರಾಜರವರು ನಿಂಬರಗಿ ಊರ ನೆರೆಯಲ್ಲಿದ್ದ ಒಂದು ಬಾವಿಗೆ ಜಳಕಕ್ಕಾಗಿ ಹೋಗಿದ್ದರು. ಬಾವಿಯಲ್ಲಿ ಇಳಿಯುವ ದಾರಿಯು ಬಲು ಇಕ್ಕಟ್ಟಿನದೂ ಬಿಕ್ಕಟ್ಟಿ ನದೂ ಇದ್ದಿತು. ದಾರಿಯ ಎರಡೂ ಬದಿಗಳಲ್ಲಿ ಘಡಗಳ್ಳಿಯು ಬೆಳೆದಿದ್ದಿತು. ಜಳಕ ಮಾಡಿ ಅರ್ಧದಾರಿ ಏರಿ ಬರುವಷ್ಟರಲ್ಲಿ, ಒಂದು ದೊಡ್ಡ ನಾಗರ ಹಾವು, ಹೆಡೆಯನ್ನು ತೆಗೆದು ಪೂತ್ಕರಿಸುತ್ತ ಕೆಳಗೆ ಬರುತ್ತಿರುವದನ್ನು ಅವರು ಕಂಡರು, ಮರಳಿ ಹೋಗ ಬೇಕೆಂದರೆ ಕೆಳಗೆ ಆಳವಾದ ನೀರು; ಬದಿಗೆ ಸಾಗಬೇಕೆಂದರೆ ಅಲ್ಲಿ ದಟ್ಟವಾಗಿ ಬೆಳೆದ ಘಡಗಳ್ಳಿ ; ಮೇಲೆ ಅಂತೂ ತಮ್ಮೆಡೆಗೆ ಸಾಗಿಬರುವ ಹೆಬ್ಬಾವು ; ಇಂಥ ಸಂಕಟದಲ್ಲಿ ಮಹಾಜರವರು ಕಂಗಳನ್ನು ಮುಚ್ಚಿ ಭಗವಂತನ ಧ್ಯಾನವನ್ನು ಮಾಡಿದರು. ಕೆಲಕಾಲದ ನಂತರ ಕಂಗಳನ್ನು ತೆರೆದು ನೋಡಲು, ಹಾವು ಹೋಗಿ ಬಿಟ್ಟಿತ್ತು. ಆಗ ಪರಮಾತ್ಮನ ನಾಮದ ಅಗಾಧ ಮಹಿಮೆಯನ್ನು ಬಣ್ಣಿಸಲು * ಓ೦ ನಾವು ಕಾಯ್ದುದು' ಎಂಬ ಪದವನ್ನು ರಚಿಸಿದರು. ( ಪದ ಕ್ರ. ೨ } 2