ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no ಪ್ರಸ್ತಾವನೆ ಕನಕನೆಂಬ ಹೆಸರಿನ ಬೇಡರ ಸಾಧುವೊಬ್ಬನಿದ್ದನು. ಸಾಧುತ್ವದ ಅಹಂಕಾರವು ಅವನ ತಲೆಗೆ ಏರಿತ್ತು. ಮಹಾರಾಜರವರನ್ನು ದ್ವೇಷಿಸು ತಿರುವ ನಿಂಬರಗಿಯ ಗೌಡತಿಯ, ಅಲ್ಲಿಯ ಕೆಲ ಗೊರವರೂ, ಅವರಿಗೆ ತಾಪಕೊಡಲು ಕನಕನನ್ನು ಹುರಿಗೊಳಿಸಿದರು. ಕನಕನು ಮಹಾರಾಜ ರವರೆಡೆಗೆ ಹೋಗಿ ಈ ರೀತಿ ನುಡಿದನು : “ ನೀನು ಸಾಧುವೆಂದು ಮೆರೆಯುವಿ, ಬ್ರಾಹ್ಮಣರಿಂದಲೂ ವಂದಿಸಿಕೊಳ್ಳುವಿ. ಇಂದು ನಿಜವಾದ ಸಾಧು ಯಾರೆಂಬುದನ್ನು ಪರೀಕ್ಷಿಸೋಣ. ನಾವಿಬ್ಬರೂ ಈ ಗುಡಿಯಲ್ಲಿಯ ಕೋಣೆಯಲ್ಲಿ ಸೆರೆಗೊಳ್ಳುವಾ, ಕೋಣೆಯ ಬಾಗಿಲನ್ನು ತೆರೆಯದೆ ಯಾರು ಹೊರಬರುವರು ನೋಡುವಾ ! ಹಾಗೆ ಹೊರಬಂದವನೇ ನಿಜವಾದ ಸಾಧು ! ” ಅದಕ್ಕೆ ಮಹಾರಾಜರವರು, “ ನಾನೇನು ಸಾಧು ಅಲ್ಲ, ನನಗೆ ಇಂಥ ಚಮತ್ಕಾರಗಳನ್ನು ಮಾಡಲು ಬರುವದಿಲ್ಲ. ಆದುದರಿಂದ ನನಗೆ ಈ ಗೊಂದಲದಲ್ಲಿ ಬೀಳುವ ಮನಸ್ಸಿಲ್ಲ.' ಎಂದು ಉತ್ತರವಿತ್ತರು. ಆದರೆ ಕನಕನು ತನ್ನ ಹಟವನ್ನು ಬಿಡಲೊಲ್ಲ. ಅದನ್ನು ಕಂಡು ಮಹಾರಾಜರು ಮರಳಿ ಮೇಲಿನಂತೆಯೆ ಹೇಳಿದರು. ಅದರಿಂದ ತುಂಬ ಉಬ್ಬಿದವನಾಗಿ ಕನಕನು ಸೆರೆಗೊಳ್ಳುವ ಬಗೆಗೆ ಬಹಳೇ ಹಟತೊಟ್ಟನು. ಇಷ್ಟಾದ ಮೇಲೆ ಮಹಾರಾಜರು : * ಆಗಲಿ ! ನಡೆ ! ನಾವು ಕೋಣೆಯಲ್ಲಿ ಬಂಧಿಸಿ ಕೊಳ್ಳುವಾ ! ಯಾರು ಹೊರಬರುವರೆಂಬುದನ್ನು ನೋಡುವಾ ! ” ಎಂದರು, ಮಸಲತ್ತು ತನ್ನ ಮೈಮೇಲೆಯೆ ಹೊರಳಿದುದನ್ನು ಕಂಡು ಕನಕನು,

  • ಇಂದು ಬೇಡ | ನಾಳೆ ನೋಡುವಾ !” ಎಂದನು. ಅದಕ್ಕೆ ಮಹಾರಾಜರು,
  • ಎಲೈ ! ನಾಳೆ ಎಂಬವನ ಮನೆ ಹಾಳು ! ನಾಳಿನ ಭರವಸವೇನು ? ?

ಎಂದು ಇತ್ತ ಉತ್ತರದಿಂದ ಕನಕನು ಸಿಟ್ಟಿಗೆದ್ದನು. ಅಪಶಬ್ದಗಳಿಂದ ಮಹಾರಾಜರವರನ್ನು ತುಂಬ ಅಪಮಾನಗೊಳಿಸಿ, ಅವನು ತನ್ನ ನಿವಾಸಕ್ಕೆ ತೆರಳಿದನು. ಕನಕನು ಹೋದ ಮೇಲೆ ಮಹಾರಾಜರು • ದೇವರೇ ! ನಾನು ಯಾವ ಅಪರಾಧವನ್ನೂ ಮಾಡದಿರಲು ಇವನು ನನ್ನನ್ನು ನೋಯಿಸಿ ನುಡಿದುದೇಕೆ ? ನೀನು ನಿನ್ನ ಭಕ್ತರಕ್ಷಕನೆಂಬ ಬಿರುದನ್ನು ಪಾಲಿಸು ಮತ್ತು ಯೋಗ್ಯವಾದ ನ್ಯಾಯವನ್ನು ನೀಡಯ್ಯಾ ! ” ಎಂಬ ಆಶಯದ

  • ನೋಯಿಸಿ ನುಡಿದನ್ಯಾಕೆ ' ಈ ಪದವನ್ನು ರಚಿಸಿ ಭಗವಂತನನ್ನು

ಪ್ರಾರ್ಥಿಸಿದರು. ( ಪದ ಕ್ರ. ೩). ಈ