ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪ-ಚರಿತ್ರ ಆಗ ದೇವರು ತಮ್ಮ ದೂರನ್ನು ಕೇಳಿದನೆಂಬುದು ಅವರ ಪ್ರತ್ಯಯಕ್ಕೆ ಬಂದಿತು, ಮರುದಿನ ಕನಕನು ತನ್ನ ಊರಿಗೆ ಹೋಗುವವನಿದ್ದನು. ಆದರೆ ಆ ದಿನ ರಾತ್ರಿಯಲ್ಲಿ ಅವನಿಗೆ ಮಾರಿಕಾ ಬೇನೆಯ ಉಪದ್ರವವಾಗಿ, ಸುಮಾರು ಮಧ್ಯರಾತ್ರಿಯಲ್ಲಿ ಅವನು ಬದುಕುವನೋ ಸಾಯುವನೋ ತಿಳಿಯದಂತೆ ಅವನ ಸ್ಥಿತಿಯಾಯಿತು. ಶ್ರೀಮಹಾರಾಜರವರನ್ನು ಕಾಡಿದ್ದ ರಿಂದಲೇ ತನಗೆ ಈ ಶಿಕ್ಷೆಯನ್ನು ಅನುಭವಿಸಬೇಕಾಯಿತೆಂಬುದು ಕನಕನಿಗೂ ಆತನ ಸಂಗಡಿಗರಿಗೂ ಹೊಳೆಯದಿರಲಿಲ್ಲ. ಆದ್ದರಿಂದ ಆತನನ್ನು ಕ್ಷಮಿಸ ಬೇಕೆಂದು ಬಿನ್ನವಿಸಲು ಅವನ ಶಿಷ್ಯರು ಮಹಾರಾಜರೆಡೆಗೆ ಬಂದರು. ಆಗ ಅವನನ್ನು ಅವನ ವಾಹನದ ಮೇಲೆ (!) ಕುಳ್ಳಿರಿಸಿ, ದಕ್ಷಿಣ ದಿಕ್ಕಿನಲ್ಲಿ ನಿಂಬರಗಿಯ ಸೀಮೆಯಾಚೆಗೆ ಒಯ್ದರೆ ಅವನು ಬದುಕಬಹುದು ಎಂದು ಮಹಾರಾಜರವರು ಹೇಳಿದರು. ಅದರಂತೆ ಮಾಡಲು ಕನಕನು ಬದುಕಿದನು 2. ಶ್ರೀಮಹಾರಾಜರವರು ನಿಂಬರಗಿಯ ಭೀಮರಾಯನ ಗುಡಿ- ಯಲ್ಲಿಯ ಬಿಳೇನಸಿದ್ಧನ ಓವರಿಯಲ್ಲಿ ಕುಳಿತು ಶ್ರೀರಾಮದಾಸ ಸ್ವಾಮಿಗಳ ದಾಸಬೋಧ ಗ್ರಂಥವನ್ನು ಓದಿಸಿ ನಿರೂಪಣವನ್ನು ಹೇಳುತ್ತಿದ್ದರು. ನೆರೆಯ ಓವರಿಯಲ್ಲಿ ಭೀಮಾಬಾಯಿ ಎಂಬ ಹೆಸರಿನ ಅವರ ಶಿಷ್ಯಯೊಬ್ಬಳು ಇರುತ್ತಿದ್ದಳು. ಒಮ್ಮೆ ಅವಳ ಬಂಗಾರದ ಬಳೆಗಳು ಕಳವಾದವು. ಆಗ ಫೌಜದಾರನಾಗಿದ್ದ ತನ್ನ ಅಣ್ಣ ಗುಂಡೋಪಂತನನ್ನು ಕರೆಯಿಸಿ, ಅವನಿಗೆ ಕಳವನ್ನು ಹುಡುಕಲು ಹೇಳಿದಳು ಅವನು “ ನಿನ್ನದು ಯಾರಮೇಲೆ ಯಾದರೂ ಸಂಶಯವಿದೆಯೇ ?' ಎಂದು ಕೇಳಲು, ಅವಳು “ ನನ್ನ ದು ಯಾರ ಮೇಲೆಯೂ ಸಂಶಯವಿಲ್ಲ. ಆದರೆ ಈ ಮುದುಕನು ನನ್ನ ಕೋಣೆಯ ನೆರೆಯಲ್ಲಿಯ ಓವರಿಯಲ್ಲಿ ದಿನಾಲು ಪುರಾಣ ಹೇಳಲು ಬರುತ್ತಿರುವನು, ಆತನು ನನ್ನ ಬಳೆಗಳನ್ನು ಕದ್ದಿರಬಹುದು' ಎಂದು ಉತ್ತರವನ್ನು ಕೊಟ್ಟಳು. ಫೌಜದಾರನು ಈ ಸಂಗತಿಯನ್ನು ನನ್ನತನ ದಿಂದ ಮಹಾರಾಜರವರಿಗೆ ತಿಳಿಸಿ ಅವರಿಗೆ ಚಾವಡಿಗೆ ಕರೆಯಿಸಿದನು. ಮತ್ತು ಅವರನ್ನು ಅಲ್ಲಿಯೇ ಕುಳ್ಳಿರಿಸಿದನು. ಅಂತರಂಗದ ಕುರುಹನ್ನರಿತು ಮಹಾರಾಜರು ನಗಹತ್ತಿದರು. ಕೆಲಕಾಲ ಕಳೆದಮೇಲೆ ಅವರನ್ನು ಸಂಗಡ ಕರೆದುಕೊಂಡು, ಪೌಜದಾರನು ರುಡತಿಗಾಗಿ ಅವರ ಮನೆಗೆ ಹೋದನು.